Advertisement
ಸಂಭ್ರಮಾಚರಣೆ: ಮತ ಎಣಿಕೆಯಲ್ಲಿ 10 ಸುತ್ತಿನ ನಂತರ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಗೆಲುವು ಬಹುತೇಕ ಖಚಿತಗೊಂಡಿದ್ದರಿಂದ ಹೆಗಡೆ ವೃತ್ತದ ಬಳಿ ಹಾಗೂ ಸನಿಹಲ್ಲಿರುವ ಬಿಜೆಪಿ ಕಾರ್ಯಾಲಯದ ಬಳಿ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಳ್ಳತೊಡಗಿದ್ದರು. ಅಭ್ಯರ್ಥಿ ಗೆಲುವು ಖಚಿತಗೊಂಡಂತೆ ಕೇಕೆ ಹಾಕಿ ಸಂಭ್ರಮಿಸಿದ ಕಾರ್ಯಕರ್ತರು ದಿನಕರ ಶೆಟ್ಟರನ್ನು ಹೊತ್ತು ಕುಣಿದಾಡಿದರು. ನಂತರ ಪಕ್ಷದ ಕಾರ್ಯಾಲಯದಲ್ಲಿ ಎಲ್ಲರೂ ಸೇರಿ ಪರಸ್ಪರ ಅಭಿನಂದಿಸಿ ಸಿಹಿ ವಿತರಿಸಿ ಗೆಲುವಿನ ಸಂತಸ ಹಂಚಿಕೊಂಡರು.
Related Articles
Advertisement
ಪ್ರಧಾನಿ ನರೇಂದ್ರ ಮೋದಿಯವರ ಹವಾ, ಸಚಿವ ಅನಂತಕುಮಾರ ಹೆಗಡೆ ಹಿಂದುತ್ವ,ಪರೇಶ್ ಮೇಸ್ತ ಹೆಸರು ಕರಾವಳಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಿದ್ದು ರಿûಾ ಸಂಘದ ಅಧ್ಯಕ್ಷ ಸ್ಥಾನದಿಂದ ಆರಂಭಿಸಿ ಜನರ ಸಂಪರ್ಕ ಸಾಧಿಸಿದ ದಿನಕರ ಶೆಟ್ಟಿ ಅಧಿ ಕಾರ ಇರಲಿ, ಇಲ್ಲದಿರಲಿ ಒಂದು ಬಾರಿ ಗೆದ್ದು ಮೂರು ಬಾರಿ ಬೆರಳೆಣಿಕೆ ಅಂತರದಿಂದ ಸೋತಿದ್ದರೂ ಬೇಸರಿಸದೆ ಜನ ಸಂಪರ್ಕದಲ್ಲಿದ್ದರು.
ಬಿಜೆಪಿ ಖಾಯಂ ಮತ ಮತ್ತು ದಿನಕರ ಶೆಟ್ಟಿಯವರ ಸಾರ್ವಜನಿಕ ಸಂಪರ್ಕ 32293 ಮತಗಳ ಅಂತರದ ಗೆಲುವು ದೊರಕಿಸಿದೆ. ಸೂರಜ್‌ರ ಭಾವನಾತ್ಮಕ ಸಂಗತಿ,ಯಶೋಧರ ನಾಯ್ಕರ ಸಂಘಗಳು, ಪ್ರದೀಪರ ಸಾಮಾಜಿಕ ಕೆಲಸ ಎಲ್ಲವೂ ಹಿಂದೆ ಸರಿದಿದೆ. ಉಳಿದವರು ಠೇವಣಿ ಕಳೆದುಕೊಂಡಿದ್ದಾರೆ. ಕುಮಟಾದಲ್ಲಿ ಮಾತ್ರ ಮೊದಲ ಮೂರ್‍ನಾಲ್ಕು ಸುತ್ತು ಜೆಡಿಎಸ್ ಅಭ್ಯರ್ಥಿ ಸ್ವಲ್ಪ ಮುನ್ನೆಡೆಯಲ್ಲಿದ್ದರು. ಆದರೆ ನಂತರ ಬಿಜೆಪಿಯ ದಿನಕರ ಶೆಟ್ಟಿ ಕೊನೆಯ ತನಕ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಲೇ ಹೋದರು. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ದಿನಕರ ಶೆಟ್ಟರು 32393 ಮತಗಳ ಅಂತರದಿಂದ ಗೆದ್ದು ದೊಡ್ಡ ಗೆಲುವು ಸಾಧಿ ಸಿದ್ದಾರೆ. ಇಲ್ಲಿ ಸಮೀಪದ ಸ್ಪರ್ಧಿಯಾಗಿ ಕಾಂಗ್ರೆಸ್‌ನ ಶಾರದಾ ಶೆಟ್ಟಿ ಇದ್ದಾರೆ.
