Advertisement
ಈವರೆಗೆ ಯಾವ ಪ್ರೌಢಶಾಲೆಗಳಲ್ಲಿ ಸಮವಸ್ತ್ರ ಪದ್ಧತಿ ಇತ್ತೋ ಆ ಶಾಲೆಗಳಿಗೆ ಕೋರ್ಟ್ ಆದೇಶ ಅನ್ವಯ ಆಗುತ್ತದೆ. ಎಲ್ಲ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ತರಗತಿಗೆ ಹಾಜರಾಗಬೇಕು. ಸಮವಸ್ತ್ರ ಪದ್ಧತಿ ಇಲ್ಲದ ಸಂಸ್ಥೆಗಳಲ್ಲಿ ಎಂದಿನಂತೆ ಶೈಕ್ಷಣಿಕ ಚಟುವಟಿಕೆ ಮುಂದುವರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಆದೇಶ, ನಿಯಮ ಉಲ್ಲಂಘನೆಯಾಗಂತೆ ಎಚ್ಚರ ವಹಿಸಬೇಕು ಎಂದು ಶಾಸಕರು ತಿಳಿಸಿದರು.
Related Articles
ಸಮವಸ್ತ್ರ ವಿವಾದ ಮತ್ತು ಪ್ರಸಕ್ತ ವಿದ್ಯಮಾನಗಳನ್ನು ಪರಿಗಣಿಸಿ ಪ್ರೌಢ ಶಾಲಾ ತರಗತಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಫೆ. 14ರಿಂದ 19ರ ವರೆಗೆ ಎಲ್ಲ ಪ್ರೌಢಶಾಲೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡ ಲಾಗಿದೆ. ಪ್ರೌಢಶಾಲೆಯ 200 ಮೀ. ಸುತ್ತಮುತ್ತ 144 ಸೆಕ್ಷನ್ ಜಾರಿಯಲ್ಲಿ ಇರುವುದರಿಂದ ಅನವಶ್ಯಕವಾಗಿ ಗುಂಪು ಸೇರುವುದು, ಘೋಷಣೆ ಕೂಗುವುದಕ್ಕೆ ಅವಕಾಶ ಇಲ್ಲ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಕೋರಿದ್ದಾರೆ.
Advertisement