Advertisement

ಕುಂಬ್ರ: ರೈತರಿಗೆ ಪರಿಹಾರ ಪೂರ್ವಭಾವಿ ಸಭೆ

02:10 PM Feb 25, 2017 | Team Udayavani |

ಕುಂಬ್ರ : ಕಬಕ- ಮಾಡಾವು ವಿದ್ಯುತ್‌ ಸಂಪರ್ಕದ ತಂತಿ ಅಳವಡಿಸುವಾಗ ಪ್ರದೇಶದ ರೈತರ ಬೆಳೆಗಳಿಗೆ ಪರಿಹಾರವನ್ನು ನೀಡಲು ಅಂದಾಜು ಮಾರ್ಗಸೂಚಿ ತಯಾರಿಯ ಪೂರ್ವಭಾವಿ ಸಭೆ ಕುಂಬ್ರ ರೈತ ಸಭಾ ಭವನದಲ್ಲಿ ರೈತ ಮುಖಂಡರ ನೇತೃತ್ವದಲ್ಲಿ ನಡೆಯಿತು.

Advertisement

ಸಭೆಯಲ್ಲಿ ಕೆಪಿಟಿಸಿಎಲ್‌ನ ಅಧಿಕಾರಿಗಳಾದ ಸತೀಶ್‌, ವಿನೋದ್‌, ಬಸವರಾಜ್‌ ಪಾಲ್ಗೊಂಡಿದ್ದರು. ರೈತ ಮುಖಂಡ ಶೇಖರ ರೈ ಮಾತನಾಡಿ, ಅಭಿವೃದ್ಧಿಗೆ ವಿರೋಧ ಇಲ್ಲ. ಆದರೆ ರೈತರಿಗೆ ಸೂಕ್ತ ಪರಿಹಾರ ನೀಡದೆ ಕಾಮಗಾರಿ ಪ್ರಾರಂಭಿಸಬಾರದು. ರೈತರು ಶ್ರಮಪಟ್ಟ ದುಡಿಮೆಗೆ ಪರಿಹಾರ ಮೊತ್ತ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡ ಶ್ರೀಧರ್‌ ರೈ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿನೋದ್‌ ಶೆಟ್ಟಿ ಅರಿಯಡ್ಕ ಉಪಸ್ಥಿತರಿದ್ದರು. ಬೆಳೆಗಳಿಗೆ ನೀಡಲಾಗುವ ವಿವಿಧ ಪರಿಹಾರ ಮೊತ್ತ ತಿಳಿಸಲಾಯಿತು. 100ಕ್ಕೂ ಅಧಿಧಿಕ ರೈತರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next