Advertisement

ಡಿ.31: ನವಯುಗ ವಿರುದ್ಧ ಕಪ್ಪು ಪಟ್ಟಿ ಧರಿಸಿ ವಿಶ್ವಾದ್ಯಂತ ಪ್ರತಿಭಟನೆ

12:37 AM Dec 04, 2019 | Lakshmi GovindaRaju |

ಕುಂದಾಪುರ: ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿ ಎಂಬ್ಯಾಕ್‌ವೆುಂಟ್‌ ಬದಲಿಗೆ ಸ್ಥಳೀಯರ ಒತ್ತಾಯದಂತೆ ಕೇಂದ್ರ ಸರಕಾರದ ಗಮನ ಸೆಳೆದು ಫ್ಲೈಓವರ್‌ ಮಾಡಲಾಗಿದೆ. ನನೆಗುದಿಗೆ ಬಿದ್ದಿರುವ ಇದನ್ನು ಪೂರ್ಣಗೊಳಿ ಸಲು ದಿಲ್ಲಿಯಲ್ಲಿ ಸಚಿವರ ಬಳಿಯೇ ಮನವಿ ಸಲ್ಲಿಸಬೇಕಿದ್ದು ಸಂಸದರು, ಶಾಸಕರು, ಹೋರಾಟ ಸಮಿತಿಯವರ ಜತೆಗೂಡಿ ಸಂಪೂರ್ಣ ಸಹಕರಿಸುವುದಾಗಿ ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.

Advertisement

ಅವರು ಮಂಗಳವಾರ ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯ ಫ್ಲೈಓವರ್‌ ತಳಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಮಾತನಾಡಿದರು.
ಕುಂದಾಪುರ ರಾ. ಹೆ. ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಮಾತನಾಡಿ, ಯೋಜನೆಗೆ ನಿಗದಿಗಿಂತ ಹೆಚ್ಚು ಹಣ ಬಳಸಿದರೂ ಪ್ರಶ್ನಿಸುವವರಿಲ್ಲ. ಕೇವಲ 10.5 ಕಿ.ಮೀ. ಅಂತರದಲ್ಲಿ 2 ಟೋಲ್‌ಗೇಟ್‌ಗಳು ನಿರ್ಮಾಣವಾಗಿದ್ದರೂ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದರು.

ಹೆದ್ದಾರಿ ವಿಸ್ತರಣೆಯ ಮೂಲ ಯೋಜನೆಯಲ್ಲಿ ಬಸ್ರೂರು ಮೂರುಕೈ ಬಳಿ ಎಂಬ್ಯಾಕ್‌ವೆುಂಟ್‌, ಟಿ.ಟಿ. ರಸ್ತೆ ಬಳಿಯಲ್ಲಿ ಅಂಡರ್‌ಪಾಸ್‌ ನಿರ್ಮಾಣ ಮಾಡುವ ಯೋಜನೆಗಳೇ ಇದ್ದಿರಲಿಲ್ಲ. ಜನರ ಸಹನೆಯೇ ಜನಪ್ರತಿನಿಧಿಗಳಿಗೆ ವರವಾಗುತ್ತಿದೆ ಎಂದು ಹೋರಾಟ ಸಮಿತಿಯ ಕಿಶೋರ್‌ ಕುಮಾರ್‌ ಕುಂದಾಪುರ ಹೇಳಿದರು.

ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ, ಬಾಕಿ ಉಳಿದ ಕಾಮಗಾರಿ ಮುಗಿಸಲು ಡಿಸಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಸ್ಥಳೀಯ ಗುತ್ತಿಗೆದಾರರು, ಜೆಸಿಬಿ, ಹಿಟಾಚಿ ಯಂತ್ರಗಳ ಮಾಲಕರ ಸಹಕಾರ ಪಡೆದು ಕಾಮಗಾರಿ ಮುಗಿಸಲು ಹೋರಾಟ ಸಮಿತಿ ಸಹಕರಿಸಲಿದೆ ಎಂದರು.

ಡಿ.31ರಂದು ವಿಶ್ವಾದ್ಯಂತ ಕುಂದಾಪುರದವರು ಕುಂದಾಪುರದ ಸೌಂದರ್ಯ ಹಾಳುಗೆಡಹಿದ ನವಯುಗ ಕಂಪೆನಿಯ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಿದ್ದಾರೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್‌ ಕಾವೇರಿ ಹೇಳಿದರು.

Advertisement

ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ, ಎಚ್‌. ನರಸಿಂಹ, ವೆಂಕಟೇಶ ಕೋಣಿ, ಶಶಿಧರ ಹೆಮ್ಮಾಡಿ, ಎ.ಎಸ್‌.ಎನ್‌. ಹೆಬ್ಟಾರ್‌, ಶ್ಯಾಮ್‌ಸುಂದರ್‌ ಎನ್‌. ಮಾತನಾಡಿದರು.

