Advertisement

ಸರಕಾರಿ ಬಸ್‌ಗಳ ಮುಖಾಮುಖೀ ಢಿಕ್ಕಿ: 20 ಮಂದಿಗೆ ಗಾಯ

10:58 AM May 10, 2017 | Team Udayavani |

ಉಪ್ಪಿನಂಗಡಿ: ಕೆಎಸ್‌ ಆರ್‌ಟಿಸಿ ಬಸ್‌ಗಳೆರಡು ಮುಖಾ ಮುಖೀ ಢಿಕ್ಕಿ ಹೊಡೆದು ಬಸ್‌ನಲ್ಲಿದ್ದ ಸುಮಾರು 20 ಜನರು ಗಾಯ ಗೊಂಡ ಘಟನೆ ಉಪ್ಪಿನಂಗಡಿ  ಠಾಣಾ ವ್ಯಾಪ್ತಿಯ ಉಪ್ಪಳಿಗೆಯಲ್ಲಿ ಮಂಗಳವಾರ ಸಂಭವಿಸಿದೆ.

Advertisement

ಚಾಲಕ ಮುಗುಳು ಮಲ್ಲಪ್ಪ, ಬೇಲೂರಿನ ರಾಘವೇಂದ್ರ (18)ಇಚ್ಲಂಪಾಡಿಯ ವಿಬಿನ್‌ (17), ಶೆರ್ಲಿ (48), ಕೊಕ್ಕಡದ ಜೆಸ್ಸಿ ಯಾನೆ ಡೆಸ್ಟಿ (38), ಬೇಲೂರಿನ ಉಮೇಶ, ಸಕಲೇಶಪುರದ ನಾಗೇಂದ್ರ, ನೆಲ್ಯಾ ಡಿಯ ಹರ್ಫಾನ್‌, ಚಿಕ್ಕೋಡಿಯ ಉಮರಬ್ಬ, ಮಂಗಳೂರು ಅಳಕೆಯ ಅಶ್ವಿ‌ನಿ (25), ಕುಲಶೇಖರದ ನಿತಿನ್‌ (35), ಕೊಕ್ಕಡದ ಕುಸುಮಾ (62), ನೆಲ್ಯಾಡಿಯ ಮುಫಿÌಝ ಕೆ.ಎಂ. (25), ಕೊಕ್ಕಡದ ದಿಗಂತ್‌ (8), ಕೊಕ್ಕಡದ ನಿತ್ಯಾನಂದ (45), ವಸಂತಿ ಹಾಗೂ ಚನ್ನರಾಯ ಪಟ್ಟಣದ ಮಾಸ್ತಿಗೌಡ (36)  ಸೇರಿ ದಂತೆ ಸುಮಾರು 20 ಮಂದಿ  ಗಾಯಗೊಂಡಿದ್ದು, ಇವರನ್ನು ಪುತ್ತೂರು ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಸುಮಾ ಅವರು ಪುತ್ತೂರು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರೆ, ನಿತ್ಯಾನಂದ ಹಾಗೂ ಮಾಸ್ತಿ ಗೌಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರ ವಾಗಿದೆ. ಅಪರಾಹ್ನ 2:35ರ ಸುಮಾರಿಗೆ ಈ ಅಪಘಾತ ಸಂಭವಿ ಸಿದ್ದು, ಈ ಸಂದರ್ಭ ವಳಾಲು, ನೀರಕಟ್ಟೆ ಸೇರಿದಂತೆ ಈ ಭಾಗದಲ್ಲಿ ಮಳೆ ಸುರಿಯುತ್ತಿತ್ತು. ಎರಡೂ ಬದಿಯ ಹೆದ್ದಾರಿಯಂಚುಗಳಿಗೆ ಮಣ್ಣು ಹಾಕಿ ಸಮತಟ್ಟುಗೊಳಿಸ ಲಾಗಿದ್ದು, ಮಳೆಗೆ ಇದು ಕೆಸರಾಗಿ ರಸ್ತೆ ಕೂಡ ಕೆಸರಾಗಿತ್ತು. ಆದ್ದರಿಂದ ತತ್‌ಕ್ಷಣಕ್ಕೆ ವಾಹನಗಳ ಬ್ರೇಕ್‌ ಕೂಡ ಹಿಡಿಯದಂತಹ ಸ್ಥಿತಿ ಇತ್ತು. ಅಪಘಾತದ ಸಂದರ್ಭ ಪುತ್ತೂರು ನಗರ ಠಾಣಾ ಪೊಲೀಸರು ಅನ್ಯ ಕರ್ತವ್ಯದ ನಿಮಿತ್ತ ಈ ದಾರಿಯಾಗಿ ಹೋಗುತ್ತಿದ್ದು, ಗಾಯಾಳುಗಳನ್ನು ಸಾಗಿಸಲು ಸಾರ್ವಜನಿಕರೊಂದಿಗೆ ತತ್‌ಕ್ಷಣದ ನೆರವು ನೀಡಿದರು. ನೆಲ್ಯಾಡಿ ಎಸ್‌ಡಿಪಿಐ ಆ್ಯಂಬುಲೆನ್ಸ್‌, ಉಪ್ಪಿನಂಗಡಿ 108 ಸೇರಿದಂತೆ ಕೆಲವು ಖಾಸಗಿ ವಾಹನಗಳಲ್ಲಿ ಗಾಯಾಳು ಗಳನ್ನು ವಿವಿಧ ಆಸ್ಪತ್ರೆಗೆ ಸಾಗಿಸಲಾಯಿತು. ಕೆಲವರನ್ನು ಉಪ್ಪಿನಂಗಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರಿಗೆ ಸಾಗಿಸಲಾಯಿತು. ಬಳಿಕ ನೆಲ್ಯಾಡಿ ಹೊರಠಾಣಾ ಪೊಲೀಸ್‌ ಸಿಬಂದಿ, ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆಯಲ್ಲಿ ಕೈಜೋಡಿಸಿದರು. ಬಳಿಕ ಬಸ್‌ಗಳನ್ನು ಕ್ರೇನ್‌ ಸಹಾಯದಿಂದ ಎಳೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಪ್ರಕರಣ ದಾಖಲಾಗಿದೆ.

