ಉಡುಪಿ: ನಾಗಾರಾಧನೆಗೆ ಪ್ರಸಿದ್ಧಿ ಪಡೆದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 100 ಕೋಟಿ ರೂ. ಎಂದು ಸರಕಾರ ಘೋಷಿಸಿದೆ. ರಾಜ್ಯದಲ್ಲಿ ಶ್ರೀಮಂತ ದೇವಸ್ಥಾನ ಎಂಬ ಅದರ ಪಟ್ಟ ಭದ್ರವಾಗಿದೆ. ಕಳೆದ 9 ತಿಂಗಳ ಸೇವೆಗಳ ಲೆಕ್ಕಾಚಾರ ನಡೆಸದೆ ಸರಕಾರ ಈ ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ.
ರಾಜ್ಯ ಸರಕಾರಕ್ಕೆ ಅತೀ ಹೆಚ್ಚು ಆದಾಯ ತರುವ ಮೊದಲ 10 ದೇವಸ್ಥಾನಗಳ ಪಟ್ಟಿಯನ್ನು ಸರಕಾರ ಬಿಡುಗಡೆ ಮಾಡಿದೆ. ಒಂದು ವರ್ಷ ಅವಧಿಯಲ್ಲಿ ದೇವಸ್ಥಾನ ಗಳು ವಿವಿಧ ಮೂಲಗಳಿಂದ ಗಳಿಸಿರುವ ಆದಾ ಯದ ಆಧಾರದಲ್ಲಿ ಸ್ಥಾನಗಳನ್ನು ನೀಡಲಾಗಿದೆ.
ಅಚ್ಚರಿ ಮೂಡಿಸಿದ ಘೋಷಣೆ: 2018-19ನೇ ಸಾಲಿನಲ್ಲಿ ಏಪ್ರಿಲ್‌ನಿಂದ 2019ರ ಮಾರ್ಚ್ ತನಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ 92,09,13,824 ರೂ. ಆಗಿತ್ತು. ಹಿಂದಿನ ವರ್ಷಗಳಲ್ಲಿ ವಾರ್ಷಿಕ ಲೆಕ್ಕವನ್ನು ಈ ನಡುವಿನ ಅವಧಿಯನ್ನು ಪರಿಗಣಿಸಿ ನಡೆಸಲಾಗುತ್ತಿತ್ತು.
ಆದರೆ 2019ರ ಮಾರ್ಚ್‌ನಿಂದ 2020ರ ಜನವರಿ ತನಕದ ಲೆಕ್ಕಾಚಾರ ಇನ್ನೂ ಆಗಿಲ್ಲ. ಇದರ ನಡುವೆ ಸರಕಾರ ದೇಗುಲದ ಆದಾಯ 100 ಕೋ.ರೂ ಎಂದು ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಕಳೆದ 9 ತಿಂಗಳ ಅಂದಾಜು ಸೇವೆಗಳ ಪರಿಗಣಿಸಿ ಸರಕಾರ ಆದಾಯ 100 ಕೋಟಿ ರೂ. ಎಂದು ಘೋಷಿಸಿರುವ ಸಾಧ್ಯತೆಯಿದೆ.
ಕೊಲ್ಲೂರು ದ್ವಿತೀಯ: ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಎರಡನೇ ಸ್ಥಾನದಲ್ಲಿದೆ. 40ರಿಂದ 42 ಕೋಟಿ ರೂ. ಆದಾಯದ ಕಟೀಲು ದುರ್ಗಾಪರಮೇಶ್ವರಿ ದೇಗುಲ 3ನೇ ಸ್ಥಾನ ಪಡೆದಿದೆ.
ದೇಗುಲ ಆದಾಯ (ಕೋ.ರೂ.) ಸ್ಥಾನ
ಕೊಲ್ಲೂರು ಮೂಕಾಂಬಿಕಾ 90 ಕೋ.ರೂ. 2
ಕಟೀಲು ದುರ್ಗಾಪರಮೇಶ್ವರಿ 40ರಿಂದ 42 3
ಮೈಸೂರು ಚಾಮುಂಡೇಶ್ವರಿ 30ರಿಂದ 33 4
ನಂಜನಗೂಡು ಶ್ರೀಕಂಠೇಶ್ವರ 15ರಿಂದ 20 5
ಬೆಳಗಾವಿ ಸವದತ್ತಿ ಯಲ್ಲಮ್ಮ 15ರಿಂದ 17 6
ಶ್ರೀ ಮಂದಾರ್ತಿ 10ರಿಂದ 12 7
ಕೊಪ್ಪಳ ಗುಳ್ಳಮ್ಮ 8ರಿಂದ 10 8
ಬೆಂಗಳೂರು ಬನಶಂಕರಿ 8ರಿಂದ 10 9
ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ 8ರಿಂದ 10 10
* ಬಾಲಕೃಷ್ಣ ಭೀಮಗುಳಿ