Advertisement
ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ಸ್ವಾಗತಿಸಿ ಪ್ರಸ್ತಾವನೆಗೈದು, ತುಳುನಾಡಿನ ಸಾಂಪ್ರದಾಯಿಕ ಕಲೆಗಳು ದೇಶ ವಿದೇಶಕ್ಕೂ ಪಸರಿಸಬೇಕು ಎಂಬ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದೆ ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭ ನಾನಾ ರೀತಿಯ ಕಾರ್ಯಕ್ರಮ ಆಯೋಜಿಸಲು ಪ್ರತಿಷ್ಠಾನ ಮುಂದಾಗಿದೆ. ಪಿಲಿ ಪರ್ಬದಲ್ಲಿ ಗೆದ್ದವರಿಗೆ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದರು.
ಮಧುರಾಜ್ ಮತ್ತು ಶರ್ಮಿಳಾ ನಿರೂಪಿಸಿದರು. ಆಕರ್ಷಕ ವೇದಿಕೆ
12 ಹುಲಿವೇಷ ತಂಡಗಳು ಭಾಗವಹಿಸಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾದವು. ಪುಟಾಣಿಗಳು ಕೂಡ ಭಾಗವಹಿಸಿದ್ದು ವಿಶೇಷ. ಪ್ರತೀ ತಂಡಕ್ಕೆ ಸ್ಮರಣಿಕೆ ನೀಡಲಾಯಿತು. ಒಂದು ತಂಡದಲ್ಲಿ 15 ಮಂದಿ ಹುಲಿವೇಷಧಾರಿಗಳು ಇದ್ದು, ಸಾಂಪ್ರದಾಯಿಕ ವ್ಯವಸ್ಥೆಯಡಿ ಇಡೀ ಸ್ಪರ್ಧೆ ನಡೆಯಿತು. ಅಕ್ಕಿಮುಡಿ ಎತ್ತಿ ಹಾಕುವುದು, ಪಲ್ಟಿ ಸೇರಿದಂತೆ ಒಂದೊಂದು ಪ್ರಯೋಗಕ್ಕೂ ಪ್ರತ್ಯೇಕ ಅಂಕಗಳನ್ನು ನಿಗದಿಪಡಿಸಲಾಗಿತ್ತು. ಪ್ರತೀ ತಂಡಕ್ಕೆ 20 ನಿಮಿಷ ಕಾಲಾವಕಾಶ ಇತ್ತು. ಪ್ರವೇಶದ ದ್ವಾರವನ್ನು ಹುಲಿಯ ಮುಖ ಮಾದರಿಯಲ್ಲಿ ರೂಪುಗೊಳಿಸಲಾಗಿತ್ತು. ಸಾವಿರಾರು ಮಂದಿ ಕುಳಿತುಕೊಳ್ಳಲು ಗ್ಯಾಲರಿ ಸಹಿತ ಆಸನ ವ್ಯವಸ್ಥೆ ಮಾಡಲಾಗಿತ್ತು.
Related Articles
ಚಿಕ್ಕ ಮಕ್ಕಳು ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಹೆಚ್ಚಿನವರು ಹುಲಿ ವೇಷ ಮುಖವರ್ಣಿಕೆ (ಫೇಸ್ ಪೈಂಟಿಂಗ್) ಹಾಕಿಸಿಕೊಳ್ಳುತ್ತಿರುವುದು ಕಂಡುಬಂತು. ಉಳಿದಂತೆ ಮುಖವಾಡ ಮಾರಾಟ, ಹುಲಿ ಟೋಪಿ ಮಳಿಗೆ ತಿಂಡಿ-ತಿನಿಸುಗಳ ಮಳಿಗೆಗಳೂ ಇದ್ದವು.
Advertisement