Advertisement

ಕುಂಬ್ಳೆಗೆ ಕನಿಷ್ಠ 10 ಕ್ರಿಕೆಟಿಗರ ವಿರೋಧ?

02:48 PM Jun 08, 2017 | Harsha Rao |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಹಾಲಿ ಕೋಚ್‌ ಅನಿಲ್‌ ಕುಂಬ್ಳೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ದಿನಕ್ಕೊಂದು ರೀತಿಯ ವರದಿಗಳು ಬರುತ್ತಿವೆ. ಕೋಚ್‌ ಜತೆಗೆ ನಾಯಕ ಕೊಹ್ಲಿ ಸಂಬಂಧ ಪೂರ್ತಿ ಹಳಸಿದೆ, ಅವರು ಕುಂಬ್ಳೆ ಬದಲು ಬೇರೊಬ್ಬರನ್ನು ನೇಮಿಸಿ ಎಂದು ಹೇಳಿದ್ದಾರೆಂಬ ವರದಿಗಳು ಈ ಹಿಂದೆ ಪ್ರಕಟವಾಗಿದ್ದವು. ಇದರ ಬೆನ್ನಲ್ಲೇ ಕುಂಬ್ಳೆಯನ್ನು ಭಾರತ  ತಂಡದ 10 ಆಟಗಾರರು ವಿರೋಧಿಸಿದ್ದಾರೆ, ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಬೇಕೆಂದು ಒತ್ತಾಯಿಸಿದ್ದಾರೆಂದು ವರದಿಯಾಗಿದೆ.

Advertisement

ಕುಂಬ್ಳೆಯ ಆಜ್ಞೆ ಮಾಡುವ ಸ್ವಭಾವ, ಗಾಯದ ಸಂದರ್ಭದಲ್ಲಿ ಅತ್ಯಂತ ಅಮಾನವೀಯವಾದ ನಿಯಮಗಳನ್ನು ಹೇರುವುದು ತಪ್ಪು ಎಂದು ಆಟಗಾರರು ಹೇಳಿದ್ದಾರೆ. ಕುಂಬ್ಳೆ ಬಹಳ ಕಠಿನ ನಿಯಮಗಳನ್ನು ಹೇರುತ್ತಿರುವುದರಿಂದ ಇದನ್ನು ಆಟಗಾರು ಒಪ್ಪುತ್ತಿಲ್ಲ ಎನ್ನಲಾಗಿದೆ. 

ಕುಂಬ್ಳೆ ಕೋಚ್‌ ಆದ ಅನಂತರ ಭಾರತ ಟೆಸ್ಟ್‌ ಸರಣಿ ಸೋತಿಲ್ಲ. ಇಂಥ ಯಶಸ್ವಿ ಹಿನ್ನೆಲೆಯಿದ್ದರೂ ಅವರನ್ನು ವಿರೋಧಿಸುತ್ತಿದ್ದಾರೆಂಬುದು ಆಶ್ಚರ್ಯ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next