Advertisement

Janthakal mining case; ಸಿದ್ದರಾಮಯ್ಯಗೆ ಸವಾಲು ಹಾಕಿದ ಎಚ್.ಡಿ.ಕುಮಾರಸ್ವಾಮಿ

07:49 PM Aug 18, 2024 | Team Udayavani |

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಲ್ಲಿ ನನ್ನನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಪಡೆಯುವ ಬದಲು ಸುಪ್ರೀಂ ಕೋರ್ಟ್‌ಮೊರೆ ಹೋಗಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಭಾನುವಾರ (ಆ18) ಸವಾಲು ಹಾಕಿದ್ದಾರೆ.

Advertisement

ಸಿದ್ದರಾಮಯ್ಯ ಅವರ ಆರೋಪದ ವಿರುದ್ಧ ಕಿಡಿ ಕಾರಿದ ಎಚ್ ಡಿಕೆ ‘ ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಅಗತ್ಯವೇನಿದೆ? ಎಷ್ಟು ದಿನಗಳಿಂದ ಈ ನಾಟಕ ಮಾಡುತ್ತಿದ್ದೀರಿ? ‘ ಎಂದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು,”2023, ನವೆಂಬರ್ 23 ರಂದು ಕುಮಾರಸ್ವಾಮಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ಲೋಕಾಯುಕ್ತ ರಾಜ್ಯಪಾಲರಿಗೆ ವರದಿ ಕಳುಹಿಸಿದ್ದರೂ 2007ರ ಗಣಿಗಾರಿಕೆ ಪ್ರಕರಣದಲ್ಲಿ ಅನುಮತಿ ನೀಡಿರಲಿಲ್ಲ” ಎಂದು ಆರೋಪ ಮಾಡಿದ್ದರು.

ಜಂತಕಲ್ ಗಣಿಗಾರಿಕೆ ಪ್ರಕರಣದಲ್ಲಿ ವಿಷಯಗಳು ಅಂತಿಮವಾಗಿ ನಿರ್ಧರಿಸುವವರೆಗೆ ಬೇರೆ ಯಾವುದೇ ನ್ಯಾಯಾಲಯವು ಈ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

“ಸುಪ್ರೀಂ ಕೋರ್ಟ್‌ಗೆ ಹೋಗದಂತೆ ನಿಮ್ಮನ್ನು ತಡೆಯುವವರು ಯಾರು? ನನ್ನ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಫೈಲ್ ಕಳುಹಿಸುವ ಈ ನಾಟಕ ನನ್ನನ್ನು ಹೆದರಿಸಲು ಮತ್ತು ನನ್ನನ್ನು ಮೌನಗೊಳಿಸಲು ಸಾಧ್ಯವೇ? ನೀವು ಮಾಡಿದ್ದು ಇದೇನಾ?” ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next