Advertisement

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

07:05 PM Oct 17, 2021 | Team Udayavani |

ಕುಂಬಳೆ: ಸುವರ್ಣಗಿರಿ ತೋಡಿಗೆ 50 ವರ್ಷಗಳ ಹಿಂದೆ ನಿರ್ಮಿ ಸಿದ ಸೇತುವೆ ಅ. 16ರಂದು ಕುಸಿದಿದೆ.

Advertisement

ಕುಬಣೂರು  - ಬೇಕೂರು ಸಂಪರ್ಕಕ್ಕೆ ಅಗಲ ಕಿರಿದಾದ ರಸ್ತೆ ಮತ್ತು ಕೃಷಿಕರಿಗಾಗಿ ನಿರ್ಮಿಸಿದ ಸೇತುವೆ ಇದಾಗಿದ್ದು, ಇತ್ತೀಚೆಗೆ ಗಾಳಿ ಮಳೆಗೆ ದೊಡ್ಡ ಮರವೊಂದು ಸೇತುವೆಯ ಮೇಲೆ ಬಿದ್ದು ಸೇತುವೆಯ ಕಂಬಕ್ಕೆ ಹಾನಿ ಯಾಗಿತ್ತು. ಇದನ್ನು ತೆರವುಗೊಳಿಸಿ ಘನ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಸಣ್ಣ ವಾಹನಗಳು ಸಂಚರಿಸುತ್ತಿತ್ತು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಚುನಾಯಿತರು ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಯ ಭರವಸೆ ನೀಡಿದ್ದರು.

ಇದೀಗ ಮಂಗಲ್ಪಾಡಿ ಮತ್ತು ಪೈವಳಿಕೆ ಪಂ. ಪ್ರದೇಶಕ್ಕೆ ತೆರಳಲು ಸ್ಥಳೀಯರು ರಸ್ತೆ ಸಂಪರ್ಕವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ. ಸಾರ್ವಜನಿಕರು, ಕೃಷಿಕರು ಸುತ್ತು ಬಳಸಿ ತೆರಳಬೇಕಾಗಿದೆ.

ಚುನಾಯಿತ ಜನ ಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿ ಗಣಿಸಿ ಸೇತುವೆ ನಿರ್ಮಿಸಲು ಮುಂದಾ ಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

Advertisement
Advertisement

Udayavani is now on Telegram. Click here to join our channel and stay updated with the latest news.

Next