Advertisement

ಕುಲಾಲ ಸಂಘ ನವಿಮುಂಬಯಿ:ಯಕ್ಷಗಾನ,ಸಮ್ಮಾನ

11:59 AM Oct 14, 2017 | Team Udayavani |

ನವಿಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ನವಿ ಮುಂಬಯಿ ಸ್ಥಳೀಯ ಸಮಿತಿ ಮತ್ತು ಕುಲಾಲ ಸಂಘ ಮುಂಬಯಿ ಇದರ ಅಧ್ಯಕ್ಷ ಗಿರೀಶ್‌  ಬಿ. ಸಾಲ್ಯಾನ್‌ ಅವರ ಜಂಟಿ ಆಯೋಜನೆಯಲ್ಲಿ ಶ್ರೀ  ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳ ಕೆರೆಕಾಡು ಮೂಲ್ಕಿ ಇದರ ಕಲಾವಿದರಿಂದ  ಮಹಿಷಮರ್ದಿನಿ  ಯಕ್ಷಗಾನ ಪ್ರದರ್ಶನವು ಇತ್ತೀಚೆಗೆ ನೆರೂಲ್‌ ಶ್ರೀ ಶನೀಶ್ವರ ಮಂದಿರದಲ್ಲಿ ನಡೆಯಿತು.

Advertisement

ಈ ಸಂದರ್ಭದಲ್ಲಿ ಪ್ರಾಯೋಜಕರ ಪರವಾಗಿ ತಂಡದ ಭಾಗವತರಾದ ಕು| ಕಾವ್ಯಶ್ರೀ, ಮೇಳದ ಸಂಚಾಲಕರಾದ ಜಯಂತ್‌ ಅಮೀನ್‌ ಮತ್ತು ಮುಂಬಯಿ ವ್ಯವಸ್ಥಾಪಕರಾದ ಪ್ರಭಾಕರ್‌ ಎಸ್‌. ಹೆಗ್ಡೆ ಇವರನ್ನು ಸತ್ಕರಿಸಲಾಯಿತು. ಮೇಳದ ಪರವಾಗಿ ಪ್ರಾಯೋಜಕರಾದ ಗಿರೀಶ್‌ ಬಿ. ಸಾಲ್ಯಾನ್‌ ಮತ್ತು ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷರಾದ  ಪಿ. ಶೇಖರ್‌ ಮೂಲ್ಯ ಇವರನ್ನು ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಗಿರೀಶ್‌  ಬಿ. ಸಾಲ್ಯಾನ್‌ ಅವರು ಮಾತನಾಡಿ, ಮಕ್ಕಳನ್ನು ಯಕ್ಷಗಾನದಂತಹ  ಕಲೆಯಲ್ಲಿ ಹುರಿದುಂಬಿಸುತ್ತಾ, ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ಮಾಡುತ್ತಿರುವ ಈ ತಂಡದ ಕಾರ್ಯ ಶ್ಲಾಘನೀಯ. ಈ ಮೇಳದಲ್ಲಿರುವ ಮಕ್ಕಳ ಪ್ರತಿಭೆ ಇತರ  ಮಕ್ಕಳಿಗೆ ಮಾದರಿಯಾಗಿದೆ. ಕುಮಾರಿ ಕಾವ್ಯಶ್ರೀಯ ಭಾಗವತಿಕೆಯನ್ನು ಶ್ಲಾಘಿಸಲು ಶಬ್ದಗಳೇ ಸಾಲದು. ಕನ್ನಡದೊಂದಿಗೆ ತುಳುವಿನಲ್ಲಿಯೂ ಪ್ರಸಂಗಗಳನ್ನು ಪ್ರದರ್ಶಿಸಿದರೆ ಮುಂಬಯಿಯಲ್ಲಿರುವ ಯುವಪೀಳಿಗೆ ಇನ್ನೂ ಹೆಚ್ಚು ಯಕ್ಷಗಾನದೊಂದಿಗೆ ಆಕರ್ಷಿತರಾಗಲು ಸಾಧ್ಯವಾಗಬಹುದು ಎಂದರು. ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದು ಶುಭಹಾರೈಸಿದರು.

