Advertisement
2015-16ನೇ ಆರ್ಥಿಕ ವರ್ಷದಲ್ಲಿ ದೇಗುಲ 88,83,54,674.36 ರೂ. ಆದಾಯ ಗಳಿಸಿತ್ತು. ಶ್ರೀ ದೇಗುಲ ಕಳೆದ ವರ್ಷಕ್ಕಿಂತ 82,36,687.32 ರೂ. ಅಧಿಕ ಆದಾಯ ಗಳಿಸಿದೆ ಎಂದು ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.
ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೈ ತೋಟದಿಂದ ಆದಾಯ ಬರುತ್ತದೆ. ಈ ಬಾರಿ ಸ್ವಂತ ಕೃಷಿಯಿಂದ 2,12,22,317.00 ರೂ., ಕಟ್ಟಡ ಬಾಡಿಗೆಯಿಂದ 44,43,851.00 ರೂ., ಕಾಣಿಕೆ ಮೂಲಕ 1,68,39,124.14 ರೂ., ಕಾಣಿಕೆ ಡಬ್ಬಿಯಿಂದ 17,65,59,002.00 ರೂ., ಹರಕೆ ಸೇವೆಗಳಿಂದ 38,24,37,464.18 ರೂ., ವಿವಿಧ ಬ್ಯಾಂಕ್‌ಗಳಲ್ಲಿರುವ ನಿರಖು ಠೇವಣಿ ಬಡ್ಡಿಯಿಂದ 19,20,25,572.57 ರೂ., ಅನುದಾನ ಮೂಲಕ 1,22,673.00 ರೂ., ಸಂಕೀರ್ಣ ಜಮೆ 4,36,07,667.04 ರೂ., ನಿಧಿ ಮೂಲಕ 5,93,33,690.75 ರೂ. ಆದಾಯ ಬಂದಿದೆ. ಹೀಗೆ ಒಟ್ಟು 89 ಕೋಟಿ 65 ಲಕ್ಷದ 91 ಸಾವಿರದ 361.68 ರೂ. ಆದಾಯ ದೇಗುಲಕ್ಕೆ ಬಂದಿದೆ. ಮೂಲ ಸೌಕರ್ಯಕ್ಕೆ ಆದ್ಯತೆ: ಮುಂಡೋಡಿ
ಭಕ್ತರಿಗೆ ಬೇಕಾದ ಆವಶ್ಯಕತೆಗಳನ್ನು ವ್ಯವಸ್ಥಿತವಾಗಿ ಪೂರೈಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೇಗುಲದ ಆಡಳಿತ ಮಂಡಳಿ ಭಕ್ತರ ಅನುಕೂಲತೆಗೆ ಅನೇಕ ಅಭಿವೃದ್ಧಿ ಯೋಜನೆ ಹಮ್ಮಿಕೊಂಡು ಅದನ್ನು ಕಾರ್ಯಗತಗೊಳಿಸಿದೆ. ಕ್ಷೇತ್ರ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.