Advertisement

ಬೆಡ್ ಬ್ಲಾಕಿಂಗ್ ದಂಧೆ ಹಿಂದೆ ಮುಸ್ಲಿಂ ಸಂಘಟನೆಯಿದೆ ಎಂಬ ಅನುಮಾನವಿದದೆ: ಈಶ್ವರಪ್ಪ

11:28 AM May 05, 2021 | Team Udayavani |

ಶಿವಮೊಗ್ಗ: ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಹಿಂದೆ ಯಾವುದೋ ಮುಸ್ಲಿಂ ಸಂಘಟನೆಯೇ ಇದೆಯೇ ಎಂಬ ಅನುಮಾನವಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ದಂಧೆಯಲ್ಲಿ ಅತೀ ಹೆಚ್ಚಾಗಿ ಮುಸ್ಲಿಂ ಸಮೂದಾಯದವರೇ ಇದ್ದಾರೆ. ರಾಜ್ಯದಲ್ಲಿ ನಾವು ಹಾಗೋ ಹೀಗೋ  ಕೋವಿಡ್ ಮ್ಯಾನೇಜ್ ಮಾಡುತ್ತಿದ್ದೇವೆ. ಆದರೆ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಸಣ್ಣಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಿಲಗಳ ರಕ್ಷಣೆಗಾ : ಸಿದ್ದರಾಮಯ್ಯ ಗರಂ

ಈ ವಿಚಾರವನ್ನು ನಮ್ಮ ತೇಜಸ್ವಿ ಸೂರ್ಯ, ಸತೀಶ್  ರೆಡ್ಡಿ ಸೇರಿದಂತೆ ಕೆಲವರು ಹೊರಗೆ ತಂದಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆಯ ನಂತರ ಹೊರಗೆ ಬರಲಿದೆ. ಅದರ ಹಿಂದಿರುವ ಸಂಘಟನೆ, ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಈ ಬಗ್ಗೆ ಎಚ್ಚರಿಕೆಯಿಂದ ಇರುತ್ತೇವೆ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next