Advertisement
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರು, ಮೈಸೂರು, ಬಿಜಾಪುರ, ಹಾಸನ, ಹೈದರಾಬಾದ್, ಮುಂಬಯಿ ಸೇರಿದಂತೆ ದೂರ-ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಶೇ.40ರಷ್ಟು ಕುಸಿತವಾಗಿದೆ. ಇನ್ನು ಎಪ್ರಿಲ್-ಮೇ ತಿಂಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಬುಕ್ಕಿಂಗ್ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸೀಟುಗಳು ಖಾಲಿಯಿದ್ದರೂ ಜನರು ಟಿಕೆಟ್ ಬುಕ್ ಮಾಡಲು ಮುಂದೆ ಬರುತ್ತಿಲ್ಲ. ಕೆಎಸ್‌ಆರ್‌ಟಿಸಿಗೆ ನಿತ್ಯ 3 ಲ.ರೂ.ನಂತೆ ಮೂರು ದಿನದಲ್ಲಿ ಉಡುಪಿ ಡಿಪೋಗೆ 9 ಲ.ರೂ. ನಷ್ಟವಾಗಿದೆ ಎಂದು ಉಡುಪಿ ಡಿಪೋ ಸಿಬಂದಿ ಮಾಹಿತಿ ನೀಡಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆ ಸಮಯವಾಗಿರುವುದರಿಂದ ಬಸ್ ಟಿಕೆಟ್ ಬುಕ್ ಅಷ್ಟಾಗಿ ಇರುವುದಿಲ್ಲ. ಆದರೆ ಎಪ್ರಿಲ್- ಮೇ ತಿಂಗಳ ಬಸ್‌ಗಳ ಮಾರ್ಚ್ ಅಂತ್ಯದೊಳಗೆ ಬುಕ್ ಆಗಿರುತ್ತಿದ್ದವು. ಉಡುಪಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ -ಉಡುಪಿಗೆ ಬರುವ ಪ್ರಯಾಣಿಕರ ಸಂಖ್ಯೆ ಕೊರೊನಾ ಭೀತಿಯಿಂದ ಸಂಪೂರ್ಣ ಕುಸಿದಿದೆ ಎಂದು ಬಸ್ ಟಿಕೆಟ್ ಏಜೆನ್ಸಿ ಮಾಲಕ ವಿನಾಯಕ ತಿಳಿಸಿದರು. ಸಿಟಿ ಬಸ್ ಖಾಲಿ
ಕೊರೊನಾ ಭೀತಿಯಿಂದಾಗಿ ಸಿಟಿ ಬಸ್‌ನಲ್ಲಿ ಶೇ. 40ರಷ್ಟು ಪ್ರಯಾಣಿಕರ ಕೊರತೆ ಉಂಟಾಗಿದೆ. ನಗರದ ವಿವಿಧ ಭಾಗಗಳಿಗೆ 80 ಬಸ್‌ಗಳು ಸಂಚರಿಸುತ್ತವೆ. ಇದೀಗ ನಿತ್ಯ ಒಂದು ಬಸ್‌ಗೆ 3,000ನಂತೆ 2.80 ಲ.ರೂ. ನಷ್ಟವಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕಷ್ಟ. ಹಾಗಂತ ಸಿಟಿ ಬಸ್ ಮಾರ್ಗವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ತಿಳಿಸಿದರು.
Related Articles
ಪಡುಬಿದ್ರಿ: ಆಯುರ್ವೇದದ ಆಷೇìಯ ಗ್ರಂಥ ಶುಶ್ರುತ ಸಂಹಿತೆಯಲ್ಲಿ ಶುಶ್ರುತನೇ ಸ್ವತಃ ಪ್ರಸ್ತುತ ಪಡಿಸಿರುವಂತೆ ವಿಷ್ಣು ಸಹಸ್ರನಾಮವು ಯಾವುದೇ ವೈರಸ್‌ಗಳ ನಿಗ್ರಹಕ್ಕೆ ಪರಿಣಾಮಕಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಆಯುಷ್ ಸಂಘದ ಅಧRಕ್ಷ ಡಾ| ಎನ್. ಟಿ. ಅಂಚನ್ ಹೇಳಿದ್ದಾರೆ.
Advertisement
ಈಗಾಗಲೇ ಈ ಕುರಿತಾದ ಮಾಹಿತಿಯು ವೈರಲ್ ಆಗುತ್ತಿದೆ. ಸಹಸ್ರನಾಮ ಪಠಣ ತಿಳಿಯದಿದ್ದಲ್ಲಿ ನಾರಾಯಣ ಆಷ್ಟಾಕ್ಷರ ಮಂತ್ರ ಅಥವಾ ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನಾದರೂ ಒಂದಿಷ್ಟು ಶುದ್ಧ ಜಲಕ್ಕೆ ಒಂದೆರಡು ತುಳಸೀ ದಳಗಳನ್ನು ಹಾಕಿ ಕನಿಷ್ಠ 108 ಬಾರಿ ಪಠಿಸಬೇಕು. ಪಠನದ ಬಳಿಕ ಅದನ್ನು ಸೇವಿಸಿದಲ್ಲಿ ಅದು ಒಂದು ಉತ್ತಮ ಔಷಧವಾಗಿ ವೈರಸ್‌ಗಳನ್ನು ಕೊಲ್ಲುವುದಾಗಿಯೂ ಡಾ| ಅಂಚನ್ ತಿಳಿಸಿದ್ದಾರೆ.
