Advertisement

ಕುಜದ ಮೂಲ ಏನಾದರು ಬಲ್ಲಿರಾ?

12:29 PM Jan 07, 2017 | |

ಭಾರತೀಯ ಜೋತಿಷ್ಯಶಾಸ್ತ್ರ ಕುಜಗ್ರಹವನ್ನು ಒಂದು ವಿಶಿಷ್ಟ ಆವರಣದಲ್ಲಿ ಕಟ್ಟಿಟ್ಟಿದೆ. ಕುಜನನ್ನು ಭೂಮಿಪುತ್ರ ಎಂದು ಬಣ್ಣಿಸಲಾಗಿದೆ. ಉರಿಗಣ್ಣಿನ ಶಿವನ ರೇತಸ್ಸಿನ ಶಾಖವನ್ನು ಬಸಿರಲ್ಲಿ ಸಹಿಸಲಾಗದ ಪಾರ್ವತಿ ಬಸಿರನ್ನು ಭೂಮಂಡಲಕ್ಕೆಸೆಯಲಾಗಿ ಭೂಮಿಯೇ ಕುಜನ ತಾಯಿಯಾದಳು. ಹೀಗಾಗಿಯೇ ಧರಣಿ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಂ, ಕುಮಾರಂ ಶಕ್ತಿ ಹಸ್ತಂಚ ಮಂಗಳಂ ಪ್ರಣಮಾಮ್ಯಹಂ ಎಂದು ನಮ್ಮ ದಾರ್ಶನಿಕರು ಕುಜನನ್ನು ಬಣ್ಣಿಸಿದ್ದಾರೆ. ಅಂದರೆ ಶಕ್ತಿ ನೀಡುವವನು ಎಂದರ್ಥ. ಜೋತಿಷ್ಯಶಾಸ್ತ್ರ ನೈಸರ್ಗಿಕವಾಗಿ ಅಶುಭ ಗ್ರಹಗಳ ಪಟ್ಟಿಗೆ ಕುಜನನ್ನು ಸಮಾವೇಶಗೊಳಿಸುತ್ತದೆ. ಜಗತ್ತಿನ ಭಯಕ್ಕೆ ಕಾರಣನಾದರೂ ಭಯಕ್ಕೆ ಕಾರಣನಾಗುವ ಅಂಶಗಳನ್ನು ಜಾತಕದಲ್ಲಿ ಕುಜ ತುಂಬುತ್ತಾನೆ. ಶಿವನ ಪತ್ನಿ ಪಾರ್ವತಿಗೆ ತನ್ನ ಭ್ರೂಣಾವಸ್ಥೆಯಲ್ಲೇ ಉರಿಗೆ ಕಾರಣನಾದ ಕುಜ ಯುಕ್ತನಾಗಿರದೇ ಇದ್ದರೆ ಜಾತಕದಲ್ಲಿನ ವಿಷಮ ಪರಿಣಾಮಗಳು ಜಾಸ್ತಿಯಾಗುತ್ತದೆ. 

