Advertisement

ಓಲಾ-ಊಬರ್‌ ಚಾಲಕರ ಕಾನೂನು ಹೋರಾಟಕ್ಕೆ ಎಚ್‌ಡಿಕೆ ನೆರವಿನ ಭರವಸೆ

12:01 PM Mar 01, 2017 | |

ಬೆಂಗಳೂರು: ಓಲಾ-ಊಬರ್‌ ಚಾಲಕರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಾನೇ ಕಾನೂನು ಹೋರಾಟ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಓಲಾ-ಊಬರ್‌ ಚಾಲಕರ ಮನವಿ ಸ್ವೀಕರಿಸಿ ಮಾತನಾಡಿದ ಅವರು, “ಕಾನೂನು ತಜ್ಞರ ನೆರವು ಕಲ್ಪಿಸುವುದು ಸೇರಿ ಎಲ್ಲ ರೀತಿಯ ಸಹಾಯ ನೀಡಲು ಸಿದ್ಧ,” ಎಂದು ತಿಳಿಸಿದರು. “ರಾಜ್ಯ ಸರ್ಕಾರ  ಈ ಸಮಸ್ಯೆ ತನ್ನದಲ್ಲ ಎಂದು ಹೇಳಿ ಸುಮ್ಮನಾಗುವಂತಿಲ್ಲ. ಅಸಂಘಟಿತ ಕಾರ್ಮಿಕರಾದ ಚಾಲಕರ ವಿಚಾರದಲ್ಲಿ ಅಸಡ್ಡೆ ತೋರಬಾರದು. ಶಾಂತಿಯು ತವಾಗಿ ಹೋರಾಟ ನಡೆಸಲು ಅವಕಾಶ ಮಾಡಿಕೊಡಬೇಕು.

ಅವರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಮುಂದಾಗಬೇಕು. ಓಲಾ ಮತ್ತು ಊಬರ್‌ ಕಂಪನಿಗಳು ಮೊದಲಿಗೆ ಮಾಸಿಕ 60 ರಿಂದ 70 ಸಾವಿರ ರೂ. ಆದಾಯದ ಆಸೆ ತೋರಿಸಿದ್ದರಿಂದ ಬಡ ಚಾಲಕರು ತಮ್ಮ ಆಸ್ತಿ ಅಡಮಾನ ಇಟ್ಟು ಕಾರು ಖರೀದಿಸಿ ಸಂಸ್ಥೆಗೆ ಬಿಟ್ಟಿದ್ದಾರೆ. ಆದರೆ, ಇದೀಗ ಸಾವಿರಾರು ಕೋಟಿ ರೂ. ದುಡಿದ ನಂತರ ಸಂಸ್ಥೆಯೇ ಹೊಸದಾಗಿ ಕಾರು ಖರೀದಿಸಿ ಹೊರಗುತ್ತಿಗೆ ರದ್ದು ಮಾಡಲು ಮುಂದಾಗಿದೆ.

ಇದರಿಂದ ಸ್ವಂತ ಕಾರು ಖರೀದಿಸಿ ಬಾಡಿಗೆಗೆ ಕೊಟ್ಟು ದುಡಿಯುತ್ತಿದ್ದ ಸಾವಿರಾರು ಚಾಲಕರಿಗೆ ತೊಂದರೆಯಾಗಲಿದೆ,” ಎಂದು ತಿಳಿಸಿದರು. “ಬೆಂಗಳೂರಿನ ನಾಗರಿಕರು ಸಹ ಚಾಲಕರ ಬೆಂಬಲಕ್ಕೆ ನಿಲ್ಲಬೇಕು. ಅವರ ನ್ಯಾಯಯುತ ಹೋರಾಟಕ್ಕೆ ಸಹಕಾರ ನೀಡಬೇಕು,” ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next