Advertisement

ಕುಲಭೂಷಣ್‌ ಕೇಸ್‌: ಭಾರತದ ಉತ್ತರ ಪರಿಗಣಿಸುತ್ತೇವೆ: ಪಾಕ್‌

07:14 PM Nov 18, 2017 | udayavani editorial |

ಹೊಸದಿಲ್ಲಿ : ಕುಲಭೂಷಣ್‌ ಜಾಧವ್‌ ಕೇಸಿನಲ್ಲಿ ಭಾರತದಿಂದ ತನಗೆ ಉತ್ತರ ಬಂದಿದ್ದು ತಾನದನ್ನು ಪರಿಗಣಿಸುತ್ತಿದ್ದೇನೆ ಎಂದು ಪಾಕಿಸ್ಥಾನ ಹೇಳಿದೆ.

Advertisement

ಪಾಕ್‌ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಡಾ. ಮೊಹಮ್ಮದ್‌ ಫೈಸಲ್‌ ಅವರು ಈ ವಿಷಯವನ್ನು ದೃಢೀಕರಿಸಿದ್ದಾರೆ. 

ಅಚ್ಚರಿಯ ನಡೆಯೊಂದರಲ್ಲಿ ಪಾಕಿಸ್ಥಾನ ಕಳೆದ ವಾರ 46ರ ಹರೆಯದ ಭಾರತೀಯ ಬೇಹು ಆರೋಪಿ ಜಾಧವ್‌ ಅವರನ್ನು ಭೇಟಿಯಾಗುವುದಕ್ಕೆ ಅವರ ಪತ್ನಿಗೆ ಅನುಮತಿ ನೀಡಿತ್ತು. ಜಾಧವ್‌ ಅವರ ತಾಯಿಗೆ ಮಾನವೀಯ ನೆಲೆಯಲ್ಲಿ ತನ್ನ ಮಗನನ್ನು ಕಾಣಲು ವೀಸಾ ನೀಡುವಂತೆ ಮತ್ತು ಜಾಧವ ಪತ್ನಿಗೆ ಪತಿಯನ್ನು ಕಾಣುವುದಕ್ಕೆ ಭಾರತ ಪಾಕಿಸ್ಥಾನಕ್ಕೆ ಹಲವು ತಿಂಗಳ ಹಿಂದೆ ಮನವಿ ಮಾಡಿತ್ತು. 

ಪಾಕಿಸ್ಥಾನವು ಭಾರತದಿಂದ ಜಾಧವ್‌ ಕೇಸಿನ ಬಗ್ಗೆ ಉತ್ತರವನ್ನು ಎದುರು ನೋಡುತ್ತಿದೆ ಎಂದು ಡಾ. ಫೈಸಲ್‌ ಅವರು ಈಚಿನ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದರು. 

ಇಂದಿನ ಹೊಸ ವಿದ್ಯಮಾನವನ್ನು ದೃಢೀಕರಿಸುತ್ತಾ ಡಾ. ಫೈಸಲ್‌ ಅವರು, “ಕಮಾಂಡರ್‌ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ಥಾನದಲ್ಲಿ ಪತ್ನಿಯನ್ನು ಭೇಟಿಯಾಗುವುದಕ್ಕೆ, ಮಾನವೀಯ ನೆಲೆಯಲ್ಲಿ ಅನುಮತಿ ನೀಡಲು ಪಾಕ್‌ ಸರಕಾರ ನಿರ್ಧರಿಸಿದೆ. ಈ ಕುರಿತ ಟಿಪ್ಪಣಿಯೊಂದನ್ನು ಇಸ್ಲಾಮಾಬಾದ್‌ ನಲ್ಲಿರುವ ಭಾರತೀಯ ಹೈಕಮಿಶನ್‌ಗೆ ಕಳುಹಿಸಲಾಗಿದೆ’ ಎಂದು ಹೇಳಿದರು. 

Advertisement

ಭಾರತದ ಮಾಜಿ ನೌಕಾಪಡೆ ಅಧಿಕಾರಿ ಜಾಧವ್‌ಗೆ ಪಾಕ್‌ ಮಿಲಿಟರಿ ಕೋರ್ಟ್‌ 2017ರ ಎಪ್ರಿಲ್‌ನಲ್ಲಿ “ಬೇಹುಗಾರಿಕೆ ಮತ್ತು ಭಯೋತ್ಪಾದನೆ’ ಆರೋಪದ ಮೇಲೆ ಮರಣ ದಂಡನೆಯನ್ನು ವಿಧಿಸಿತ್ತು. ಹೇಗ್‌ ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತದ ಕೋರಿಕೆಯನ್ನು ಮನ್ನಿಸಿ ಜಾಧವ್‌ ಮರಣದಂಡನೆ ಶಿಕ್ಷೆ ಜಾರಿಗೆ ತಡೆ ನೀಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next