ಮಂಡ್ಯ: ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಬುಧವಾರ 69 ಅಡಿಗೆ ಕುಸಿತ ಕಂಡಿದೆ. ಜಲಾಶಯದಲ್ಲಿ 6.8 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಬುಧವಾರ ಬೆಳಗ್ಗೆ ಜಲಾಶಯದ ನೀರಿನ ಮಟ್ಟ 69.40 ಅಡಿ ಇದ್ದು, ಸಂಜೆ ವೇಳೆಗೆ 69 ಅಡಿಗೆ ಬಂದು ತಲುಪಿದೆ. ಅಣೆಕಟ್ಟೆಗೆ 183 ಕ್ಯುಸೆಕ್ ನೀರು ಮಾತ್ರ ಹರಿದು ಬರುತ್ತಿದ್ದು, ಜಲಾಶಯದಿಂದ ಹೊರಕ್ಕೆ 862 ಕ್ಯುಸೆಕ್ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಹರಿಯಬಿಡಲಾಗುತ್ತಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟೆಯಲ್ಲಿ 79.07 ಅಡಿ ನೀರು ಸಂಗ್ರಹವಾಗಿತ್ತು. ಜಲಾಶಯದಲ್ಲಿ 10.3
ಟಿಎಂಸಿ ಅಡಿಯಷ್ಟು ನೀರಿತ್ತು. ಅಂದು ಜಲಾಶಯಕ್ಕೆ 108 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಅಣೆಕಟ್ಟೆಯಿಂದ 304
ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಕಾವೇರಿ ನದಿ ಸಂಪೂರ್ಣ ಸೊರಗಿದೆ. ಉಪ ನದಿಗಳಾದ ಹೇಮಾವತಿ,
ಲೋಕ ಪಾವನಿ, ಶಿಂಷಾ ನದಿಗಳು ಬತ್ತಿಹೋಗಿವೆ.