Advertisement

ಕುಂದಾಪುರ: 2 ಸಾವಿರ ರೂ.‌ನೋಟು ಕೇಳಿ, 52 ಸಾವಿರ ರೂ.‌ಕದ್ದ ಚಾಲಾಕಿ

07:32 PM Aug 12, 2022 | Team Udayavani |

ಕುಂದಾಪುರ : ತ್ರಾಸಿಯ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಡೀಸೆಲ್ ಹಾಕಿಸಲೆಂದು ಬಂದಿದ್ದವ, 2 ಸಾವಿರ ರೂ.ದು ನೋಟು ಇದೆಯಾ ಎಂದು ಕೇಳಿ, ಕ್ಯಾಶ್ ಡ್ರಾವರ್‌ನಲ್ಲಿದ್ದ 52 ಸಾವಿರ ರೂ. ಹಣವನ್ನು ಕದ್ದು, ಕಾರಿನಲ್ಲಿ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ತ್ರಾಸಿಯ ಪೆಟ್ರೋಲ್ ಬಂಕ್‌ನಲ್ಲಿ ಜೂ.19 ರಂದು ಸಂಜೆ 4.40 ರ ಸುಮಾರಿಗ ಹೊಂಡಾ ಅಮೇಜ್ ಕಾರಿನಲ್ಲಿ, ವಿದೇಶದ ವ್ಯಕ್ತಿಯಂತೆ ಕಾಣುವ ಅಪರಿಚಿತ ವ್ಯಕ್ತಿ ಡೀಸೆಲ್ ಹಾಕಿಸಲು ಬಂದಿದ್ದ. ಕಾರಿಗೆ 500 ರೂ. ಡೀಸೆಲ್ ಹಾಕಿಸಿ, ಬಳಿಕ ಕ್ಯಾಶ್ ಕೌಂಟರ್‌ನಲ್ಲಿದ್ದವರಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿ 2 ಸಾವಿರ ರೂ. ನೋಟು ಇದೆಯ ಎಂದು ಕೇಳಿದ್ದ. ಈ ವೇಳೆ ಕೌಂಟರ್‌ನಲ್ಲಿದ್ದವರು 1 ನೋಟು ಇದೆಯೆಂದು ಹೇಳಿದ್ದು, ಬೇರೆ ಕಡೆ ಡ್ರಾವರ್‌ನಲ್ಲಿದೆಯಾ ಎಂದು ಕೇಳಿದ್ದು, ಅವರು ಬೇರೆ ಕಡೆ ಗಮನ ಹರಿಸುವಂತೆ ಡ್ರಾವರ್‌ನಲ್ಲಿದ್ದ 52 ಸಾವಿರ ರೂ. ಅನ್ನು ಕಳ್ಳತನ ಮಾಡಿಕೊಂಡು, ಪರಾರಿಯಾಗಿದ್ದಾನೆ.

ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ಎಚ್‌ಪಿ ಕಂಪೆನಿಗೆ ದೂರು ನೀಡುವ ಪ್ರಕ್ರಿಯೆ ತಡವಾಗಿದ್ದರಿಂದ ಠಾಣೆಯಲ್ಲಿ ಕೇಸು ದಾಖಲು ವಿಳಂಬಗೊಂಡಿದೆ. ಪೆಟ್ರೋಲ್ ಬಂಕಿನ ಕ್ಯಾಶ್ ಕೌಂಟರ್‌ನಲ್ಲಿದ್ದ ಮನೋಜ್ ಎಂಬುವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next