ಭಾರತೀಯ ಪುರಾಣ ಪುರುಷ ಹೆಸರು ಕೇಳಿದರೆ ಸಾಕು ರೋಮಾಂಚನ ತರಿಸುವ ಕೃಷ್ಣ ಪರಮಾತ್ಮ ದೇವಕಿಯ ಎಂಟನೇ ಗರ್ಭ. ಎಂಟನೇ ಮಗುವಾಗಿ ಜನಿಸಿದವನು. ವಿಧಿಯ ಅಣತಿಯನ್ನು ಪಾಲಿಸುವ ಕೆಲವು ಪ್ರಾಕೃತಿಕ ವಿಚಾರಗಳು, ಒಂದು ರೀತಿಯ ಪವಾಡಗಳನ್ನು,ನಂಬಲಾಗದ ವಿಷಯಗಳನು,° ನಂಬುವಂತೆ ಮಾಡುವ ಅಂಶಗಳನ್ನು ನಮ್ಮ ಗಮನಕ್ಕೆ ಬರುವಂತೆ ಮಾಡುತ್ತದೆ. ತಂಗಿಯಾದ ದೇವಕಿಯನ್ನು ವಸುದೇವನ ಜೊತೆಗೆ ಮದುವೆ ನಡೆಸಿ ದಿಬ್ಬಣದ ಮೆರವಣಿಗೆ ರಾಜರಸ್ತೆಯಲ್ಲಿ ಸಂಭ್ರಮದಿಂದ ಕಂಸನ ಹಿರಿತನದಲ್ಲಿ ಸಾಗಿ ಹೋಗುತ್ತಿದ್ದಾಗ ಅಶರೀರವಾಣಿಯೊಂದು ನಭೋ ಮಂಡಲದಿಂದ ಉಕ್ಕಿ ಅಲೆಅಲೆಯಾಗಿ ಕೇಳಿ ಬರುತ್ತದೆ. ಸೊಕ್ಕಿನಿಂದ ಮೆರೆಯುತ್ತಿರುವ ಕಂಸನೇ ಈ ನಿನ್ನ ದೇವಕಿಯ ಅಷ್ಟಮ ಗರ್ಭ ನಿನ್ನ ಸಾವಿನ ಕುಣಿಕೆಯಾಗಿದೆ ಎಂಬುದಾಗಿ ಬಿತ್ತರಗೊಳ್ಳುತ್ತದೆ. ಕಂಸನು ಆಗಲೇ ಅಸುರೀ ಗುಣಧರ್ಮದಿಂದ ಕಂಸಾಸುರನೆಂದು ಹೆಸರಾಗುತ್ತಾನೆ.
Advertisement
ಅಶರೀರವಾಣಿಯ ನಂತರದ ಕತೆ ನಿಮಗೆಲ್ಲಾ ಗೊತ್ತೇ ಇದೆ. ಶುಕ್ಲಪಕ್ಷದ ಅಷ್ಟಮಿಯಂದೇ ಕೃಷ್ಣನ ಜನನ. ಕೃಷ್ಣನ ಜನನದ ದಿನವೂ ಕಂಸನ ನಾಶಕ್ಕಾಗಿ ಅಷ್ಟ ತಿಥಿಯ ಮೂಲಕ ಶಕ್ತಿ ಸಂಪಾದಿಸಲು ಕಾರಣವಾಯ್ತು. ಏನು, ಹೇಗೆ, ಎಂಬುದೆಲ್ಲಾ ಯೋಚಿಸಬೇಕಾದ ವಿಷಯ. ಕಂಸನ ಮರಣದ ವಿಚಾರ ಏನೇ ಇರಲಿ ಅಷ್ಟಮಭಾವ ಜನ್ಮ ಕುಂಡಲಿಯಲ್ಲಿ ಒಳಿತಾದುದಲ್ಲ. ಈ ಭಾವದ ಶಕ್ತಿ ಸಕಾರಾತ್ಮಕವಾಗಿದ್ದರೆ ತಾಪತ್ರಯದಾಯಕವಾಗಿರುವುದಿಲ್ಲ. ದುರ್ಮರಣಗಳು ಸಂಭವಿಸಲಾರವು. ಹೀಗಾಗಿ ಆಯುಷ್ಯದ ಬಗೆಗೆ ಆಯುಷ್ಯದ ಮುಕ್ತಾಯದ ಬಗೆಗೆ ಅನೇಕ ವಿಚಾರಗಳನ್ನು ಈ ಭಾವ ತಿಳಿಸಿಕೊಡುತ್ತದೆ. ಈ ಅಷ್ಟಮ ಭಾವದ ಜೊತೆಗೆ ಜಾತಕ ಕುಂಡಲಿಯ ಎರಡು, ಮೂರು ಹಾಗೂ ಹನ್ನೆರಡನೇ ಮನೆಗಳೂ ಕೆಲವು ಮಹತ್ವದ ಬೆಳಕನ್ನು ಚೆಲ್ಲುತ್ತದೆ. ಬಾಳ ಸಂಗಾತಿಯನ್ನು ಸೂಚಿಸುವ ಸಪ್ತಮಭಾವ ಕೂಡಾ ಅಷ್ಟಮದ ಕುರಿತಾಗಿ ಕೊಂಡಿಗಳನ್ನು ಪಡೆದಿರುತ್ತದೆ.
Related Articles
Advertisement
ಅಂತರಂಗದಲ್ಲಿ ಏಕಾಂಗಿ ಆದರೂ…ಪ್ರಧಾನಿ
ಅಷ್ಟಮಾಧಿಪತಿಯೇ (ಮರಣ ಸ್ಥಾನದ ಅಧಿಪತಿ)ಇಂದಿರಾರನ್ನು ಪ್ರಧಾನಿಯಾಗಿಸಿದ್ದು. ಆದರೆ ಪ್ರಧಾನಿಯಾದಲ್ಲಿಂದಲೂ ಇಂದಿರಾ ಬಲಿಷ್ಠೆಯಾಗಿ ಕಂಡರೇ ವಿನಾ ಅಂತರಂಗದಲ್ಲಿ ಏಕಾಂಗಿಯೇ ಇದ್ದರು. ದುಷ್ಟ ಶನಿ ಸುಖವನ್ನು ನೀಡಲು ಸಾಧ್ಯವೇ ಇಲ್ಲ. ಆದರೆ ಚಂದ್ರನಂಥ ಪ್ರಭಾವಿ ಗ್ರಹದೊಡನೆ ಪರಿವರ್ತನೆ ಸಾಧ್ಯವಾಗಿದ್ದರಿಂದ ಇಂದಿರಾ ಪಾಕಿಸ್ತಾನ ಇರಲಿ, ಅಮೆರಿಕಾವನ್ನೂ ಕಂಗೆಡಿಸಿದರು. ಸುಮಾರು 1969-70 ರಿಂದ 1977 ರವರೆಗೆ ವಿರೋಧ ಪಕ್ಷದ ಉಸಿರೇ ಇದ್ದಿರಲಿಲ್ಲ. ಆದರೆ ಇಂದಿರಾ ಸುಖವಾಗಿದ್ದರೇ ಎಂಬ ಪ್ರಶ್ನೆಗೆ ಇಲ್ಲ ಎಂಬುದೇ ಉತ್ತರ. ಅಧಿಕಾರದ ಕುರ್ಚಿಯಲ್ಲಿ ಚೂಪಾದ ಮುಳ್ಳುಗಳಿದ್ದವು. ಹೌದು, ಪ್ರಧಾನಿಯಾಗಿ ಅದ್ಭುತ ಪ್ರಭಾವಳಿ. ಆದರೆ ವ್ಯಕ್ತಿಯಾಗಿ ಅಂತರಂಗದಲ್ಲಿ ನೋವಿನ ದಳ್ಳುರಿ. ಶನಿ ಮಹಾರಾಜ ಭಾರತ ದೇಶದ ಏಕಚಕ್ರಾಧಿಪತ್ಯದ ದೀಕ್ಷೆ ನೀಡಿದ್ದು ಹೌದು. ಆದರೆ ಸುಖ ಸಾಧ್ಯವಿಲ್ಲ. ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗಲೇ ಲಾಲ್ ಬಹದ್ದೂರ್ ಶಾಸಿŒಯವರ ಅಕಾಲಿಕ ಮರಣದ ಬಗೆಗೆನ ಕೊಂಕು ಮಾತುಗಳು ಪ್ರತಿಕ್ರಿಯೆಗಳು ಇಂದಿರಾರನ್ನು ಸುಖವಾಗಿಡಲು ಹೇಗೆ ಸಾಧ್ಯ? ಇಂದಿರಾ ಜಾತಕದ ಗುರುಗ್ರಹ ತಂದೆಯಿಂದ ಅಗಾಧವಾದ ಪ್ರಭಾವ, ವಶೀಲಿ ಹೊಂದಲು ಬೇಡವೆಂದರೂ ಸಾಧ್ಯಮಾಡುವ ಸಂಪನ್ನತೆ ಕೊಟ್ಟಿದ್ದು ಸತ್ಯ. ಆದರೆ ಗುರುಗ್ರಹ ಇಂದಿರಾರನ್ನು ಸರ್ವತ್ರ ಮನ್ನಣೆಗೆ ಕಾರಣವಾಗಿ ಭವಿಷ್ಯದ ನಾಯಕಿಯನ್ನಾಗಿಸುವ ಅವಕಾಶ ಕೊಡಲಿಲ್ಲ. ಕೇರಳದ ನಂಬೂದರಿ ಅವರ ಕಮ್ಯೂನಿಷ್ಟ್ ಸರಕಾರ ಉರುಳಲು ಕಾರಣ ಇಂದಿರಾ ಎಂಬ ಅಪವಾದ ಹೊತ್ತು ಪರದಾಡಿದ್ದು ಇದೇ ಗುರು ಗ್ರಹದಿಂದಾಗಿ. ಇಂದಿರಾ ಒಳ್ಳೆಯ ಗ್ರಹದ ಸಹಾಯ ದೊರಕಿಸಿಕೊಂಡದ್ದು ಹೆಚ್ಚೇನಲ್ಲ. ಲಾಲ್ ಬಹದ್ದೂರ್ ಶಾಸಿŒ ಪ್ರಧಾನಿಯಾಗುವಾಗ ಇಂದಿರಾ ಹೆಸರು ಪ್ರಸ್ಥಾಪಿಸಲ್ಪಟ್ಟಿತ್ತು. ಆದರೆ ಗುರುಗ್ರಹಕ್ಕೆ ಇಂದಿರಾರನ್ನು ಪ್ರಧಾನಿ ಪಟ್ಟಕ್ಕೆ ವರಿಸುವ ಸಂಪನ್ನತೆ ಶಕ್ತಿಪೂರ್ಣವಾಗಿರಲಿಲ್ಲ. ಗುರುವಿನ ದುರ್ಬಲತೆಗೆ ಕಾರಣವಾಗಿದ್ದು ಶನೈಶ್ಚರ. ಶನೈಶ್ಚರನಿಂದಲೇ ಪ್ರಧಾನಿಯಾಗಿದ್ದು… ತಾನು ದುಷ್ಟನಾದರೂ ಶನೈಶ್ಚರ ಇಂದಿರಾರನ್ನು ಪ್ರಧಾನಿಯಾಗಿಸಿದ. ಮರಣಾಧಿಪತಿ ದಶಾದಲ್ಲಿ ಒಬ್ಬರು ಪ್ರಧಾನಿ ಪಟ್ಟ ಪಡೆಯುತ್ತಾರೆ ಎಂದಾದರೆ ಪ್ರಪಂಚದ ಅದ್ಭುತಗಳಲ್ಲಿ ಒಂದು. ಆದರೆ ಶನೈಶ್ಚರ ಇಂದಿರಾರನ್ನು ಸಖವಾಗಿ ಇರಿಸಿದ್ದನೇ? ಎಂದು ಕೇಳಿದರೆ ಉತ್ತರ ಕಷ್ಟ. ಇಡೀ ರಾಷ್ಟ್ರದ ದೊಡ್ಡ ಅಕ್ಷರಸ್ಥ ಗುಂಪು ಇಂದಿರಾ ವಿರುದ್ಧ ನಿಂತಿತ್ತು. ಮಾಧ್ಯಮಗಳು