Advertisement

ಕೂಳೂರು: ಕುಂಟುತ್ತಾ ಸಾಗುತ್ತಿದೆ ಸೇತುವೆ ಕಾಮಗಾರಿ

11:51 PM Dec 19, 2022 | Team Udayavani |

ಕೂಳೂರು : ಮಂಗಳೂರು – ಉಡುಪಿ ಸಂಪರ್ಕ ಕಲ್ಪಿಸುವ ಕೂಳೂರು ಗುರುಪುರ ನದಿಗೆ ಆರು ಪಥ ಸೇತುವೆ ನಿರ್ಮಿಸುವ ಕಾಮಗಾರಿ ಆಮೆಗತಿಯಿಯಲ್ಲಿ ನಡೆಯು ತ್ತಿದ್ದು, ಸರಕಾರ ಗುತ್ತಿಗೆದಾರರಿಗೆ ನೀಡಿದ ಅವಧಿ ಮುಗಿಯುವ ಹಂತದಲ್ಲಿದೆ. ಇದರ ನಡುವೆ ಗುತ್ತಿಗೆದಾರರ ಬದಲಾವಣೆಯೂ ಸಮಸ್ಯೆ ತಂದೊಡ್ಡಿದೆ.

Advertisement

ರಾಷ್ಟ್ರೀಯ ಹೆದ್ದಾರಿ 66ರ ಹೆದ್ದಾರಿ ಚತುಷ್ಪಥಕ್ಕೆ ಬರೋಬ್ಬರಿ ಹತ್ತು ವರ್ಷ, ಪಂಪ್‌ ವೆಲ್‌ ಮೇಲ್ಸೇತುವೆ ಪೂರ್ಣ ನಿರ್ಮಾಣಕ್ಕೂ ಏಳೆಂಟು ವರ್ಷ ತಗುಲಿದ್ದರೆ, ಈಗ ಕೂಳೂರು ಸೇತುವೆಯೂ ಕುಂಟುತ್ತಾ ಸಾಗಿದೆ.
ಈಗಾಗಲೇ ಕೇರಳ ಗೋವಾ ನಡುವೆ ಸಂಪರ್ಕ ಕಲ್ಪಿಸುವ ದ.ಕ. ಜಿಲ್ಲೆಯಿಂದ ಹಾದು ಹೋಗುವ ಈ ಹೆದ್ದಾರಿ 66 ಕರ್ನಾಟಕದ ಕರಾವಳಿಗೂ ಪ್ರಮುಖ ಹೆದ್ದಾರಿಯಾಗಿದೆ.

ಸಾವಿರಾರು ಉದ್ದಿಮೆಗಳು, ಒಂದು ಬಂದರು, ಗೂಡ್ಸ್‌ ರೈಲು ಸಂಪರ್ಕ ಹೀಗೆ ಆರ್ಥಿಕ ಚಟುವಟಿಕೆಯ ಕೇಂದ್ರ ಸ್ಥಳದಲ್ಲಿ ಹಾದು ಹೋಗಿದೆ. ವಾಹನಗಳ ಒತ್ತಡ ಹೆಚ್ಚುತ್ತಲೇ ಇದೆ. ಅಧಿಕ ಭಾರದ ಟ್ರಕ್‌, ಟ್ಯಾಂಕರ್‌, ಕಂಟೈನರ್‌ಗಳು ಹಳೆ ಸೇತುವೆಯಲ್ಲಿ ನಿತ್ಯವೂ ಸಾಗುತ್ತವೆ. ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಈ ಸೇತುವೆ ಆಯಸ್ಸು ಮುಗಿದಿದ್ದರೂ ಈಗಲೂ ಓಡಾಟಕ್ಕೆ ಬಳಕೆಯಾಗುತ್ತಿದೆ. ಹೆಚ್ಚಿನ ಭಾರವನ್ನು ತಾಳಿಕೊಳ್ಳುವ ಶಕ್ತಿ ಈ ಸೇತುವೆ ಕಳೆದುಕೊಂಡಿದೆ.

ಸರಕಾರ ತುರ್ತಾಗಿ ಯಾವುದೇ ಅವಘಡ ಸಂಭವಿಸುವ ಮುನ್ನ ಸೇತುವೆ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕಿದೆ.

ಕಾಮಗಾರಿಗಳ ವೇಗವರ್ಧನೆಗೆ ಕ್ರಮ
ಹೆದ್ದಾರಿ 66ರಲ್ಲಿ ವಾಹನ ಓಡಾಟ ಸುಗಮಗೊಳಿಸಲು ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರಕ್ಕೆ ಪತ್ರ ಬರೆಯ ಲಾಗಿದೆ. 6 ಪಥ ಕೂಳೂರು ಸೇತುವೆ ಕಾಮಗಾರಿ ವೇಳೆ ಹಿಂದಿನ ಗುತ್ತಿಗೆ ದಾರರು ಬಿಟ್ಟು ಹೋಗಿರುವುದೂ ವಿಳಂಬವಾಗಲು ಕಾರಣವಾಗಿದೆ. ಇದೀಗ ಇದರ ವೇಗವರ್ಧನೆಗೆ ಬೇಕಾದ ಕ್ರಮ ಕೈಗೊಳ್ಳಿ ಎಂದು ಸಂಸದರ ಮೂಲಕ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
-ಡಾ| ಭರತ್‌ ಶೆಟ್ಟಿ ವೈ., ಶಾಸಕರು ಮಂಗಳೂರು ಉತ್ತರ

Advertisement
Advertisement

Udayavani is now on Telegram. Click here to join our channel and stay updated with the latest news.

Next