Advertisement

Yadgiri ನಗರಸಭೆ ಅಧ್ಯಕ್ಷರಾಗಿ ಕು.ಲಲಿತಾ ಆಯ್ಕೆ

03:11 PM Oct 03, 2024 | Team Udayavani |

ಯಾದಗಿರಿ: ನಗರ ಸಭೆಯ ನೂತನ ಅಧ್ಯಕ್ಷರಾಗಿ ವಾರ್ಡ್ ನಂ.5 ರ ಸದಸ್ಯೆ ಕು.ಲಲಿತಾ ಅನುಪುರ ಅವರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ. 16 ರ ಸದಸ್ಯೆ ರುಕೀಯ ಬೇಗಂ ಅವರು ಆಯ್ಕೆಯಾಗಿದ್ದಾರೆ.

Advertisement

ಆ.3ರ ಗುರುವಾರ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಸದಸ್ಯರ‌ ಸಂಖ್ಯಾ ಬಲವನ್ನು ಪ್ರದರ್ಶಿಸಿದ್ದು, ಯಾದಗಿರಿ ಜಿಲ್ಲೆಯ ಲಲಿತಾ ಅಕ್ಕ ಎಂದೇ ಖ್ಯಾತರಾಗಿರುವ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ಕು.ಲಲಿತಾ ಅನಪುರ ಅವರು ಸರ್ವ ಮತಗಳಿಂದ ಅಧ್ಯಕ್ಷ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

ಉಪಾಧ್ಯಕ್ಷೆ ಸ್ಥಾನಕ್ಕೆ ನಗರದ ವಾರ್ಡ್ ನಂ.16 ಸದಸ್ಯೆ ರಕೀಯ ಬೇಗಂ ಅವರು ಬಿಜೆಪಿ ಸದಸ್ಯರ ಮತಗಳಿಂದ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 4 ಜನ ಉಮೇದುಗಾರಿಕೆ‌ ನಡುವೆ‌ ಬಿಜೆಪಿಯ ಇಬ್ಬರು ಸದಸ್ಯರು ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ಆಡಳಿತ ಪಕ್ಷ ಕಾಂಗ್ರೆಸ್ ಗೆ ತೀವ್ರ ಮುಜುಗರ ಉಂಟು ಮಾಡಿದೆ.

Advertisement

ಒಟ್ಟು  ಹಾಜರಿದ್ದ 28 ಸ್ಥಾನಗಳ ಪೈಕಿ 19 ಜನ ಸದಸ್ಯರು ಬಿಜೆಪಿ‌ ಪರವಾಗಿದ್ದು, ಅಧಿಕ ಮತಗಳಿಂದ ಬಿಜೆಪಿ ನಗರಸಭೆ ಗದ್ದುಗೆ ಏರಲು ಯಶಸ್ವಿಯಾಯಿತು.

ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ, ತಹಶಿಲ್ದಾರ್ ಸುರೇಶ ಅಂಕಲಗಿ, ನಗರಸಭೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಸುದ್ದಿಗೋಷ್ಢಿ ನಡೆಸಿ ಮಾಹಿತಿ‌ ನೀಡಿದರು.

ಅಧ್ಯಕ್ಷ ಸ್ಥಾನಕ್ಕೆ ಜಯಮ್ಮ ಎಸ್.ಮಡ್ಡಿ ಹಾಗೂ ಲಲಿತಾ ಮೌಲಾಲಿ ಅನಪುರ ಅವರು‌‌ ನಾಮಪತ್ರ ಸಲ್ಲಿಸಿದ್ದರು ಹಾಗೂ ಗೌಸಿಯಾ ಬೇಗಂ ಮತ್ತು ಅರಾಬಿಕ್ ರುಕೀಯಾ ಬೇಗಂ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುಗಾರಿಕೆಯಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಮತ ಗಳಿಕೆಯಲ್ಲಿ ಲಲಿತಾ ಅನಪುರ ಅವರು 19 ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರುಕೀಯಾ ಬೇಗಂ ಅವರು 19 ಮತಗಳನ್ನು ಪಡೆದಿದ್ದಾರೆ ಎಂದು ಎಸಿ ಹಂಪಣ್ಣ ಸಜ್ಜನ್ ತಿಳಿಸಿದರು.

ಕ್ರಮಬದ್ಧವಾಗಿ ಮತ ಅಂಗೀಕಾರ ಪ್ರಕಾರ ಕೈ ಎತ್ತುವ ಮೂಲಕ ಚುನಾವಣಾ ಪ್ರಕ್ರಿಯೆ ನಡೆಯಿತು. ಯಾವುದೇ ಗೊಂದಲ ಹಾಗೂ ಗಲಾಟೆಯಿಲ್ಲದೆ ಚುನಾವಣಾ ಪ್ರಕ್ರಿಯೆ ಸಂಪನ್ನವಾಯಿತೆಂದು ಅವರು ಹೇಳಿದರು.

ಕಾಲಮಿತಿ‌ ನಂತರ ಬಂದ,‌ ವಿಳಂಬವಾದ ಕಾರಣ ಮೂರು ಜನ ಕಾಂಗ್ರೆಸ್ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. 3 ನಿಮಿಷಗಳ ತಡವಾದ ಕಾರಣ ಅವರ ಇರುವಿಕೆ ನಗಣ್ಯ ಎಂದರು.

ಒಟ್ಟಾರೆ 31 ಚುನಾಯಿತ ಸದಸ್ಯರು ಹಾಗೂ ಲೋಕಸಭಾ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಒಳಗೊಂಡಿದ್ದರು. ಇಂದು (ಆ.3) ನಡೆದ ಚುನಾವಣೆಯಲ್ಲಿ ಒಟ್ಟು 6 ಜನ ಗೈರಾಗಿದ್ದು, 3 ಜನ ಕಾಂಗ್ರೆಸ್ ಹಾಗೂ ಜೆಡಿಎಸ್ ಒಬ್ಬ ಸದಸ್ಯರು ಹಾಗೂ ಎಂಪಿ ಕುಮಾರ ನಾಯಕ ಮತ್ತು ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರ್ ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next