Advertisement

ಕತಗಾಲದಲ್ಲೊಂದು  ಕಲಾಶ್ರೀ-ಸತ್ಸಂಗ ಭವನ

05:00 PM Sep 16, 2018 | Team Udayavani |

ಕುಮಟಾ: ಕತಗಾಲದ ಕಲಾಶ್ರೀ ಎಂಬ ಗ್ರಾಮೀಣ ಭಾಗದಲ್ಲಿ ಚಿಗುರೊಡೆದ ಸಂಸ್ಥೆಯೊಂದು ಸಂಗೀತ ವರ್ಗ, ಪರೀಕ್ಷಾ ಕೇಂದ್ರ, ಪುಸ್ತಕ-ಸಿಡಿ ಪ್ರಕಟಣೆ, ವಿವಿಧ ಕಾರ್ಯಾಗಾರ, ಅಹೋರಾತ್ರಿ ಸಂಗೀತ ಸಮ್ಮೇಳನ, ಸಂಸ್ಕಾರ ಶಿಬಿರ, ಯೋಗ, ವೇದಗಣಿತ, ದೇಶಭಕ್ತಿಗೀತೆ ಅಭಿಯಾನಗಳ ಮೂಲಕ ಬಹುಮುಖ ಜ್ಞಾನ, ಕಲೆ, ಸಂಸ್ಕೃತಿ ಪ್ರಸಾರ ಮಾಡಿದ ಕೀರ್ತಿಗೆ ಪಾತ್ರವಾಗುತ್ತಿದೆ.

Advertisement

ಸ್ಥಾಪನೆ: ಕುಮಟಾ- ಶಿರಸಿ ಮಾರ್ಗದಲ್ಲಿ ಕತಗಾಲ ಬಸ್‌ ನಿಲ್ದಾಣಕ್ಕೆ ಸನಿಹವೇ ಸತ್ಸಂಗ ಭವನದಲ್ಲಿರುವ ಕಲಾಶ್ರೀ ವೇದಿಕೆ 2005 ರಲ್ಲಿ ಗೋರೆ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉದಯಿಸಿತ್ತು. ಗ್ರಾಮೀಣ ಪ್ರದೇಶದ ಸಹೃದಯರಿಗೆ ಕಲಾ-ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಮಹೋದ್ದೇಶ ಹೊಂದಲಾಗಿತ್ತು. ಕಲಾ ದದಾತಿ ಸಂತೋಷಮ್‌ ಎಂಬುದು ಸಂಸ್ಥೆಯ ಧ್ಯೇಯವಾಕ್ಯ. ಸಂಗೀತ- ತಬಲಾ ವರ್ಗ ನಡೆಯುತ್ತದೆ. ವಿವೇಕ ಜಾಲಿಸತ್ಗಿ  ಮೊದಲ ಅಧ್ಯಕ್ಷರು. ಬಳಿಕ ಡಾ| ಕೆ. ಗಣಪತಿ ಭಟ್ಟರು ಅಧ್ಯಕ್ಷರಾಗಿ ಕತಗಾಲವನ್ನು ಸಾಂಸ್ಕೃತಿಕವಾಗಿ ನಾಡಿಗೆ ಪರಿಚಯಿಸುತ್ತಿದ್ದಾರೆ. ಸದ್ಯ ನಿವೃತ್ತ ಶಿಕ್ಷಕ ಎಚ್‌.ಎನ್‌. ಅಂಬಿಗ ಅಧ್ಯಕ್ಷರಾಗಿದ್ದಾರೆ.

ಸನ್ಮಾನ: ಕಳೆದ 10 ವರ್ಷಗಳಲ್ಲಿ ಸಂಗೀತಕ್ಷೇತ್ರದ ದಿಗ್ಗಜರಾದ ಡಾ| ಗಂಗೂಬಾಯಿ ಹಾನಗಲ್‌, ಡಾ| ಎನ್‌. ರಾಜಂ, ಪಂ| ವಸಂತ ಕನಕಾಪುರ, ಪಂ| ವೆಂಕಟೇಶಕುಮಾರ, ಸಜ್ಜನ ಗಾಯಕ ಚಂದ್ರಶೇಖರ ಪುರಾಣಿಕಮಠ, ವಿದ್ವಾನ್‌ ಜಿ.ಆರ್‌. ಭಟ್ಟ ಬಾಳೇಗದ್ದೆ, ವಿದ್ವಾನ್‌ ನಾರಾಯಣಪ್ಪ ಸೊರಬ, ವಿದುಷಿ ಲಲಿತ ಜೆ ರಾವ, ನಾಟ್ಯಭರತ ಡಿಡಿ ನಾಯ್ಕ ಹೊನ್ನಾವರ, ಎಸ್‌. ಶಂಭು ಭಟ್ಟ ಕಡತೋಕಾ, ನಾಟ್ಯವಿದುಷಿ ಕುಮುದಿನಿ ರಾವ, ತಬಲಾ ಮಾಂತ್ರಿಕ ಪಂ| ರಘುನಾಥ ನಾಕೋಡ ಧಾರವಾಡ, ವಾದ್ಯ ತಂತ್ರಜ್ಞ ಡಿ. ರಾಮಚಂದ್ರ ಚಿತ್ರಗಿ, ಯಕ್ಷಗಾನ ಸಾಧಕ ಕೃಷ್ಣ ಹಾಸ್ಯಗಾರ, ಹಿರಿಯ ಗಾಯಕ ಬೆಳ್ತಂಗಡಿ ಗುರುನಾಥ ಭಟ್ಟರ ಕಾರ್ಯಕ್ರಮಗಳನ್ನು ಸಂಯೋಜಿಸಿ, ಸನ್ಮಾನಿಸಿದೆ. ಕರ್ಕಿ ದೈವಜ್ಞಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಹಳದಿಪುರದ ವಾಣಿ ವೈಶ್ಯಮಠದ ವಾಮನಾಶ್ರಮ ಸ್ವಾಮಿಗಳು ಆಗಮಿಸಿ ಹರಸಿದ್ದಾರೆ.