ಮುಂಬಯಿ ವ್ಯವಸ್ಥಾಪಕರಾದ ಪ್ರಭಾಕರ್‌ ಎಸ್‌. ಹೆಗ್ಡೆ ಅವರು ಮಾತನಾಡಿ, ಈ ಮೇಳದಲ್ಲಿ ಪ್ರತಿ ದಿನದ  ಪ್ರಸಂಗದಲ್ಲಿ ಬೇರೆ ಬೇರೆ ಪಾತ್ರಗಳನ್ನು ಕಲಾವಿದರಿಗೆ ನೀಡಿ, ಎಲ್ಲಾ ಕಲಾವಿದರೂ ಪ್ರತಿಯೊಂದು ಪಾತ್ರದಲ್ಲಿ ಅಭಿನಯಿಸಲು ಅವಕಾಶ ನೀಡುವುದೇ ಈ ಮೇಳದ ವೈಶಿಷ್ಟé ವಾಗಿದೆ. ನಿರಂತರ ಒಂದೇ ಶೀರ್ಷಿಕೆಯ ಪ್ರಸಂಗ ಇದ್ದರೂ ಪ್ರತಿ ಪ್ರಸಂಗದಲ್ಲಿ ಪಾತ್ರಧಾರಿಗಳ ಪಾತ್ರ ಬದಲಾವಣೆ ಮಾಡಲಾಗುತ್ತದೆ.  ಕಲಾ ವಿದರೂ ಕೂಡ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ  ಪ್ರದರ್ಶನ ನೀಡುತ್ತಿದ್ದಾರೆ.   ಮಕ್ಕಳನ್ನು ಯಕ್ಷಗಾನದೊಂದಿಗೆ ಪ್ರೋತ್ಸಾಹಿಸಿ ಅವರ ಶಿಕ್ಷಣಕ್ಕೂ ಸಹಾಯ ಮಾಡುತ್ತಿರುವುದು ಈ ತಂಡದ ಮತ್ತೂಂದು ವೈಶಿಷ್ಟé. ಇಂತಹ ತಂಡದ ಪ್ರದರ್ಶನದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು  ಎಂದರು.

ವೇದಿಕೆಯಲ್ಲಿ ಶನೀಶ್ವರ ಮಂದಿರದ ಅಧ್ಯಕ್ಷರಾದ  ಧರ್ಮದರ್ಶಿ  ರಮೇಶ್‌ ಎಂ.  ಪೂಜಾರಿ, ಶನೀಶ್ವರ ಮಂದಿರದ ಟ್ರಸ್ಟಿ ಕರುಣಾಕರ ಆಳ್ವ,   ಮೇಳದ ಮುಂಬಯಿ ವ್ಯವಸ್ಥಾಪಕರಾದ ವಿ. ಕೆ. ಸುವರ್ಣ , ಕುಲಾಲ ಸಂಘದ ಉಪಾಧ್ಯಕ್ಷರಾದ ಪಿ. ದೇವದಾಸ್‌ ಎಲ್‌. ಕುಲಾಲ್‌, ಗೌರವ ಕೋಶಾಧಿಕಾರಿ ಜಯ ಎಸ್‌. ಅಂಚನ್‌, ರಂಗಭೂಮಿ ಫೈನ್‌ ಆರ್ಟ್ಸ್ನ ಅಧ್ಯಕ್ಷರಾದ ತಾರಾನಾಥ್‌ ಶೆಟ್ಟಿ ಪುತ್ತೂರು  ಮತ್ತು ಕೃಷ್ಣ ಪೂಜಾರಿ  ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮವನ್ನು ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ನಿರೂಪಿಸಿ ವಂದಿಸಿದರು. ಪ್ರದರ್ಶನದ ಯಶಸ್ಸಿನಲ್ಲಿ ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿಯ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸದರು.  ಅಪಾರ ಸಂಖ್ಯೆಯಲ್ಲಿ ಸೇರಿದ್ದ ಯಕ್ಷಗಾನ ಪ್ರೇಮಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next