Advertisement
ಇತಿಹಾಸ ಪ್ರಸಿದ್ಧ ಹೊಸದುರ್ಗ ಕೋಟೆ, ಬೇಕಲ ಕೋಟೆಗಳ ಸಮಾನಾಂತರದಲ್ಲಿ ಉಳಿದುಕೊಂಡಿರುವ ಮತ್ತೂಂದು ಕೋಟೆಯೇ ಚಿತ್ತಾರಿ ಕೋಟೆ. ಪಕ್ಕದಲ್ಲಿ ಪ್ರಶಾಂತವಾಗಿ ಹರಿಯುತ್ತಿರುವ ಚಿತ್ತಾರಿ ಹೊಳೆ, ಹಚ್ಚ ಹಸುರಿನ ಬಯಲು ಸೀಮೆಗೆ ಸ್ವಾಗತ ಬಯಸುವಂತೆ ಓಲಾಡುವ ತೆಂಗಿನಗರಿಗಳ ಪರಿ, ಕಡಲ ಕಿನಾರೆಯ ಅಲೆಗಳ ಭೋರ್ಗರೆತ ಹಾಗೇ ಮುನ್ನೆಡೆದರೆ ನಿಮಗೆ ಮಂಗಳಕರ ಘಂಟಾನಾದ ಕೇಳಿಸುತ್ತದೆ. ಜಲಾವೃತ ದ್ವೀಪ ಪ್ರದೇಶದಲ್ಲಿ ಗುಡಿಗೋಪುರ ಕಾಣುತ್ತದೆ ಹೌದು, ಇದೇ ಕುದ್ರು ಶ್ರೀ ಮೂಕಾಂಬಿಕೆಯ ಸನ್ನಿಧಿ. ಈ ದೇವಿ ಭಕ್ತರ ನೋವು ಮರೆಸಿ ಹರಸುತ್ತಾಳೆ ಎಂಬ ನಂಬಿಕೆ ಆಸ್ತಿಕರಲ್ಲಿ ಹಾಸುಹೊಕ್ಕಾಗಿದೆ. ಶ್ರೀ ಕ್ಷೇತ್ರದ ಐತಿಹ್ಯ ಸುಮಾರು 15ನೇ ಶತಮಾನದಷ್ಟು ಹಳೆಯದು.
Related Articles
ಇಲ್ಲಿನ ಮತ್ತೂಂದು ಆಕರ್ಷಣೆಯೆಂದರೆ ನವರಾತ್ರಿ ಮಹೋತ್ಸವ. ಬೇರೆಡೆ ಒಂಬತ್ತು ದಿನಗಳ ಉತ್ಸವವಿದ್ದರೆ ಈ ದೇಗುಲದಲ್ಲಿ ಹನ್ನೊಂದು ದಿನಗಳ ನವರಾತ್ರಿ ಉತ್ಸವವಿದೆ. ಈ ಆಚರಣೆಗೂ ಒಂದು ಐತಿಹ್ಯವಿದೆ. ಕೊಲ್ಲೂರಿನಲ್ಲಿ ನವರಾತ್ರಿ ಉತ್ಸವ ಮುಕ್ತಾಯಗೊಂಡ ದಿನವೇ ಕುದ್ರುವಿನಲ್ಲಿ ಕೊನೆಯ ಪೂಜೆ ನಡೆಯುತ್ತದೆ. ಕೊಲ್ಲೂರಿನ ಮೂಕಾಂಬಿಕೆ ಬಳಿಕ ಕುದ್ರುವಿಗೆ ಆಗಮಿಸುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಶ್ರೀ ಮೂಕಾಂಬಿಕೆ ದೇಗುಲವು ಧರ್ಮಕ್ಷೇತ್ರವಾಗಿ ಧಾರ್ಮಿಕತೆಯನ್ನು ಉಳಿಸಿ ಬೆಳೆಸುವಲ್ಲಿ ಸರಕಾರ ಯಶಸ್ವಿಯಾಗಿದೆ. ಈ ದೇಗುಲವು ಅದೆಷ್ಟೋ ವರ್ಷಗಳ ಬಳಿಕ ಜೀರ್ಣೋದ್ಧಾರ ಹೊಂದುವಂತಾಗಿ ಬ್ರಹ್ಮಕಲಶದ ಸಂಭ್ರಮವನ್ನು ಎದುರು ನೋಡುತ್ತಿದೆ. ಪುರಾತನ ದೇವಾಲಯಗಳಲ್ಲಿ ಒಂದು.
Advertisement
ದಾರಿ ಹೇಗೆ?ಮಂಗಳೂರಿನಿಂದ ಕುದ್ರು ಮೂಕಾಂಬಿಕಾ ದೇವಾಲಯ ಸುಮಾರು 1.45 ಗಂಟೆ ದೂರ ಅಂದರೆ ಸುಮಾರು 73 ಕಿ.ಮೀ. ದೂರದಲ್ಲಿದೆ. ಕಾಸರಗೋಡು ಮುಖಾಂತರ ಕುದ್ರು ತಲುಪಲು ಸಾಕಷ್ಟು ಬಸ್‌ಗಳಿವೆ. ಕಾಸರಗೋಡಿನಿಂದ ಕುದ್ರು ಸುಮಾರು 21 ಕಿ.ಮೀ. ದೂರದಲ್ಲಿದೆ. ವಾಯುಮಾರ್ಗವಾಗಿ ಸಾಗುವವರಿಗೆ ಮಂಗಳೂರು ವಿಮಾನ ನಿಲ್ದಾಣವೇ ಹತ್ತಿರ. ಕಣ್ಣೂರು ವಿಮಾನ ನಿಲ್ದಾಣದಿಂದ ಕ್ಷೇತ್ರಕ್ಕೆ ಸುಮಾರು 2.15 ಗಂಟೆಯ ದಾರಿ. ಮಂಗಳೂರಿನಿಂದ ಕುದ್ರು ಮೂಕಾಂಬಿಕಾ ದೇವಾಲಯ ಸುಮಾರು 1.45 ಗಂಟೆ ದೂರ ಅಂದರೆ ಸುಮಾರು 73 ಕಿ.ಮೀ. ದೂರದಲ್ಲಿದೆ. ಕಾಸರಗೋಡು ಮುಖಾಂತರ ಕುದ್ರು ತಲುಪಲು ಸಾಕಷ್ಟು ಬಸ್‌ಗಳಿವೆ. ಕಾಸರಗೋಡಿನಿಂದ ಕುದ್ರು ಸುಮಾರು 21 ಕಿ.ಮೀ. ದೂರದಲ್ಲಿದೆ. ವಾಯುಮಾರ್ಗವಾಗಿ ಸಾಗುವವರಿಗೆ ಮಂಗಳೂರು ವಿಮಾನ ನಿಲ್ದಾಣವೇ ಹತ್ತಿರ. ಕಣ್ಣೂರು ವಿಮಾನ ನಿಲ್ದಾಣದಿಂದ ಕ್ಷೇತ್ರಕ್ಕೆ ಸುಮಾರು 2.15 ಗಂಟೆಯ ದಾರಿ.