Advertisement

ಕುಜನ ಉರಿಬಾಧೆಯನು ತಗ್ಗಿಸಲು ಮಂಗಳ ಚಂಡಿಕಾ ಯಂತ್ರವನ್ನು ತಾಂತ್ರಿಕರು ರೂಪಿಸಿಕೊಡುತ್ತಾರೆ. ಆದರೆ ಇಂಥ ಮಾಂತ್ರಿಕರು ಸಾತ್ವಿಕರಾಗಿ ಅವಧೂತ ಶಕ್ತಿ ಸಂಚಿತರಾಗಿ ಶಕ್ತಿ ಆರಾಧಕರಾಗಿರಬೇಕು. ಶಕ್ತಿ ಉಪಾಸನೆ ಮಾರ್ಗಕ್ಕೆ ಶಿಷ್ಟತೆ ಬೇಕು.ಹೀಗಾಗಿ ಕುಜನ ನಿಕ್ಷೇಪಕ್ಕೆ ಮಂಗಳ ಚಂಡಿಕಾ ಯಾಗ ಪರಿವರ್ತನೆಗೊಳ್ಳುವ ಸೋಜಿಗವೂ ಇದೆ. ರಕ್ಷಣೆಗೆ ಅಭಯ ಹಸ್ತ ನೀಡುವ ಜಗನ್ಮಾತೆ ದೇವಿಯಾಗಿಯೂ ಮಂಗಳನು ಪ್ರಕಟಗೊಳ್ಳುತ್ತಾನೆ. ಸನ್ಮಂಗಳವನ್ನು ಸರ್ವತ್ರವಾಗಿ ಒದಗಿಸುವ ಇಚ್ಛಿಸಿದ್ದನ್ನು ಅಕ್ಷರಶಃ ನೀಡುವ ಕಾಮಧೇನುವಾಗುತ್ತಾನೆ. ಭಾರತೀಯ ಜೋತಿಷ್ಯ ಶಾಸ್ತ್ರ ಜಗನ್ಮಾಂತ್ರಳಾಗುವ ಮಂಗಳನನ್ನು ಶುಕ್ರನೊಟ್ಟಿಗೆ ಇದ್ದಾಗ ಇದೊಂದು ಅಶುಭ ಸಂಯೋಜನೆಯಾಗಿಯೇ ಪರಿಗಣಿಸುತ್ತದೆ. ಉರಿಯನ್ನು ಹೊತ್ತ ಮಂಗಳನನ್ನು ಕೋಮಲತೆಗಾಗಿನ ಹಂಬಲದ ಶುಕ್ರನನ್ನು ಕೆಂಡದ ಮೇಲೆ ನಿಲ್ಲಿಸುತ್ತದೆ. ಹೀಗಾಗಿ ಕುಜ ಶುಕ್ರ ಸಂಯೋಜನೆ ಕಾಮದ ವಿಚಾರದಲ್ಲಿ ಒಲವಿನ ಮಂಟಪ  ಕಟ್ಟುವ ಸುಹಾಸಕರತೆಯನ್ನು ಒದಗಿಸಬಹುದು. ಕೊಂಚ ತಪ್ಪಿದೆ ಸ್ವೇಚ್ಛೆಯ ಬೆಂಕಿಯಲ್ಲಿ ಬೇಯಿಸಲೂ ಬಹುದು. ಕುಜನ ಪತ್ನಿಯ ಹೆಸರು ಶಕ್ತಿದೇವಿ. ಆದರೆ ಶುಕ್ರ ಗ್ರಹ ಶಕ್ತಿದೇವಿಯಾಗಿ ಕುಜನ ಜೊತೆ ಇರಲಾಗದು. ಇದ್ದಲ್ಲಿ ಇಲ್ಲಸಲ್ಲದ ಪರಿಣಾಮಗಳೇನು 

ಸಾಧ್ಯವಾಗುವುದಕ್ಕೆ ಕಾರಣವಾಗುತ್ತದೆ. ಹೀಗೆಂದ ಮಾತ್ರಕ್ಕೆ ಅಲ್ಲಸಲ್ಲದ ಪರಿಣಾಮಗಳು ಸಂಭವಿಸಲಾಗದ ಸಂದರ್ಭ ಬರಬಾರದು ಎಂದಲ್ಲ. ಶುಭ ದೃಷ್ಟಿ ಇದ್ದಾಗ (ಶುಭ ಗ್ರಹವೊಂದು ಈ ರೀತಿಯಾದ ಕುಜಶುಕ್ರ ಸಂಯೋಜನೆಯನ್ನು ದೃಷ್ಟಿಸಿದರೆ) ಅನಾಹುತಗಳು ತಪ್ಪುತ್ತದೆ. ಯೋಗಕಾರಕರಾದಾಗಲೂ ಅಶುಭ ಒದಗಲಾರದು.

