Advertisement

Fuel: ಡೀಸೆಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಕೆಎಸ್‍ಆರ್‌ಟಿಸಿ ಬಸ್, ಪ್ರಯಾಣಿಕರಿಂದ ಹಿಡಿಶಾಪ

09:19 AM May 23, 2024 | Team Udayavani |

ಶಿವಮೊಗ್ಗ: ಶಿವಮೊಗ್ಗದಿಂದ ಕುಂದಾಪುರಕ್ಕೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸಿನ ಡೀಸೆಲ್ ಖಾಲಿಯಾದ ಪರಿಣಾಮ ರಸ್ತೆ ಮಧ್ಯೆ ನಿಂತ ಘಟನೆ ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆ ಬಳಿ ಬುಧವಾರ ಸಂಜೆ ನಡೆದಿದೆ.

Advertisement

ಬುಧವಾರ ಸಂಜೆ 5.30 ರ ವೇಳೆಗೆ ಈ ಘಟನೆ ನಡೆದಿದ್ದು ಪ್ರಯಾಣಿಕರು ಬಸ್ಸಿನ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ ಅಲ್ಲದೆ ಮಾರ್ಗ ಮಧ್ಯೆ ನಿಂತ ಬಸ್ಸಿನಿಂದಾಗಿ ತುರ್ತು ಕಾರ್ಯಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಯಿತು.

ಬಳಿಕ ಸ್ಥಳೀಯ ಜನರ ಸಹಾಯದಿಂದ ಬೇರೆ ಬಸ್ ಮೂಲಕ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಇದನ್ನೂ ಓದಿ: Dinesh Karthik ಪಂದ್ಯ ಸೋಲಿನ ಬೆನ್ನಲೇ ಐಪಿಎಲ್‌ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್

Advertisement

Udayavani is now on Telegram. Click here to join our channel and stay updated with the latest news.

Next