Advertisement

Kottigehara: ಎದೆ ನೋವು ಕಾಣಿಸಿಕೊಂಡರೂ ಸಮಯಪ್ರಜ್ಞೆ ಮೆರೆದ KSRTC ಬಸ್ ಚಾಲಕ

05:19 PM Jun 05, 2024 | Team Udayavani |

ಕೊಟ್ಟಿಗೆಹಾರ: ಮೂಡಿಗೆರೆಯಿಂದ ಮತ್ತಿಕಟ್ಟೆಗೆ ಸಾಗುವ ಸರ್ಕಾರಿ ಬಸ್ ನ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ ಬಣಕಲ್ ನಲ್ಲಿ ಬಸ್ ನಿಲ್ಲಿಸಿ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.

Advertisement

ಬಸ್ ಮೂಡಿಗೆರೆಯಿಂದ ಮತ್ತಿಕಟ್ಟೆ, ಬಾಳೂರು ಹೊರಟ್ಟಿಗೆ ತೆರಳಿ ಶಾಲಾ ಮಕ್ಕಳು ಹಾಗೂ ಇತರೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುವಾಗ ಬಾಳೂರು ಹೊರಟ್ಟಿ ಮಾರ್ಗದಲ್ಲಿ ಬರುವಾಗ ಎದೆ ನೋವು ಕಾಣಿಸಿಕೊಂಡಿದೆ.ಅಲ್ಲಿಂದ ಬಣಕಲ್ ಗೆ ಕೆಲವೇ ಕಿ.ಮಿ. ಅಂತರ ಇರುವುದರಿಂದ ಚಾಲಕ ಗಂಗಾಧರ ಬಸ್ ನಿಧಾನವಾಗಿ ಚಲಾಯಿಸಿ ಬಣಕಲ್ ಪೇಟೆ ಬರುತ್ತಿದ್ದಂತೆ ಬಸ್ ನಿಲ್ಲಿಸಿ ಸಮಾಜ ಸೇವಕ ಆರೀಫ್ ಅವರ ಸಹಾಯ ಪಡೆದು ಬಣಕಲ್ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಡಾ.ಇಕ್ಲಾಸ್ ಅಹಮ್ಮದ್ ಬಳಿ ಆರೋಗ್ಯ ತಪಾಸಣೆ ಮಾಡಿಸಿ ಪ್ರಥಮ ಚಿಕಿತ್ಸೆ ಪಡೆದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಾಲಕನ ಸಮಯ ಪ್ರಜ್ಞೆಯಿಂದ ಶಾಲಾ ಮಕ್ಕಳ ಹಾಗೂ ಹಲವು ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ನಡೆದಿದೆ. ಬಸ್ ನಲ್ಲಿ ಸುಮಾರು 60 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಒತ್ತಡ ಹೇರಲ್ಲ… ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ: ಶೆಟ್ಟರ್

Advertisement

Udayavani is now on Telegram. Click here to join our channel and stay updated with the latest news.

Next