Advertisement

ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಹಿನ್ನಲೆ  

03:18 PM Dec 09, 2017 | Team Udayavani |

ಸುಬ್ರಹ್ಮಣ್ಯ: ಪೂರ್ವಶಿಷ್ಟ ಸಂಪ್ರದಾಯದಂತೆ ಕುಕ್ಕೆ ದೇಗುಲದ ವತಿಯಿಂದ ಕುಮಾರಪರ್ವತದಲ್ಲಿ ಕುಕ್ಕೆಲಿಂಗ
ಪೂಜೆ ಡಿ. 7ರಂದು ನಡೆಯಿತು. ಪರ್ವತದ ಮೇಲಿನ ಕಲ್ಲಿನಿಂದ ನಿರ್ಮಿತವಾದ ಗುಡಿಯಲ್ಲಿ ದೇಗುಲದ ಅರ್ಚಕರು ರಮೇಶ್‌ ಆಸ್ರಣ್ಣ ಧಾರ್ಮಿಕ ವಿಧಿವಿಧಾನ ಮೂಲಕ ಕುಕ್ಕೆಲಿಂಗ ಪೂಜೆ ನೆರವೇರಿಸಿದರು. ದೇವರಿಗೆ ಪ್ರಾರ್ಥನೆ, ಪೂಜೆ, ನೈವೇದ್ಯ ಸಮರ್ಪಿಸಿಸಲಾಯಿತು. 

Advertisement

ಗಣ್ಯರ ಉಪಸ್ಥಿತಿ
ಕ್ಷೇತ್ರದ ಚಂಪಾಷಷ್ಠಿ ವೇಳೆ ಕುಮಾರಪರ್ವತಕ್ಕೆ ತೆರಳಿ ಕುಕ್ಕೆಲಿಂಗ ಪೂಜೆ ನೆರವೇರಿಸುವುದು ಸಂಪ್ರದಾಯ ಬದ್ಧವಾಗಿ ಇಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಅದರಂತೆ ಸುಬ್ರಹ್ಮಣ್ಯ ದೇಗು ಲದ ಅರ್ಚಕರು ಪರ್ವತಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಈ ವೇಳೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಚ್‌.ಎಂ., ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್‌, ಬಾಲಕೃಷ್ಣ ಬಲ್ಲೇರಿ, ಮಾಸ್ಟರ್‌ ಪ್ಲಾನ್‌ ಸಮಿತಿ ಸದಸ್ಯ ಶಿವರಾಮ ರೈ, ಶಿಷ್ಟಾಚಾರ ಅಧಿಕಾರಿ ಗೋಪಿನಾಥ್‌ ನಂಬೀಶ, ಎಂಜಿನಿಯರ್‌ ಉದಯಕುಮಾರ, ಶಿಷ್ಟಾಚಾರ ವಿಭಾಗದ ಪ್ರಮೋದ್‌ ಕುಮಾರ್‌, ದೇಗುಲದ ಗುರುಪ್ರಸಾದ್‌ ಕಾಯರ್‌ತ್ತಾಯ, ವಿಮಲಾ ರಂಗಯ್ಯ, ಶಿವಕುಮಾರ ಕಾಮತ್‌, ಸುಬ್ರಹ್ಮಣ್ಯ ರಾವ್‌, ಸೋಮಶೇಖರ ನಾಯಕ್‌, ರವೀಂದ್ರ ಕೆ. ನೂಚಿಲ, ಪ್ರಸಾದ್‌ ಕೆ. ರೈ, ಪ್ರಸಾದ ಭಟ್‌ ಮಾಣಿಲ, ರವಿ ಪ್ರಸನ್ನ ಹೊಳ್ಳ, ಜಯಪ್ರಸನ್ನ ಜೆ., ಶ್ರೀಕುಮಾರ್‌ ನಾಯರ್‌, ಕೃಷ್ಣ ಕುಮಾರ್‌ ಬಾಳುಗೋಡು, ದಿನೇಶ್‌ ಎಣ್ಣೆಮಜಲು, ದೇಗುಲದ ಸಿಬಂದಿ, ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಚಾರಣಕ್ಕೆ ಅವಕಾಶ
ಕುಕ್ಕೆ ಲಿಂಗ ಪೂಜೆಯನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಡಿ. 6 ಮತ್ತು ಡಿ. 7ರಂದು ಪ್ರತ್ಯೇಕ ತಂಡಗಳಾಗಿ ಕುಮಾರಪರ್ವತಕ್ಕೆ ಯಾತ್ರೆ ತೆರಳಿ ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡರು. ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ನೂರಕ್ಕೂ ಮಿಕ್ಕಿದ ಭಕ್ತರು ಚಾರಣದಲ್ಲಿ ಭಾಗವಹಿಸಿದ್ದರು. ಹಿಂದಿನ ವರ್ಷಗಳಲ್ಲಿ ಈ ವಿಧಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರಲಿಲ್ಲ. ಆದರೆ ಈ ಬಾರಿ ಈ ದೇವತಾ ಕಾರ್ಯಕ್ಕೆ ದೇಗುಲದ ಆಡಳಿತ ಮಂಡಳಿ ವಿಶೇಷ ಮಹತ್ವ ನೀಡಿತ್ತು.

ಡಿ. 6ರಂದು ತೆರಳಿದ ತಂಡಕ್ಕೆ ಗಿರಿಗದ್ದೆ ಮಹಾಲಿಂಗೇಶ್ವರ ಭಟ್‌ರ ಮನೆಯಲ್ಲಿ ಶ್ರೀ ದೇಗುಲದ ಸಮಿತಿ ವತಿಯಿಂದ ಪ್ರಸಾದ ಹಾಗೂ ಗುರುವಾರ ಬೆಳಗ್ಗಿನ ಉಪಾಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next