Advertisement

ಐಷಾರಾಮಿ ಕಾರು ಖರೀದಿಸಿದ ನಟಿ ಕೃತಿ ಸನೋನ್

03:30 PM Sep 12, 2021 | Team Udayavani |

ಮುಂಬೈ : ‘ಮಿಮಿ’ ಸಿನಿಮಾ ಗೆಲುವಿನ ಖುಷಿಯಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಇದೀಗ ಐಷಾರಾಮಿ ಕಾರು ಖರೀದಿಸಿದ್ದಾರೆ.

Advertisement

2.43 ಕೋಟಿ ರೂ. ಮೌಲ್ಯದ ‘ಮರ್ಸಿಡಿಸ್​ ಮೇಬ್ಯಾಕ್​ ಜಿಎಲ್​ಎ 600’ ಕಾರು ಕೃತಿ ಸನೋನ್ ಮನೆಯಂಗಳಕ್ಕೆ ಬಂದು ನಿಂತಿದೆ.

ಕೋಟಿಗಟ್ಟಲೆ ಸಂಭಾವನೆ ಪಡೆಯುವ ಕೆಲವೇ ಕೆಲವು ತಾರೆಯರು ಈ ಕಾರು ಒಡೆಯರಾಗಿದ್ದಾರೆ. ರಣವೀರ್​ ಸಿಂಗ್, ಅರ್ಜುನ್​ ಕಪೂರ್​ ಅವರು ‘ಮರ್ಸಿಡಿಸ್​ ಮೇಬ್ಯಾಕ್​ ಜಿಎಲ್​ಎ 600’ ಖರೀದಿಸಿದ್ದರು. ಈಗ ಅವರ ಸಾಲಿಗೆ ಕೃತಿ ಕೂಡ ಸೇರ್ಪಡೆ ಆಗಿದ್ದಾರೆ.

‘ಮಿಮಿ’ ಚಿತ್ರದ ಯಶಸ್ಸಿನಿಂದ ಕೃತಿಗೆ ತುಂಬ ಖುಷಿ ಆಯಿತು. ಹಾಗಾಗಿ ಏನಾದರೂ ಅಮೂಲ್ಯವಾದದ್ದನ್ನು ಖರೀದಿಸಲು ಅವರು ನಿರ್ಧರಿಸಿದರು. ಈ ಕಾರು ಕೊಂಡುಕೊಳ್ಳಬೇಕು ಎಂಬುದು ಅವರ ಬಹುದಿನಗಳ ಕನಸಾಗಿತ್ತು. ಅದೀಗ ನನಸಾಗಿದೆ’ ಎಂದು ಅವರ ಆಪ್ತರು ಹೇಳಿದ್ದಾರೆ.

ಇನ್ನು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿದ್ದ ‘ಮಿಮಿ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಸದ್ಯ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟಿಸುತ್ತಿರುವ ‘ಆದಿಪುರುಷ್​’ ಚಿತ್ರಕ್ಕೆ ಕೃತಿ ಸನೋನ್​ ನಾಯಕಿ. ಅಕ್ಷಯ್​ ಕುಮಾರ್​ ನಾಯಕತ್ವದ ‘ಬಚ್ಚನ್​ ಪಾಂಡೆ’, ‘ಗಣಪತ್​’, ‘ಹಮ್​ ದೋ ಹಮಾರೇ ದೋ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next