Advertisement

ಕುಲಭೂಷಣ್‌ ಜಾಧವ್ ಕೇಸು ವಿಚಾರಣೆಗೆ ವಿಸ್ತೃತ ಪೀಠ ರಚನೆ

12:21 PM Aug 09, 2020 | sudhir |

ಇಸ್ಲಾಮಾಬಾದ್‌: ಪಾಕಿಸ್ಥಾನದ ಬಂಧನದಲ್ಲಿರುವ ಭಾರತೀಯ ಕುಲಭೂಷಣ್‌ ಜಾಧವ್‌ ಅವರ ಪ್ರಕರಣದಲ್ಲಿ ಪಾಕಿಸ್ಥಾನ‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಗಾಗಿ ಇಸ್ಲಾಮಾಬಾದ್‌ ಹೈಕೋರ್ಟ್‌ (ಐಎಚ್‌ಸಿ), ತ್ರಿಸದಸ್ಯ ವಿಸ್ತೃತ ನ್ಯಾಯಪೀಠವನ್ನು ನೇಮಿಸಿದೆ.

Advertisement

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥರ್‌ ಮಿನಲ್ಲಾ ನೇತೃತ್ವದ ಈ ಪೀಠದಲ್ಲಿ ನ್ಯಾ| ಅಮಿರ್‌ ಫಾರೂಕ್‌ ಹಾಗೂ ನ್ಯಾ| ಮಿಯಂಗುಲ್‌ ಹಸನ್‌ ಔರಂಗಜೇಬ್‌ ಇರಲಿದ್ದಾರೆ. ಆ. 3ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನ ಸರಕಾರಕ್ಕೆ ಆದೇಶ ನೀಡಿದ್ದ ಐಎಚ್‌ಸಿ, ಕುಲಭೂಷಣ್‌ ಜಾಧವ್‌ ಪರವಾಗಿ ವಾದ ಮಂಡಿಸಲು ವಕೀಲರನ್ನು ನೇಮಿಸುವ ಅವಕಾಶವನ್ನು ಭಾರತಕ್ಕೆ ನೀಡಬೇಕು ಎಂದು ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next