ಅರವತ್ತರ ದಶಕದ ಪ್ರಸಿದ್ಧ ನಟಿ ಹಾಗೂ ಕುಜ ಶುಕ್ರ ಯುತಿ
ಈಕೆ ದುರಂತ ನಾಯಕಿ ಎಂದೇ ಪ್ರಸಿದ್ಧಳಾದವಳು. ಚಿತ್ರರಂಗದಲ್ಲಿ ಮನೋಜ್ಞ ಅಭಿನಯದ ಪ್ರತಿಭಾವಂತ ನಟಿ. ವಾಸ್ತವವಾಗಿ ಈಕೆಯ ಜಾತಕದಲ್ಲಿನ ಕುಜಶುಕ್ರ ಯುತಿ ಏಕಾದಶ ಸ್ಥಾನದಲ್ಲಿದ್ದು ಲಾಭಕ್ಕೆ ಪ್ರಸಿದ್ಧಿಗೆ ಕೂಡಾ ಈ ಸಂಯೋಜನೆ ಸಹಕರಿಸಬೇಕು. ಕುಜನು ಏಕಾದಶದಲ್ಲಿರುವಾಗ ದೋಷಕಾರಕನಂತೂ ಅಲ್ಲ. ಆದರೆ ಶುಕ್ರನ ಜೊತೆಗೆ ಬುಧನ ಮನೆಯಾದ ಮಿಥುನದಲ್ಲಿರುವುದು ಲಾಭ, ಪ್ರತಿಭೆ ಪ್ರಸಿದ್ಧಿಯ ಜೊತೆಗೆ ವ್ಯಕ್ತಿತ್ವಕ್ಕೆ ಬಿರುಕು ತರುವ ಅಸಮತೋಲನವನ್ನು ಕೊಡುತ್ತದೆ. ಬುಧನು ಈಕೆಯ ಜಾತಕದ ವ್ಯಕ್ತಿತ್ವದ ಸಿದ್ಧಿಗೆ ಕಾರಣನಾಗುವ ಸಿಂಹಲಗ್ನದಲ್ಲಿ ಗುರುವಿನ ಜೊತೆಗಿದ್ದರೂ ಕೇತು ಗ್ರಸ್ತನಾಗಿ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಾನೆ. ಬಾಳ ಸಂಗಾತಿಯ ಸ್ಥಳದಲ್ಲಿ ರಾಹು ದೋಷ ಬೇರೆ. ಜೀವನದಲ್ಲಿ ಜೊತೆಯಾದ ಗಂಡಸರು ಬಯಸಿದ್ದು ಈ ನಟಿಯನ್ನು ಪ್ರೀತಿವಿಶ್ವಾಸಗಳಿಗಿಂತ ಹೆಚ್ಚಿಗೆ ಅನ್ಯ ಕಾರಣಕ್ಕೆ ಕೇತುವಿನ ಕಾರಣಕ್ಕೆ. ಮಾನಸಿಕ ಸ್ತರದಲ್ಲಿ ದುರ್ಬಲಳೇ ಆಗಿರುವ ನಟಿ ಪುರುಷನನ್ನು ನಂಬಿ ನಿರೀಕ್ಷಿತ ಸುರಕ್ಷೆಯನ್ನು ಪಡೆಯದಾದಳು. ವಿಫ‌ಲ ವೈವಾಹಿಕ ಜೀವನ. ಮದ್ಯಪಾನಕ್ಕೆ ಶರಣಾದಳು. ಅನಾಥೆಯೇ ಆದಳು. ಕೇವಲ ನಲವತ್ತು ವರ್ಷಗಳಲ್ಲಿ ಜೀವನಕ್ಕೆ ಅಂತ್ಯ ಒದಗಿತ್ತು. ರಂಗು ತುಂಬಿಕೊಂಡು ಮೆರೆಯಬಹುದಾಗಿದ್ದ ನಟಿಗೆ ಕೇತು ದಶಾಕಾಲ ಬದುಕಲು ಅವಕಾಶ ನೀಡಲಿಲ್ಲ. ಮೇಲಿಂದ ಸಾಡೇ ಸಾತಿ ಶನಿಕಾಟ. ಧರ್ಮಕರ್ಮಾಧಿಪಯೋಗ ನಿರ್ಮಿಸಿ ರಾಜಮರ್ಯಾದೆಯನ್ನು ಒದಗಿಸಿದ್ದರೂ ಕುಜಶುಕ್ರರು ನರಳಿಸಿದರು. ಶುಭ ದೃಷ್ಟಿ ಇರಲಿಲ್ಲ. 

