Advertisement
ಶ್ವಾಸಕೋಶ ಸಂಬಂಧಿ ರೋಗ ಹೆಚ್ಚಳ: ಚಳಿ ಮತ್ತು ಮಂಜಿನ ವಾತಾವರಣದ ಹಿನ್ನೆಲೆ ಅಸ್ತಮಾ, ಉಬ್ಬಸ ಸೇರಿದಂತೆ ಶ್ವಾಸಕೋಶ ಸಂಬಂಧಿ ರೋಗಿಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ವಾಕ್ಸಿನ್ ಹಾಕಿಸಿಕೊಳ್ಳಲು ಬರುವವರು ಹಾಗೂ ರೋಗ ಲಕ್ಷಣ ಹೊಂದಿ ರುವವರು ಜೊತೆಯಲ್ಲಿಯೇ ನಿಂತಿದ್ದು, ಆರೋಗ್ಯ ಇಲಾಖೆ ಯಾವುದೇ ಮುಂಜಾ ಗ್ರತಾ ಕ್ರಮ ವಹಿಸದೇ ಇರುವುದು ಕಂಡು ಬಂದಿತ್ತು.
Related Articles
Advertisement
ಅಧಿಕಾರಿ ವಲಯದಲ್ಲೂ ಆತಂಕ: ಈಗಾಗಲೇ ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು ಎಲ್ಲರೂ ಹೋಂ ಕ್ವಾರೆಂಟೈನ್ ಆಗಿದ್ದಾರೆ. ಕೋವಿಡ್ ಹಬ್ಬುವಿಕೆ ಹೀಗೆ ಮುಂದುವರೆದರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವುದು ಹೇಗೆ ಎಂಬ ಆತಂಕವನ್ನು ಸ್ವತಃ ಅಧಿಕಾರಿಗಳೇ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಯಷ್ಟೆ ಅಲ್ಲ, ಜಿಲ್ಲೆಯ ಎಲ್ಲ ತಾಲೂಕು ಹೋಬಳಿ ಹಾಗೂ ಹಳ್ಳಿಗಳಲ್ಲೂ ಕೂಡ ಸೋಂಕು ಹಬ್ಬುತ್ತಿರುವುದರಿಂದ ಆಸ್ಪತ್ರೆಗಳಿಗೆ ಬಂದು ಹೋಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಮಾಸ್ಕ್ ಬಳಕೆ ಇಲ್ಲ: ಸರ್ಕಾರ ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸಿದರೂ ಕೂಡ ಜನ ಮಾಸ್ಕ್ ಇಲ್ಲದೇ ಓಡಾಡುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೆ ಸಾಮಾಜಿಕ ಅಂತರ ಕೂಡ ಇಲ್ಲ, ಹೀಗಾಗಿ ವೇಗವಾಗಿ ಹಬ್ಬುತ್ತಿದೆ. ಕುದೂರಿನ ಬಹುತೇಕ ರಸ್ತೆಗಳು, ಅಂಗಡಿ-ಮುಂಗಟ್ಟುಗಳು, ಮಾರುಕಟ್ಟೆ ಹೀಗೆ ಎಲ್ಲೆಂದರಲ್ಲಿ ಜನ ಜಂಗುಳಿ ಇರುವುದರಿಂದ ಕೊರೊನಾ ಹೆಚ್ಚಾಗುತ್ತಿದೆ.
ಸದ್ಯ 10ಗಂಟೆಯಿಂದ ನೈಟ್ ಕಫ್ಯೂ ಜಾರಿಯಲ್ಲಿದೆ. ಆದರೆ ಅಷ್ಟರೊಳಗೆ ಜನರ ಓಡಾಟ ಕೂಡ ಹೆಚ್ಚಾಗಿದ್ದು, ಈ ವೇಳೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈಗಾಗಲೇ ವೀಕೆಂಡ್ ಕರ್ಫ್ಯೂಗೆ ಕುದೂರಿನಲ್ಲೂ ಡ ವಿರೋಧ ವ್ಯಕ್ತವಾಗಿದೆ. ಆದರೇ ವೀಕೆಂಡ್ ಕರ್ಫ್ಯೂ ಮುಂದುವರೆಸಬೇಕಾ..?ಬೇಡವೋ ಎಂಬ ನಿರ್ಧಾರವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಸರ್ಕಾರಕ್ಕೆ ಸಲಹೆ ನೀಡಲಿದ್ದು ಸರ್ಕಾರ ಶುಕ್ರವಾರ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸಲಿದೆ.