Advertisement

ಪಾಕ್‌ ಜೈಲಿನ ಚಿತ್ರ ಹಿಂಸೆ ಬಿಚ್ಚಿಟ್ಟ ಕುಲದೀಪ್‌ ಸಿಂಗ್‌

01:56 AM Dec 28, 2021 | Team Udayavani |

ಶ್ರೀನಗರ: “ಪಾಕಿಸ್ಥಾನದವರ ಕೈಗೆ ಸಿಗುವ ಭಾರತೀಯರನ್ನು ಮನುಷ್ಯರಂತೆ ನೋಡದೆ, ಪ್ರಾಣಿಗಳಂತೆ ಶಿಕ್ಷಿಸಲಾಗುತ್ತದೆ.. ಆ ನರಕದಿಂದ ಬಿಡುಗಡೆಗೊಂಡ ನಾನು ಪುಣ್ಯವಂತ.’ ಹೀಗೆಂದು ಪಾಕ್‌ ಜೈಲಿನಲ್ಲಿ 29 ವರ್ಷ ಶಿಕ್ಷೆ ಅನುಭವಿಸಿ, ಇತ್ತೀಚೆಗೆ ಮನೆಗೆ ಮರಳಿರುವ ಭಾರತೀಯ ಕುಲದೀಪ್‌ ಸಿಂಗ್‌ ಹೇಳಿದ್ದಾರೆ.

Advertisement

“1992ರಲ್ಲಿ ಗೊತ್ತಿಲ್ಲದೆ ಗಡಿ ದಾಟಿದ್ದ ನನಗೆ ಪಾಕಿಸ್ಥಾನಿ ಸೇನೆ ಚಿತ್ರಹಿಂಸೆ ಕೊಟ್ಟಿತು. ಜೈಲಿನಲ್ಲಿ ಮೂರೂವರೆ ವರ್ಷಗಳ ಕಾಲ ಸಾಕಷ್ಟು ಹಿಂಸಿಸಲಾಯಿತು. ಅವರ ಕಣ್ಣಿಗೆ ಕಾಣುವ ಎಲ್ಲ ಭಾರತೀಯರನ್ನೂ ಬೇಹುಗಾರಿಕೆ ಆರೋಪದ ಮೇಲೆ ಜೈಲಿಗೆ ಹಾಕುತ್ತಾರೆ. ಈಗ ಆ ಜೈಲಿನಲ್ಲಿ ಜಮ್ಮು ಮೂಲದ ಇಬ್ಬರಿದ್ದಾರಷ್ಟೇ. ಉಳಿದವರೆಲ್ಲ, ಅಲ್ಲಿನ ಅಧಿಕಾರಿಗಳ ಕಾಟದಿಂದಾಗಿ ಮಾನಸಿಕ ಅಸ್ವಸ್ಥರಾಗಿ ಮಾನಸಿಕ ಆರೋಗ್ಯ ಆಸ್ಪತ್ರೆ ಸೇರಿದ್ದಾರೆ’ ಎಂದು ಅವರು ಹೇಳಿದ್ದಾರೆ.

ನನ್ನ ಪುಣ್ಯ ಚೆನ್ನಾಗಿತ್ತು. ನನ್ನ ಕುಟುಂಬ ದವರು ಅವರಿವರ ಕಾಲು ಹಿಡಿದು, ನನ್ನನ್ನು ಮನೆಗೆ ವಾಪಸು ಕರೆತಂದಿದ್ದಾರೆ ಎಂದು ಕುಲದೀಪ್‌ ಕಣ್ಣೀರಿಡುತ್ತ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next