Advertisement

ಕುಕ್ಕೆ: ಸರ್ಪಸಂಸ್ಕಾರಕ್ಕೆ ಅಧಿಕ ಹಣ ವಸೂಲಿ? 

11:29 AM Dec 22, 2017 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಸೇವೆ ನಡೆಸಲು ಕತೃì ಓರ್ವರು ಭಕ್ತರಿಂದ ಅಧಿಕ ಹಣ ವಸೂಲಿ ಮಾಡಿದ್ದಾರೆ ಮತ್ತು ಇದಕ್ಕೆ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರೊಬ್ಬರು ಸಹಕರಿಸಿದ್ದಾರೆ ಎಂಬ ಸಂದೇಶ ಸಾಮಾಜಿಕ ತಾಣಗಳಲ್ಲಿ ಹರಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾದ ಘಟನೆ ಗುರುವಾರ ನಡೆದಿದೆ.

Advertisement

 ಡಿ.20 ಮತ್ತು 21ರಂದು ಹಾಸನ ಮೂಲದ ಭಕ್ತರ ಗುಂಪು ಮೂರು ಸೇವೆ ನೆರವೇರಿಸಿ ತೆರಳಿದ್ದರು. ಆನ್‌ಲೈನ್‌ನಲ್ಲಿ ಅವಕಾಶ ಸಿಗದ ಕಾರಣ ಇಲ್ಲಿ ಕತೃìವಾಗಿರುವ ಹಾಸನ ಮೂಲದ ವ್ಯಕ್ತಿಯ ಮೂಲಕ ಸೇವೆಗೆ ಬುಕ್ಕಿಂಗ್‌ ಮಾಡಿಸಿದ್ದರು. ಕಚೇರಿಯ ಪುಸ್ತಕದಲ್ಲಿ ಪೂಜೆ ನಡೆಸುವ ಭಕ್ತರ ಹೆಸರಿನ ಮುಂದೆ ವ್ಯವಸ್ಥಾಪನ ಸಮಿತಿ ಸದಸ್ಯರೊಬ್ಬರ ಹೆಸರನ್ನು ಶಿಫಾರಸು ಆಗಿ ನಮೂದಿಸಲಾಗಿತ್ತು.

ಸೇವೆಯ ಎರಡನೇ ದಿನ, ಡಿ.21ರಂದು ಮಧ್ಯಾಹ್ನ ಪೂಜೆ ಪೂರ್ಣಗೊಳಿ ಸಿದ ವೇಳೆ ತಂಡದವರು ನಿಗದಿತ ಮೊತ್ತಕ್ಕಿಂತ ಹೆಚ್ಚು ವಸೂಲು ಮಾಡಲಾಗಿದೆ ಎಂದು ಆರೋಪಿಸಿದ ವಿಚಾರ ಹರಡಿತ್ತು. ಬಳಿಕ ಅದು ವ್ಯಾಪಕ ಪ್ರಚಾರ ಪಡೆದು ಹರಡಲಾರಂಭಿಸಿತು. ಇದರಲ್ಲಿ ತಳಕು ಹಾಕಿಕೊಂಡ ಹೆಸರು ವ್ಯವಸ್ಥಾಪನ ಸಮಿತಿಯ ಸದಸ್ಯ ಕೃಷ್ಣಮೂರ್ತಿ ಭಟ್‌ ಅವ ರ ದು. ಈ ಘಟನೆ ಇಷ್ಟು ಗಂಭೀರತೆ ಪಡೆಯಲು ಕಾರಣ ಸೇವೆ ಸಲ್ಲಿಸಿದ ತಂಡದಲ್ಲಿದ್ದ ಬಡ ಕುಟುಂಬವೊಂದು ಆಭರಣ ಅಡವಿಟ್ಟು ಹಣ ಹೊಂದಿಸಿದ್ದು ಎನ್ನಲಾಗಿದೆ. 

ಸುಳ್ಳು ಆರೋಪ: ಪ್ರಕರಣ ಸಂಬಂಧ ಪೂಜೆ ಪೂರೈಸಿ ತೆರಳಿದ ಭಕ್ತರ ದೂರವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಲು ಯತ್ನಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಅವರನ್ನು ಸಂಪರ್ಕಿಸಿದಾಗ ಇದು ಸುಳ್ಳು ಸುದ್ದಿ, ಯಾವುದೇ ದಾಖಲೆ ಇಲ್ಲದೆ ಮಾನಹಾನಿಕರ ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next