ಇಂದಿರಾ ಅವರನ್ನು ಟೀಕಿಸುತ್ತಲೇ ಇದ್ದವು. ಕಾಂಗ್ರೆಸ್ ಹೋಳಾಯ್ತು. ಸರ್ವಾಧಿಕಾರಿ ಹಿಟ್ಲರ್ ಎಂಬ ಪಟ್ಟಿ, ಹಿರಿಯ ಮಗನು ಪ್ರೀತಿಸಿದ ಸೋನಿಯಾ ವಿಚಾರ ಇಂದಿರಾಗೆ ಬಿಸಿತುಪ್ಪದ ಮಾತಾಗಿತ್ತು. ಇಂದಿರಾ ಹಾಗೂ ಫಿರೋಜ್ ಗಾಂಧಿ ವಿಷಯದಲ್ಲಿ ಇಂದಿರಾ ಎದುರಿಸಿದ ಮುಖಭಂಗದ ವಿಷಯ ಹಗುರವಾಗಿದ್ದಾಗಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದಾಗಿ ಬಂದ ಹಲವು ಪುಸ್ತಕಗಳು ಇಂದಿರಾರ ಖಾಸಗಿ ಜೀವನವನ್ನು ಮುಜುಗರ ಪಡಿಸುತ್ತಲೇ ಇದ್ದವು. ಇಂದಿರಾರ ಯೋಗ ಗುರು ಧೀರೇನ್ ಬ್ರಹ್ಮಚಾರಿ, ಸಂಪುಟದ ಸಹಮಂತ್ರಿ ದಿನೇಶ ಸಿಂಗ್, ತಂದೆ ಜವಾಹರರ ಸಹವರ್ತಿ ಮಥಾಯ್ ಇತ್ಯಾದಿ ವಿಚಾರಗಳು ಇಂದಿರಾರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದವು. ಸಂಜಯ್ ಗಾಂಧಿ ವಿಚಾರದಲ್ಲಿ ಇಂದಿರಾ ಖನ್ನರಾಗುತ್ತಿದ್ದರು ಎಂಬ ಪ್ರಚಾರ ಯಾವ ತಾಯಿಗೆ ಸಂಭ್ರಮದ ವಿಷಯವಾಗುತ್ತದೆ? ತಾಯಿಯ ಮಾತುಗಳನ್ನು ಮಗ ಕೇಳಿಸಿಕೊಳ್ಳುತ್ತಲೇ ಇರಲಿಲ್ಲ ಎಂಬುದು ಎಲ್ಲರ ಅಭಿಪ್ರಾಯ. ಸಂಜಯ್ ಸಾವಿನ ನಂತರ ಮೇನಕಾ ಗಾಂಧಿಯವರ ನಡೆ ಇಂದಿರಾರನ್ನು ತೀವ್ರವಾದ ಅಸಹಾಯಕತೆಗೆ ತಳ್ಳಿತ್ತು ಎಂಬ ಸುದ್ದಿ ಇಂದಿರಾ ಸುಖವಾಗಿದ್ದರು ಎಂಬುದನ್ನು ಹೇಗೆ ದೃಢಪಡಿಸುತ್ತದೆ? ತುರ್ತು ಪರಿಸ್ಥಿತಿಯ ಕಾರಣ ಇಂದಿರಾ ಖಳನಾಯಕಿಯಾದರು. ಸಿಖ್ ಪ್ರತ್ಯೇಕತಾ ಚಳವಳಿ ಅವರ ಪ್ರಾಣಕ್ಕೆ ಕುತ್ತು ತಂತು. ಈಗ ಹೇಳಿ ಜನ್ಮ ಕುಂಡಲಿಯ ಅಷ್ಟಮ ಭಾವ ಅರಿಷ್ಟಧ್ದೋ, ಸ್ವಾದಿಷ್ಟಧ್ದೋ?