Advertisement

ಜಾಧವ್‌ಗೆ ಸದ್ಯಕ್ಕೆ ಗಲ್ಲು ಇಲ್ಲ: ಪಾಕ್‌ ಸ್ಪಷ್ಟನೆ

08:50 AM Dec 22, 2017 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ರನ್ನು ಸದ್ಯದಲ್ಲೇ ಗಲ್ಲಿಗೇರಿಸುವ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ಪಾಕಿಸ್ಥಾನ ಹೇಳಿದೆ. ಜಾಧವ್‌ ತಾಯಿ ಮತ್ತು ಪತ್ನಿಗೆ ಅವರನ್ನು ಭೇಟಿಯಾದಲು ಅವಕಾಶ ನೀಡಲಾಗಿದ್ದು, ಇದು ಅವರ ಕೊನೆಯ ಭೇಟಿಯಾಗಲಿದೆ. ಭೇಟಿಯ ಬಳಿಕ ಜಾಧವ್‌ರನ್ನು ಗಲ್ಲಿಗೇರಿಸಲಾಗುತ್ತದೆ ಎಂಬ ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ ಪಾಕಿಸ್ಥಾನವು ಈ ಸ್ಪಷ್ಟನೆ ನೀಡಿದೆ. ಗುರುವಾರ ಮಾತನಾಡಿರುವ ಪಾಕ್‌ ವಿದೇಶಾಂಗ ಇಲಾಖೆ ವಕ್ತಾರ ಮಹಮ್ಮದ್‌ ಫೈಸಲ್‌ “ಜಾಧವ್‌ರನ್ನು ಕೂಡಲೇ ಗಲ್ಲಿಗೇರಿಸುವ ಯೋಜನೆ ನಮಗಿಲ್ಲ. ಅವರ ಕ್ಷಮಾದಾನ ಅರ್ಜಿ ಇನ್ನೂ ಇತ್ಯರ್ಥಗೊಂಡಿಲ್ಲ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next