ಪ್ರಕಟಣೆಗಳು: ಇಲ್ಲಿ ಪ್ರಕಟಿಸಿದ 70 ರಾಗಗಳ ಮಾಹಿತಿಗಳನ್ನು ಒಳಗೊಂಡ ರಾಗ ಕೈಪಿಡಿ ಪುಸ್ತಿಕೆ, ದೂರವಾಣಿ ಕೈಪಿಡಿ, ದೇಶಭಕ್ತಿಗೀತೆ, ಸಂಸ್ಕೃತಗಾನಧುನಿ ಪುಸ್ತಕ ಹಾಗೂ ಧ್ವನಿಮುದ್ರಿಕೆಗಳು ಮಹತ್ವ ಪಡೆದಿದೆ. ಸಂಸ್ಕಾರ ಶಿಬಿರ: ಬೇಸಿಗೆಯಲ್ಲಿ ಮಕ್ಕಳಿಗಾಗಿ ರಾಜ್ಯಮಟ್ಟದ ವಸತಿ ಸಹಿತ ಸಂಸ್ಕಾರ ಶಿಬಿರಗಳನ್ನು ವಿವಿಧೆಡೆ ಏರ್ಪಡಿಸಿ 500 ಶಿಬಿರಾರ್ಥಿಗಳಿಗೆ ಜೀವನ ಶಿಕ್ಷಣ ಕಲೆಯನ್ನು ಬೋಧಿಸಿದೆ. 2006 ರಲ್ಲಿ ಕನಕಜಯಂತಿ ಸಂದರ್ಭದಲ್ಲಿ ಕಾಗಿನೆಲೆಗೆ ಸಂಗೀತಪ್ರವಾಸ ಕೈಗೊಳ್ಳಲಾಗಿತ್ತು. 2011ರಲ್ಲಿ ಕುಮಟಾ ತಾಲೂಕಿನ ಎಲ್ಲ ಪೌಢಶಾಲೆಗಳಲ್ಲಿ ದೇಶಭಕ್ತಿಗೀತೆ ತರಬೇತಿ, 2012ರಲ್ಲಿ ಅಭಂಗ ತರಬೇತಿ, 2013ರಲ್ಲಿ ಪ್ರಕೃತಿ ಚಿಕಿತ್ಸಾ ಶಿಬಿರ ಏರ್ಪಡಿಸಿದೆ. 2014ರಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಾಗಾರ, 2015ರಲ್ಲಿ ಯೋಗಸಪ್ತಾಹ, 2016ರಲ್ಲಿ ನ್ಯಾ| ರಾಮಾ ಜೋಯಿಸರ ಉಪನ್ಯಾಸಗಳು ನಡೆದಿವೆ. ಶುದ್ಧಕುಂಕುಮ ಪ್ರಾತ್ಯಕ್ಷಿಕೆ ನಡೆಸಿದೆ. ವಿದ್ಯಾರ್ಥಿಗಳಿಗೆ ಟಿಪ್ಪಣಿ ಪುಸ್ತಕ ವಿತರಿಸಿದೆ.

ಇದಲ್ಲದೇ ಅಖಿಲ ಭಾರತೀಯ ಗಾಂಧರ್ವ ಮಹಾಮಂಡಳ(ಮೀರಜ) ಪರೀಕ್ಷಾ  ಕೇಂದ್ರವನ್ನು ಸಂಸ್ಥೆ ನಿರ್ವಹಿಸುತ್ತಿದೆ. ಪರೀಕ್ಷಾ  ಸಂದರ್ಭದಲ್ಲಿ ಅಹೋರಾತ್ರಿ ವಿವಿಧ ಅತಿಥಿ ಕಲಾವಿದರಿಂದ, ಪರೀಕ್ಷಾರ್ಥಿಗಳಿಂದ, ಪರೀಕ್ಷಕರಿಂದ, ಅಧ್ಯಾಪಕರಿಂದ ಶಾಸ್ತ್ರೀಯ ನಾದಾರಾಧನೆ ಜರುಗುತ್ತದೆ. ಕತಗಾಲ ಸುತ್ತಮುತ್ತಲು ಭರತನಾಟ್ಯ, ಸಂಗೀತ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿದೆ. ಸಂಸ್ಥೆಗೆ ಹಲವರು ಬೆನ್ನೆಲುಬಾಗಿದ್ದಾರೆ.

Advertisement

ಶಂಕರ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next