Advertisement

Kumta; ಧ್ವಜಾರೋಹಣಕ್ಕೆಂದು ಹೋಗುತ್ತಿದ್ದ ಶಿಕ್ಷಕ ರಸ್ತೆ ಅಪಘಾತದಲ್ಲಿ ನಿಧನ

06:26 PM Aug 15, 2023 | Team Udayavani |

ಕಾರವಾರ: ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆಂದು ಬೈಕ್ ನಲ್ಲಿ ಶಾಲೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರಿಗೆ ಬೋಲೆರೋ ವಾಹನ ಡಿಕ್ಕಿ ಹೊಡೆದು ಶಿಕ್ಷಕ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹಳಕಾರ ಕ್ರಾಸ್ ಸಮೀಪ‌ ನಡೆದಿದೆ.

Advertisement

ಅಪಘಾತದಲ್ಲಿ ಹೆಗಡೆ ಗ್ರಾಮದ ಮೇಲಿನಕೇರಿ ನಿವಾಸಿ, ಶಿಕ್ಷಕ ಗೋಪಾಲ ಪಟಗಾರ (50) ಎಂಬುವವರೆ ಮೃತಪಟ್ಟ ದುರ್ದೈವಿ. ಗೋಪಾಲ ಅವರು ಗುಡೆಅಂಗಡಿ ಶಾಲೆ ಶಿಕ್ಷಕರಾಗಿದ್ದು, ಧ್ವಜಾರೋಹಣಕ್ಕಾಗಿ ಬೆಳಿಗ್ಗೆ ಹೆಗಡೆಯ ಮೇಲಿನ ಕೇರಿಯಲ್ಲಿರುವ ತಮ್ಮ ಮನೆಯಿಂದ ಬೈಕ್ ನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಬೋಲೆರೋ ವಾಹನ ಬೈಕ್ ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಶಿಕ್ಷಕ ಗೋಪಾಲ ಪಟಗಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕುಮಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next