Advertisement

ಕುಂಭಾಸಿ ಶ್ರೀ ಚಂಡಿಕಾ ದೇಗುಲ : ಅಯೋಧ್ಯೆಗೆ ಜಲ,ಶಿಲೆ, ಮೃತ್ತಿಕೆ

09:39 PM Jul 30, 2020 | sudhir |

ತೆಕ್ಕಟ್ಟೆ : ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮಮಂದಿರಕ್ಕೆ ದೇಶದ ಮೂಲೆ ಮೂಲೆಗಳಿಂದ ಪವಿತ್ರ ನದಿ, ಕ್ಷೇತ್ರಗಳಿಂದ ಜಲ, ಮೃತ್ತಿಕೆ, ಶಿಲೆಗಳನ್ನು ಕಳುಹಿಸಿಕೊಡಲಾಗುತ್ತಿದೆ.

Advertisement

ಶ್ರೀ ರಾಮಸೇನೆ ಕರ್ನಾಟಕ ಇದರ ವತಿಯಿಂದ ಕರ್ನಾಟಕದ ಹೆಮ್ಮೆಯ ಹನುಮನ ಜನ್ಮಸ್ಥಳ ಅಂಜನಾದ್ರಿಯಿಂದ ರಾಮನ ಜನ್ಮಸ್ಥಳ ಅಯೋಧ್ಯೆಗೆ ಶಿಲೆ, ಮೃತ್ತಿಕೆ, ಜಲವನ್ನು ಕಳುಹಿಸಿಕೊಡಲಾಗುತ್ತಿದೆ.ಈ ಹಿನ್ನೆಲೆೆಯಲ್ಲಿ ಜು.30 ರಂದು ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ದೇವಳದ ಪ್ರಧಾನ ಅರ್ಚಕ ಆನಂತ ಪುರಾಣಿಕ್‌ ಅವರ ನೇತೃತ್ವದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ , ದೇಗುಲದ ಮೋಹನ್‌ ಎಂ.ಶೇರೆಗಾರ್‌, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್‌ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್‌ , ದೇವಳದ ವ್ಯವಸ್ಥಾಪಕರಾದ ರಾಜಶೇಖರ್‌ ಹೆಗ್ಡೆ, ಉದ್ಯಮಿ ಸುರೇಶ್‌ ಬೆಟ್ಟಿನ್‌, ಕೊರ್ಗಿ ವಿಠಲ್‌ ಶೆಟ್ಟಿ ಹಾಗೂ ರಾಜ್ಯ ನಾಯಕರು ಹಾಗೂ ಶ್ರೀ ರಾಮಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಅವರನ್ನು ದೇವಳದ ವತಿಯಿಂದ ಗುರುತಿಸಿ ಸಮ್ಮಾನಿಸಲಾಯಿತು.

ಚಿತ್ರಗಳು : ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next