ನಿತ್ಯಾನಂದ ಶೆಟ್ಟಿ ಅಂಪಾರು, ಗಣೇಶ್‌ ಮೆಂಡನ್‌, ಮಲ್ಯಾಡಿ ಶಿವರಾಮ್‌ ಶೆಟ್ಟಿ, ಕೆ. ಚಂದ್ರಶೇಖರ ಶೆಟ್ಟಿ ವಿನೋದ ಕ್ರಾಸ್ಟೊ, ಆಶಾ, ಕೇಶವ ಭಟ್‌, ಚಂದ್ರಶೇಖರ ಶೆಟ್ಟಿ, ಪುರಸಭಾ ಸದಸ್ಯರಾದ ದೇವಕಿ ಪಿ. ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಜಿ.ಕೆ. ಗಿರೀಶ್‌, ಅಬ್ಬು ಮಹಮ್ಮದ್‌, ಪ್ರಭಾವತಿ ಶೆಟ್ಟಿ, ಶ್ರೀಧರ ಗೋಲ್ಡನ್‌ಮಿಲ್ಲರ್‌, ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ವಿಟ್ಟಲ್‌ ಪೂಜಾರಿ ಸಾಸ್ತಾನ, ಪ್ರಶಾಂತ ಶೆಟ್ಟಿ ಸಾಸ್ತಾನ, ರಾಜೇಶ್‌ ಕೆ.ವಿ. ಪಾಂಡೇಶ್ವರ, ಟ್ರೋಲ್‌ ಕುಂದಾಪುರ ಕುಡಿ ಸಾಮಾಜಿಕ ಜಾಲ ತಾಣದ ವೈಭವ್‌, ಶಾಶ್ವತ್‌ ಶೆಟ್ಟಿ, ಅನಿಲ್‌ ಉಪ್ಪೂರು, ತಾ.ಪಂ. ಸದಸ್ಯ ವಾಸುದೇವ ಪೈ, ವಿದ್ಯುತ್‌ ಗುತ್ತಿಗೆದಾರ ಕೆ.ಆರ್‌. ನಾಯಕ್‌, ಗಣ್ಯರಾದ ಕೃಷ್ಣಪ್ರಸಾದ ಅಡ್ಯಂತಾಯ, ಅನಂತಕೃಷ್ಣ ಕೊಡ್ಗಿ, ರೋಟರಿ ಕ್ಲಬ್‌ ಮಿಡ್‌ಟೌನ್‌ ಕಾರ್ಯದರ್ಶಿ ಪ್ರವೀಣ್‌ ಉಪಸ್ಥಿತರಿದ್ದರು.

ನವಯುಗ ಭರವಸೆ
ಪ್ರತಿಭಟನೆ ನಡೆಯುತ್ತಿದ್ದಲ್ಲಿಗೆ ಆಗಮಿಸಿದ ಸಹಾಯಕ ಕಮಿಷನರ್‌ ಕೆ. ರಾಜು, ಕಾಮಗಾರಿ ಮುಗಿಯದಿದ್ದಲ್ಲಿ ಮಾ.31ರಿಂದ ಟೋಲ್‌ ಬಂದ್‌ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ವಾರಕ್ಕೊಮ್ಮೆ ಕಾಮಗಾರಿಯ ಬೆಳವಣಿಗೆ ವಿವರ ನೀಡಬೇಕು ಎಂದು ಸೂಚಿಸಿದರು. ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಕಂಪೆನಿ ಅಧಿಕಾರಿಗಳಲ್ಲಿ ಯೋಜನೆ ಮುಗಿಸುವ ಅವಧಿಯ ಸ್ಪಷ್ಟ ಭರವಸೆ ನೀಡಲು ಸೂಚಿಸಿದರು. ಪ್ರತಿಸ್ಪಂದಿಸಿದ ಹೆದ್ದಾರಿ ಎಂಜಿನಿಯರ್‌ ರಮೇಶ್‌, ನವಯುಗ ಎಂಜಿನಿಯರ್‌ ರಾಘವೇಂದ್ರ, ಮಾ.31ರ ಒಳಗೆ ಮುಗಿಸುವ ಭರವಸೆ ನೀಡಿದರು.

ಅಧಿಕಾರಿಗಳ ಉತ್ತರದಿಂದ ತೃಪ್ತರಾಗದ ಪ್ರತಿಭಟನಕಾರರು ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಮನವೊಲಿಸಿ ತಡೆದರು.

Advertisement

Udayavani is now on Telegram. Click here to join our channel and stay updated with the latest news.

Next