ಈ ಗೆಲುವು ಕೇವಲ ನನ್ನದಲ್ಲ, ಜನರದ್ದು. ಪ್ರಧಾನಿ ಮೋದಿಯವರ ಶಕ್ತಿ, ವರಿಷ್ಠರು ನನಗೆ ಸ್ಪರ್ಧಿಸಲು ಕೊಟ್ಟ ಅವಕಾಶ ಹಾಗೂ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನೀಡಿದ ಸಹಯೋಗವು ಕ್ಷೇತ್ರದ ಬಿಜೆಪಿ ಗೆಲುವಿನ ಮೂಲಕ ಸಾಬೀತಾಗಿದೆ.ದಿನಕರ ಶೆಟ್ಟಿ, ವಿಜೇತ ಅಭ್ಯರ್ಥಿ ಮತ ಮಾಹಿತಿ
ಇಲ್ಲಿನ ಡಾ| ಬಾಳಿಗಾ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟೂ 16 ಸುತ್ತು ಮತ ಎಣಿಕೆ ನಡೆದಿದ್ದು ಅಂಚೆ ಮತ ಎಣಿಕೆ ಹಾಗೂ ಮೊದಲ ಸುತ್ತಿನಲ್ಲಿ ಜೆಡಿಎಸ್‌ನ ಪ್ರದೀಪ ನಾಯಕರಿಗಿಂತ ಕೊಂಚ ಕಡಿಮೆ ಇದ್ದರೂ ನಂತರ ಪ್ರತಿ ಸುತ್ತಿನಲ್ಲೂ 2 ರಿಂದ 3 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತಾ ಹಿಂತಿರುಗಿ ನೋಡದೇ ಗೆಲುವಿನತ್ತ ಸಾಗಿದರು. ಅಂತಿಮ ಸುತ್ತಿನ ನಂತರ ದಿನಕರ ಶೆಟ್ಟಿ 58,756 ಮತಗಳಿಸಿ ವಿಜಯಪತಾಕೆ ಹಾರಿಸಿದರು. ಗೆಲುವಿಗೆ ಕಾರಣವೇನು?
ಟಿಕೇಟ್ ಆಕಾಂಕ್ಷಿಗಳಿಂದ ಉಂಟಾಗಿದ್ದ ಬಂಡಾಯದ ದುಷ್ಪರಿಣಾಮಕ್ಕಿಂತ ಲಾಭವನ್ನೇ ದಿನಕರ ಶೆಟ್ಟಿ ಪಡೆದರು. ಪ್ರಧಾನಿ ಮೋದಿ, ಹಿಂದುತ್ವ ಹಾಗೂ ಪಕ್ಷ ಅಭಿಮಾನದ ಜೊತೆಗೆ ಕಳೆದ 5 ವರ್ಷದಲ್ಲಿ ಕಾಂಗ್ರೆಸ್‌ನ ರೀತಿ ನೀತಿಗಳು ಕೂಡಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಮತದಾರನ ಮನಸ್ಸನ್ನು ಬಿಜೆಪಿಯೆಡೆಗೆ ಸೆಳೆಯಲು ಸಾಧ್ಯವಾಯಿತೆಂಬ ಅಭಿಪ್ರಾಯ ಎಲ್ಲೆಡೆ ಕೇಳಿಬಂದಿದೆ. ಮತದಾನದ ನಂತರ ಬಿಜೆಪಿ ಪಾಳಯ ಗೆಲುವಿನ ಬಗ್ಗೆ ಖಚಿತ ಲೆಕ್ಕಾಚಾರ ಹೊಂದಿದ್ದು 55 ಸಾವಿರಕ್ಕೂ ಹೆಚ್ಚು ಮತಗಳು ಬೀಳಬಹುದು ಎನ್ನಲಾಗಿತ್ತು. ಸೋಲಿಗೆ ಕಾರಣವೇನು? ಕ್ಷೇತ್ರದಲ್ಲಿ ಒಟ್ಟೂ ಚಲಾವಣೆಯಾದ 1,44,821 ಮತಗಳಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಗಳಿಗೆ ನೆರವಾಗಬಹುದಾಗಿದ್ದ ಮತಗಳಲ್ಲಿ ಇತರ ಅಭ್ಯರ್ಥಿಗಳು ಹಾಗೂ ನೋಟಾ 43,228 ಮತಗಳನ್ನು ಒಡೆದಿದ್ದು ಕೂಡಾ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಮುಳ್ಳಾಯಿತೆನ್ನಬಹುದು. ಮುಖ್ಯವಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಸೂರಜ್ ನಾಯ್ಕ ಮತಗಳಿಕೆಯಲ್ಲಿ ಮೂರನೇ ಸ್ಥಾನಕ್ಕೇರಿದರೆ ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.