Advertisement

ಬನ್ನಂಜೆ: ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣ ಉದ್ಘಾಟನೆಗೆ ಸಜ್ಜು

08:01 PM Jan 13, 2022 | Team Udayavani |

ಉಡುಪಿ: ನಗರದ ಬನ್ನಂಜೆ ಯಲ್ಲಿ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣದ ಕಾಮಗಾರಿ ಗಳು ಶೇ.90ರಷ್ಟು ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನೆಗೆ ಸಜ್ಜುಗೊಂಡಿದೆ.

Advertisement

2.50 ಎಕ್ರೆ ಪ್ರದೇಶದಲ್ಲಿ  ನಿರ್ಮಾಣ :

ಬನ್ನಂಜೆಯ ಬಳಿ 29.81 ಕೋ.ರೂ. ವೆಚ್ಚದಲ್ಲಿ ಈ ಕಟ್ಟಡವಿದ್ದು, 2.50 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.

ಅಂಗಡಿಗಳು, ಶೌಚಾಲಯ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು, ನೋಂದಣಿ ಕೇಂದ್ರಗಳು ಇರಲಿವೆ. ಕಟ್ಟಡದ ಒಳಗೆ ಎಸ್ಕಲೇಟರ್‌ ಹಾಗೂ ಲಿಫ್ಟ್ ವ್ಯವಸ್ಥೆ, ಮೆಟ್ಟಿಲು ಕೂಡ ಇರಲಿದೆ. ಈಗಾಗಲೇ ಮೈಸೂರು, ಬೆಂಗಳೂರಿನಲ್ಲಿರುವ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣಗಳಲ್ಲಿ ಎಸ್ಕಲೇಟರ್‌ ವ್ಯವಸ್ಥೆ ಇದೆ. ಕರಾವಳಿಗೆ ಹೋಲಿಸಿದರೆ ಎಸ್ಕಲೇಟರ್‌ ವ್ಯವಸ್ಥೆ ಹೊಂದಿರುವ ಪ್ರಪ್ರಥಮ ಬಸ್‌ ತಂಗುದಾಣ ಇದಾಗಿದೆ.

ಬೇಬಿ ಕೇರ್‌ :

Advertisement

ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ಹಾಗೂ ಬೇಬಿ ಕೇರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ವಿಐಪಿ ಲಾಂಚ್‌, ರಿಸರ್ವೇಶನ್‌ ಕೌಂಟರ್‌, ಪಿಸಿ ಕೊಠಡಿ ಮಾಡಲಾಗಿದೆ.

ಅಂಗವಿಕಲರಿಗೂ ಶೌಚಾಲಯ :

ಎಲ್ಲ ಫ್ಲೋರ್‌ನಲ್ಲಿ ಮಹಿಳೆಯರು, ಪುರುಷರು ಸಹಿತ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ಮಾಡಲಾಗಿದೆ. ಮಾಲ್‌ ರೀತಿಯ 2 ಹಾಲ್‌ಗ‌ಳಿವೆ. ಹಾಲ್‌ಗ‌ಳಲ್ಲಿ ಸಮಾರಂಭ ಅಥವಾ ಮಾಲ್‌ ರೀತಿ ಮಾಡಬಹುದು. ತೆರೆದ ವಿಶಾಲ ಹಾಲ್‌ಗ‌ಳು ಇವೆ.

ಬಹುಕಾಲದ ಬೇಡಿಕೆ :

ಸದ್ಯ 271 ಬಸ್‌ಗಳು ಉಡುಪಿ ನಿಲ್ದಾಣದಿಂದ ವಿವಿಧೆಡೆಗಳಿಗೆ ಸಂಚರಿ ಸುತ್ತಿದೆ. ಉಡುಪಿಯಿಂದ ಎಲ್ಲ ಕಡೆಗೆ ಪ್ರಯಾಣಿಸುವ ಜನರಿದ್ದರೂ ಕೂಡ ಇಲ್ಲಿ ಸುಸಜ್ಜಿತ ಬಸ್‌ತಂಗುದಾಣ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದರು. ಪ್ರಸ್ತುತ ಇರುವ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ ನಗರಸಭೆಯ ಅಧೀನದಲ್ಲಿದೆ.

ಬನ್ನಂಜೆ ಬಸ್‌ ತಂಗುದಾಣದ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ಆದಷ್ಟು ಶೀಘ್ರದಲ್ಲಿ ಇದರ ಉದ್ಘಾಟನೆ ನಡೆಸಿ ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸಲಾಗುವುದು. ಅರುಣ್‌ ಕುಮಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು  

Advertisement

Udayavani is now on Telegram. Click here to join our channel and stay updated with the latest news.

Next