ಬೆಂಗಳೂರಿನಿಂದ ಕುಂದಾಪುರಕ್ಕೆ ಆಗಮಿಸುತ್ತಿದ್ದ ಕುಂದಾಪುರ ಡಿಪೋದ ಕೆಎ 19 ಎಫ್ 3349 ಕೆಎಸ್ಸಾರ್ಟಿಸಿ ಬಸ್‌ ಹಾಗೂ ಮಂಗಳೂರಿನಿಂದ ಅರಸೀಕೆರೆ ತೆರಳುತ್ತಿದ್ದ ಅರಸೀಕೆರೆ ಡಿಪೋದ ಕೆಎ 18 ಎಫ್ 708 ಕೆಎಸ್ಸಾರ್ಟಿಸಿ ಬಸ್‌ಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಬಜತ್ತೂರು ಹಾಗೂ ಗೋಳಿತೊಟ್ಟು ಗ್ರಾಮಗಳ ಗಡಿ ಪ್ರದೇಶವಾದ ಉಪ್ಪಳಿಗೆಯ ಬಳಿಯ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಅರಸೀಕೆರೆಗೆ ತೆರಳುತ್ತಿದ್ದ ಬಸ್‌ನ ಚಾಲಕ ವಾಹನವೊಂದನ್ನು ಓವರ್‌ಟೇಕ್‌ ಮಾಡಲು ಯತ್ನಿಸಿ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಬಸ್‌ ಅನ್ನು ಚಲಾಯಿಸಿದ್ದು, ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಕುಂದಾಪುರಕ್ಕೆ ತೆರಳುವ ಬಸ್‌ಗೆ ಮುಖಾಮುಖೀ ಢಿಕ್ಕಿಯಾಗಿದೆ. ಅಪಘಾತದಿಂದ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್‌ನ ಚಾಲಕ ಸೇರಿದಂತೆ ಕೆಲವರ ಕಾಲು ಮುರಿತಕ್ಕೊಳಗಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next