ಬಿಲ್‌ಕ್ಲಿಂಟನ್‌ ಮತ್ತು ಕುಜ ಶುಕ್ರ ಯುತಿ
ದುಃಸ್ಥಾನದಲ್ಲಿ ಕುಜಶುಕ್ರಯುತಿ ಇದ್ದ ಬಿಲ್‌ ಕ್ಲಿಂಟನ್‌ ಮೋನಿಕಾ ಲೆನನೆಸ್ಕಿ ಎಂಬ ಮಾಯಾ ಕಾಮಿನಿಯ ಪ್ರಕರಣದಲ್ಲಿ ನರಳಿದವರೇ ಆದರು. ಶನಿಕಾಟ ಸಾಡೇಸಾತಿ ರೂಪದಲ್ಲಿದ್ದಾಗಲೇ ಕ್ಲಿಂಟನ್ನಮಾಯಾಂಗನೆಯ ಪ್ರೇಮಪಾಠದಲ್ಲಿ ಸಿಕ್ಕುಬಿದ್ದರು. ಶುಭ ದೃಷ್ಟಿ ಇರದಿರುವುದರಿಂದ ನರಳಿದರು. ಆದರೆ ಇವರ ಜಾತಕದಲ್ಲಿಯೂ ಆ ಮೇಲೆ ತಿಳಿಸಿದ ನಟಿಯ ಜಾತಕದಲ್ಲಿಯೂ ನಡುವಿದ್ದ ಅಂತರವೆಂದರೆ ದೈನೇಸಿ ಸ್ಥಿತಿಗೆ ಒಯ್ಯಲು ಸಾಧ್ಯವಾಗದಂಥ ಧರ್ಮಕರ್ಮಾದಿಪ ಯೋಗವು ಬೆಸೆದುಕೊಂಡ ಗಜಕೇಸರಿಯೋಗ ಸಂಪನ್ನತೆಯಿಂದ ಆದರೂ ಶನೈಶ್ಚರ ಸ್ವಾಮಿ ಕುಜಶುಕ್ರಯುತಿಯನ್ನೇ ಆಯುಧವಾಗಿಸಿಕೊಂಡು ಸಾಡೆಸಾತಿಯ ಸಂದರ್ಭದಲ್ಲಿ ಕರ್ಮಸ್ಥಾನಕ್ಕೆ ಬಂದಾಗ ಗೋಳುಹೊಯ್ದು ಕಾಡಿದ್ದಾನೆ. ಅದು ಇದೀಗ ಇತಿಹಾಸ. ಐತಿಹಾಸಿಕ ವ್ಯಂಗ್ಯ. 

Advertisement

ಅಬ್ದುಲ್‌ ಕಲಾಂ ಮತ್ತು ಕುಜಶುಕ್ರ ಯುತಿ
ನೀಚಭಂಗ ರಾಜಯೋಗ ಪಡೆದು ಶುಭಕರನಾದ ಗುರು ದೃಷ್ಟಿ ಪಡೆದ ಚಂದ್ರನ ಕಾರಣದಿಂದ ಅಬ್ದುಲ್‌ ಕಲಾಂ ಅವರ ನೌತಿಕಶಕ್ತಿಯನ್ನು ತುಂಡರಿಸಲು ಕುಜಶುಕ್ರಯುತಿಗೆ ಸಾಧ್ಯವಾಗಲಿಲ್ಲ. ಬದಲು ಈ ಯುತಿಯ ಅಪೂರ್ವವಾದ ರಾಜಯೋಗವನ್ನು ಒದಗಿಸಿ ಕಲಾಂ ಅವರನ್ನು ರಾಷ್ಟ್ರಪತಿ ಹುದ್ದೆಯವರೆಗೆ ಮೇಲೇರಿಸಿತು. ಆದರೂ ಈ ಯೋಗ ತನ್ನ ದುಷ್ಟಸ್ವಭಾವವನ್ನು ಕಲಾಂ ಪಾಲಿಗೆ ಒದಗಿಸಿದ್ದು ಏನೆಂದರೆ ಪರಿಶುದ್ಧಗೊಂಡ ಮಟ್ಟ ಒಂದು ಮಿತಿಯನ್ನು ದಾಟಿ ಕಲಾಂ ಅವರನ್ನು ವಿವಾಹದಿಂದ ವಂಚಿಸಿತು. ಕಲಾಂ ಮದುವೆಯಾಗಲೇ ಇಲ್ಲ. ಹೊರತು ಪರಿಶುದ್ಧತೆಯನ್ನು ಕಸಿಯಲು ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ಕುಜ, ಶುಕ್ರನ ಒಟ್ಟಿಗೆ ಇದ್ದಾಗ ಅಗತ್ಯವಾಗಿ ನೈತಿಕತೆಯಲ್ಲಿ ಅಸಮತೋಲನ ತರುತ್ತಾನೆಂಬ ನಿಯಮ ಎಲ್ಲಾ ಸಲವೂ ಸರಿಯಾದುದಲ್ಲ. ಅಬುœಲ್‌ ಕಲಾಂ ಅಂಥವರು ಅಪವಾದವಾಗುತ್ತಾರೆ.. ಹಿಟ್ಲರ್‌, ಚಾಪ್ಲಿನ್‌ ಅಂಥವರು ಮತ್ತೂಂದು ರೀತಿಯ ಭಿನ್ನತೆಗಳನ್ನು ಪಡೆಯುತ್ತಾರೆ. ರಾಜಯೋಗಕ್ಕೆ ಕಾರಣವಾಗುವ ವಿಶೇಷತೆಗೆ ಈ ಸಂಯೋಜನೆಯ ವಿಶಿಷ್ಠಶಕ್ತಿ ತನ್ನದೇ ಆದ ಬೆಂಬಲವನ್ನು ಒದಗಿಸುತ್ತದೆ. ಎಚ್ಚರದಿಂದಲೇ ಜನ್ಮಕುಂಡಲಿಯನ್ನು ಪರಿಶೀಲಿಸಿ ನಿರ್ದಿಷ್ಟ ಅಭಿಪ್ರಾಯಕ್ಕೆ ತಳಹದಿ ಒದಗಿಸಬೇಕು. ಇದನ್ನು ಬಿಟ್ಟು ಆತುರದ ಅಭಿಪ್ರಾಯ ಮಂಡಿಸಬಾರದು. ಕುಜಶುಕ್ರ ಯುತಿಯು ಅನೇಕ ರೀತಿಯ ಚೈತನ್ಯವನ್ನು ವ್ಯಕ್ತಿತ್ವಕ್ಕೆ ತುಂಬುವ ಸಂಜೀವಿನಿಯೂ ಹೌದು. ಹೀಗಾಗಿ ಕುಜಶುಕ್ರರ ವಿಚಾರವಾಗಿ ಆಳವಾದ ಅಧ್ಯಯನ ನಡೆಸಿಯೇ ಅಭಿಪ್ರಾಯ ನೀಡಬೇಕು. ಈ ಗ್ರಹದ ಕುರಿತಾಗಿ ‚ಷಣ್ಮುಖನನ್ನು ಆರಾಧಿ ಸಿದರೆ ಕುಜನಿಂದ ಒದಗುವ ಪೀಡೆಗಳು ದೂರವಾಗುತ್ತವೆ ಹಾಗೂ ಒಳಿತುಗಳು ಇನ್ನಷ್ಟು ಫ‌ಲಕಾರಿಯಾಗಿ ಅನೇಕರೀತಿಯ ಸಂಪನ್ನತೆಯನ್ನು ಪ್ರಧಾನಿಸುತ್ತದೆ. 

