Advertisement

ಕುಂದಾಪುರ: ಮರಳು ಸಮಸ್ಯೆ ನಿವಾರಿಸಲು ಮನವಿ

01:00 AM Mar 15, 2019 | Team Udayavani |

ಕುಂದಾಪುರ: ತೀವ್ರ ಗೊಳ್ಳುತ್ತಿರುವ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ ಕಟ್ಟಡ ಕಾರ್ಮಿಕರ ಸಮಸ್ಯೆ ನಿವಾರಿಸಬೇಕು ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ಗುರುವಾರ ತಾಲೂಕಾಡಳಿತಕ್ಕೆ ಮನವಿ ಮಾಡಿದೆ.

Advertisement

ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇಲ್ಲಿನ ಶಾಸಿŒ ಸರ್ಕಲ್‌ನಲ್ಲಿ ಒಟ್ಟಾಗಿ ಮನವಿ ಸಲ್ಲಿಸಿದರು.

ಸಮಸ್ಯೆ ನಿವಾರಣೆಗಾಗಿ ಮಾ.14 ರಿಂದ ಹಗಲು ರಾತ್ರಿ ಧರಣಿ ನಡೆಸಲು ಚುನಾವಣಾ ಘೋಷಣೆಗೆ ಮುನ್ನವೇ ನಿರ್ಧರಿಸಿ 6 ಸಾವಿರ ಕರಪತ್ರ ಹಂಚಲಾಗಿತ್ತು. ಆದರೆ ಮುಷ್ಕರಕ್ಕೆ ಪರವಾನಗಿ ದೊರೆಯದ ಕಾರಣ ಮನವಿ ಮಾತ್ರ ನೀಡಲಾಗುತ್ತಿದೆ ಎಂದು ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಸುರೇಶ್‌ ಕಲ್ಲಾಗರ ತಿಳಿಸಿದರು. 

2018 ಜೂನ್‌ನಿಂದ ಮರಳು ದೊರೆಯದೇ ಕಟ್ಟಡ, ಹೊಯ್ಗೆ ಕಾರ್ಮಿಕರು, ಕಟ್ಟಡ ನಿರ್ಮಾಣಕಾರರು ತೊಂದರೆಗೆ ಒಳಗಾಗಿದ್ದಾರೆ. ಈವರೆಗೆ ಅನೇಕ ಹೋರಾಟಗಳು ನಡೆಸಿದಾಗ ಶೀಘ್ರ ಮರಳು ದೊರಕಿಸುವ ಹುಸಿ ಭರವಸೆ ದೊರಕಿದೆ. ಇನ್ನು ಈ ವರ್ಷ ಕೇವಲ 2 ತಿಂಗಳಷ್ಟೇ ಕೆಲಸ ಮಾಡಲು ಅವಕಾಶ ಇದೆ.

ಹೊಸದಾಗಿ 23 ಮರಳು ದಿಬ್ಬಗಳನ್ನು ಗುರುತಿಸಿದ್ದರೂ 2-3 ದಿನಗಳಲ್ಲಿ ಮರಳು ದೊರೆಯುತ್ತದೆ ಎಂದು ಹೇಳಿದ್ದರೂ ಮರಳು ಮಾತ್ರ ದೊರೆಯುತ್ತಿಲ್ಲ. ಜೂನ್‌ ನಂತರ ಮೀನುಗಾರಿಕಾ ಸಂತತಿ ವೃದ್ಧಿಗಾಗಿ ಮರಳುಗಾರಿಕೆ ಇಲ್ಲ. ನಂತರ ನದಿಯಲ್ಲಿ ನೀರು ಭರ್ತಿಯಾಗಿದೆ ಎಂದು, ಬಳಿಕ ಸಿಆರ್‌ಝೆಡ್‌ ಪ್ರದೇಶ ಎಂದು ಮರಳಿಗೆ ಅಡ್ಡಿ ಮುಗಿಯುವುದೇ ಇಲ್ಲ. ಈ ಮರಳಿನ ಅಭಾವದಿಂದಾಗಿ ಕಟ್ಟಡ ಕಾರ್ಮಿಕರಲ್ಲಿ ಅತೃಪ್ತಿ ಉಂಟಾಗಿದ್ದು ಚುನಾವಣಾ ಬಹಿಷ್ಕಾರ ಕೈಗೊಳ್ಳುವ ಸಾಧ್ಯತೆಯಿದೆ. ಜಿಲ್ಲಾದ್ಯಂತ 7,500ಕ್ಕೂ ಹೆಚ್ಚು ಸದಸ್ಯರಿದ್ದು ಈ ಕುರಿತು ಜಿಲ್ಲಾಡಳಿತ ಗಮನಹರಿಸಬೇಕಿದೆ. ಮರಳು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಪಡೆಯ ಬೇಕಾಗಿ ಬಂದಿದ್ದು ಸರಳವಾಗಿ ಪೂರೈಸುವಂತಾಗ ಬೇಕು. ಯುನಿಟ್‌ಗೆ 2,500 ರೂ.ಗಳಲ್ಲಿ ಮರಳು ಸಿಗುವಂತಾಗಬೇಕು, ವರ್ಷವಿಡಿ ಮರಳು ದೊರೆಯಬೇಕು, ಸರಕಾರ ಮಧ್ಯಪ್ರವೇಶ 
ಮಾಡಬೇಕು ಎಂದು ಬೇಡಿಕೆಗಳನ್ನು ಇಡಲಾಯಿತು.

Advertisement

ಸಂಘಟನೆ ಅಧ್ಯಕ್ಷ ಯು. ದಾಸ ಭಂಡಾರಿ, ಮುಖಂಡ ರಾದ ನರಸಿಂಹ, ವೆಂಕಟೇಶ ಕೋಣಿ, ರಾಮಚಂದ್ರ ನಾವಡ ಮೊದಲಾದವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next