ಆಯುರ್ವೇದದ ಪ್ರಕಾರ ಅಮೃತ ಬಳ್ಳಿ, ತ್ರಿಕಟು (ಇಪ್ಪಿಲಿ, ಶುಂಠಿ ಮತ್ತು ಮೆಣಸು), ಭದ್ರಮುಷ್ಟಿ, ಶ್ರೀ ಗಂಧ ಇವುಗಳ ಚೂರ್ಣವನ್ನು ತಯಾರಿಸಿ ಕಷಾಯದ ರೂಪದಲ್ಲಿ ನಿತ್ಯ ಸೇವನೆ ಮಾಡುತ್ತಾ ಬಂದಲ್ಲಿ ಸೂಕ್ಷ್ಮಾಣು (ವೈರಾಣು) ಜೀವಿಗಳ ವಿರುದ್ಧ ದೇಹದ ರಕ್ಷಣೆಯನ್ನು ಮಾಡಬಹುದಾಗಿದೆ ಮತ್ತು ಇದರಿಂದ ದೇಹದ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಬಹುದೆಂದೂ ಗ್ರಂಥೋಕ್ತ ಆಧಾರ ಸಹಿತ ಡಾ| ಎನ್.ಟಿ.ಅಂಚನ್ ತಿಳಿಸಿರುತ್ತಾರೆ.
ನಂದಿಕೂರು ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಜಾತ್ರೆ ಆಚರಣೆಗೆ ಕ್ರಮ ಪಡುಬಿದ್ರಿ:ಕೊರೊನಾ ಹಿನ್ನೆಲೆ ಹಾಗೂ ರಾಜ್ಯ ಸರಕಾರದ ಆದೇಶದ ಮೇರೆಗೆ ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಗೆ ಚ್ಯುತಿಯಾಗದಂತೆ ಮಾ. 18ರಂದು ನಡೆಯುವ ಜಾತ್ರಾ ಮಹೋತ್ಸವವನ್ನು ಅತ್ಯಂತ ಸರಳ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು.
ಈ ಬಾರಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಹಾಕುವಂತಿಲ್ಲ. ಆಯೋಜಿತ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ ಎಂದು ಶ್ರೀ ದೇವಸ್ಥಾನದ ಆಡಳಿತಾಧಿಕಾರಿ ಎನ್.ಉಮಾಶಂಕರ ರಾವ್ ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆ್ಯಂಬುಲೆನ್ಸ್ ಸೇವೆ ಉಚಿತಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತರು ಬಿಸಿಲ ತಾಪದಿಂದ ರಕ್ತದ ಒತ್ತಡಗಳಿಂದ ಅಸ್ವಸ್ಥರಾಗಿ ಪ್ರಜ್ಞೆತಪ್ಪಿ ಬಿದ್ದರೂ ಆಸ್ಪತ್ರೆಗೆ ದಾಖಲು ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೇ ಅಸಹಾಯಕರಾಗಿ ಬಿದ್ದುಕೊಂಡವರನ್ನು ಕಂಡರೆ ತತ್‌ಕ್ಷಣ ಉಡುಪಿ ಜಿÇÉಾ ನಾಗರಿಕ ಸಮಿತಿಯ ಉಚಿತ ಸೇವೆಯ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ತಿಳಿಸಬಹುದು ಎಂದು ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದರು. ನಗರ-ಸ್ತಬ್ಧ
ಹೆಚ್ಚಾಗಿ ಸಾರ್ವಜನಿಕರು ಸೇರುವ ವಾಣಿಜ್ಯ ಮಳಿಗೆ ಗಳು ಸೋಮವಾರ ಸಹ ಬಂದ್ ಆಗಿದ್ದವು. ಕಲ್ಪನಾ, ಡಯಾನಾ, ಅಲಂಕಾರ್, ಆಶಿರ್ವಾದ್ ಸೇರಿದಂತೆ 4 ಚಿತ್ರಮಂದಿರ ಸೇರಿದಂತೆ 2 ಮಲ್ಟಿಫ್ಲೆಕ್ಸ್‌ಗಳು ಬಂದ್ ಆಗಿವೆ. ಮಕ್ಕಳ ಆರೊಗ್ಯದ ದೃಷ್ಟಿಯಿಂದ ಐಸ್ ಕ್ರೀಮ್ ಮನೆ-ಮನೆಗೆ ಸೈಕಲ್ ಮೂಲಕ ತೆರಳಿ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.