Advertisement

ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಮರಳಿದ ಸಾರಿಗೆ ನೌಕರರು

11:54 AM Apr 21, 2021 | Team Udayavani |

ಹುಬ್ಬಳ್ಳಿ: ಮುಷ್ಕರ ಕೈಬಿಟ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ‌ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಲ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಬಹುತೇಕ ಬಸ್ಸುಗಳು ರಸ್ತೆಗಿಳಿಯುತ್ತಿದ್ದು, 11.00 ಗಂಟೆ ವೇಳೆಗೆ ಸಂಚಾರ 2305 ಬಸ್ಸುಗಳ ಪೈಕಿ 1660 ಬಸ್ಸುಗಳು (ಶೇ.72.02) ರಷ್ಟು ಕಾರ್ಯಾಚರಣೆ ಗೊಳ್ಳುತ್ತಿವೆ.

Advertisement

ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಒತ್ತಾಯಿಸಿ ನಡೆಯುತ್ತಿರುವ ಮುಷ್ಕರ 15 ನೇ ದಿನಕ್ಕೆ ಕಾಲಿಟ್ಟಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಕರ್ತವ್ಯಕ್ಕೆ ಹಾಜಾಗುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಪರಿಣಾಮ ಬೆಳಿಗ್ಗೆ 11 ಗಂಟೆ ವೇಳೆಗೆ ಶೇ.72.02 ರಷ್ಟು ಬಸ್ಸುಗಳ ಕಾರ್ಯಾಚರಣೆಗೊಂಡಿವೆ. ಹೀಗಾಗಿ ಹಳೇ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಸಂಚಾರಕ್ಕೆ ಸ್ಥಳವಿಲ್ಲದಂತಾಗಿದೆ.

ಬೆಳಿಗ್ಗಿನಿಂದಲೂ ಘಟಕಕಗಳತ್ತ ಸಿಬ್ಬಂದಿ ಆಗಮಿಸುತ್ತಿದ್ದು, ಬಂದ ಸಿಬ್ಬಂದಿಗೆಲ್ಲಾ ಮಾರ್ಗ ನಿಯೋಜಿಸಿ ಕಳುಹಿಸಲಾಗುತ್ತಿದೆ. ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯ ವಿಭಾಗಗಳಾದ ಹುಬ್ಬಳ್ಳಿ ಗ್ರಾ 165 (184) ಧಾರವಾಡ 99 (204) ಬೆಳಗಾವಿ 141 (325), ಚಿಕ್ಕೋಡಿ180 (298), ಬಾಗಲಕೋಟೆ 304 (304), ಗದಗ 251 (257), ಹಾವೇರಿ 192 (281) ಉತ್ತರ ಕನ್ನಡ 185 (237), ಹು-ಧಾ ನಗರ 143 (210) ಬಸ್ಸುಗಳು ಸಂಚಾರ ಮಾಡಿವೆ. ಸಮಯ ಕಳದೆಂತಲ್ಲಾ ಮತ್ತಷ್ಟು ಬಸ್ಸುಗಳ ಸಂಚಾರ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರ್ಗಾವಣೆ, ಅಮಾನತ್ತು ಹಾಗೂ ವಜಾಗೊಂಡಿರುವ ಸಿಬ್ಬಂದಿ ಸೇರಿದಂತೆ ಕೆಲ ಸಿಬ್ಬಂದಿ ಮಾತ್ರ ಇದೀಗ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದಂತಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಸಿಬ್ಬಂದಿ ಕರ್ತವ್ಯಕ್ಕೆ ಆಗಮಿಸುತ್ತಿದ್ದು, ಇದಕ್ಕೆ ಪೂರಕವಾಗಿ ಹೆಚ್ವಿನ ಸಂಖ್ಯೆ ಬಸ್ಸುಗಳ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next