Advertisement

ಕುಸಿದ ಕುಕ್ಕುಜ –ಅಳಂಬ ಸಂಪರ್ಕ ಸೇತುವೆ

11:37 AM May 28, 2020 | sudhir |

ಬೆಳ್ತಂಗಡಿ: ನಾರಾವಿ ಗ್ರಾ. ಪಂಚಾಯತ್‌ ವ್ಯಾಪ್ತಿಯ ಕುಕ್ಕುಜೆ ಕ್ರಾಸ್‌ನಿಂದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಲಂಬಕ್ಕೆ ತೆರಳುವ ಕುಕ್ಕುಜೆ ಸಂಪರ್ಕ ಸೇತುವೆ ಬುಧವಾರ ಸಂಜೆ ಕುಸಿದು ಬಿದ್ದಿದೆ.

Advertisement

ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಈ ಸೇತುವೆ ವಿಚಾರವಾಗಿ ಹಲವು ಬಾರಿ ಗ್ರಾಮಸ್ಥರು ನೂತನ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರು. ಕಳೆದ ಮಳೆಗಾಲದಲ್ಲಿ ಕುಕ್ಕುಜೆ ಸೇತುವೆ ಶಿಥಿಲಾವಸ್ಥೆ ತಲುಪಿರುವ ಕುರಿತು ಕಳೆದ ವರ್ಷದ ಜೂ. 3ರಂದು ಉದಯವಾಣಿ ಸಚಿತ್ರ ವರದಿ ಪ್ರಕಟಿಸಿತ್ತು.

ಈ ಸೇತುವೆ 15 ಮೀಟರ್‌ ಉದ್ದದ 40 ವರ್ಷಗಳಷ್ಟು ಹಳೆಯದ್ದಾಗಿದ್ದು ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಕನಿಷ್ಠ 80 ವರ್ಷ ಬಾಳಿಕೆ ಬರಬೇಕಿದ್ದ ಈ ಸೇತುವೆ ಇದೀಗ ಕುಸಿತ ಗೊಂಡಿರುವುದರಿಂದ 300 ಕುಟುಂಬಗಳಿಗೆ ಸಂಪರ್ಕವಿಲ್ಲದಂತಾಗಿದೆ. ಮಳೆಗಾಲ ಸಮೀಪಿಸಿದ್ದರಿಂದ ಅಗತ್ಯ ವಸ್ತುಗಳ ಸಾಗಾಟಕ್ಕೆ ತೊಂದರೆಯಾಗಿದೆ. ಕಳೆದ ವರ್ಷದಿಂದಲೇ ಈ ರಸ್ತೆಯಲ್ಲಿ ಘನವಾಹನ ಸಂಚಾರಕ್ಕೆ ನಿಷೇಧಿಸಲಾಗಿತ್ತು. ಸದ್ಯ ಗ್ರಾ.ಪಂ ನದಿಯಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next