 ಷಣ್ಮುಖನು ನಮ್ಮ ಅರಿ ಷಡ್ವರ್ಗಗಳನ್ನು ನಿಯಂತ್ರಿಸುವ ಬಲಿಷ್ಠ ದೇವತೆಯಾಗಿದ್ದಾನೆ. ಕೃತ್ತಿಕೆ ಗಳು ಎಂಬ ಆರು ನಕ್ಷತ್ರಗಳು ಆರು ಮಂದಿ ತಾಯಂದಿರಾಗಿ ಷಣ್ಮುಖನಿಗೆ ಹಾಲೂಡಿಸಿದರು. ಹೀಗಾಗಿ ಆರು ಮುಖಗಳು ಮೂಡಿ ಕುಮಾರಸ್ವಾಮಿ ಷಣ್ಮುಖನಾದನು. ಈತ ಉಗ್ರ ಸ್ವಭಾವದವನು ಹೌದಾದರೂ ಕರುಣಾಮೂರ್ತಿಯೂ ಹೌದು. ಜಾತಕದಲ್ಲಿ ಒಬ್ಬ ವ್ಯಕ್ತಿಯ ವಿಚಾರದಲ್ಲಿ ಉಗ್ರ ಸ್ವಭಾವನ್ನು ಒದಗಿಸಿ ಸಮರ್ಥವಾದ ಧೈರ್ಯಸ್ಥ ನನ್ನಾಗಿಯೂ ಪ್ರಶಂಸೆಗೆ ಗುರಿ ಮಾಡಬಹುದು. ತಪ್ಪಿದರೆ ಉಗ್ರ ಸ್ವಭಾವದಿಂದ ಜನವಿರೋಧಿಯಾಗಿ ಕ್ರೂರಿಯನ್ನಾಗಿಸಿಯೂ ಬಿಡ ಬಹುದು. ಒಟ್ಟಿನಲ್ಲಿ ಕುಜ ದೋಷ ಗಳು ಹೇಗೆ, ಏಕೆ, ಎಷ್ಟು ಎಂಬುದನ್ನೆಲ್ಲಾ ಮುಂದಿನವಾರ ಚರ್ಚಿಸೋಣ.

ಅನಂತಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next