Advertisement

Krishnam Pranaya Sakhi: ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಕೃಷ್ಣಂ ಪ್ರಣಯ ಸಖಿ

11:25 AM Aug 14, 2024 | Team Udayavani |

ಗಣೇಶ್‌ ನಾಯಕರಾಗಿರುವ(Golden Star Ganesh) “ಕೃಷ್ಣಂ ಪ್ರಣಯ ಸಖಿ'(Krishnam Pranaya Sakhi) ಚಿತ್ರ ಆ.15ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಭರ್ಜರಿ ಹಿಟ್‌ ಆಗಿವೆ. ಅದರಲ್ಲೂ “ದ್ವಾಪರ..’ ಹಾಡಿನ ಸದ್ದು ಜೋರಾಗಿದೆ.

Advertisement

ಈ ನಡು ವೆಯೇ ಚಿತ್ರತಂಡ ಪ್ರೀ ರಿಲೀಸ್‌ ಇವೆಂಟ್‌ ನಡೆಸಿ ಚಿತ್ರದ ಬಗ್ಗೆ ಮಾತನಾಡಿದೆ. ಜಿ.ಟಿ.ಮಾಲ್‌ನಲ್ಲಿ ಆಯೋಜಿಸಿದ್ದ ಈ ಕಾರ್ಯ ಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು. ಚಿತ್ರದ ಹಾಡುಗಳಿಗೆ ಕಲಾವಿದರು ಸ್ಟೆಪ್‌ ಹಾಕಿ ಮಾಲ್‌ನಲ್ಲಿ ಸೇರಿದ್ದವರನ್ನು ರಂಜಿಸಿದರು.

ಈ ಚಿತ್ರವನ್ನು ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದು ಪ್ರಶಾಂತ್‌ ಜಿ ರುದ್ರಪ್ಪ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಮಾಳವಿಕಾ ನಾಯರ್‌ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸಾಧುಕೋಕಿಲ, ರಂಗಾಯಣ ರಘು, ಶ್ರುತಿ, ಶಶಿಕುಮಾರ್‌, ಶಿವಧ್ವಜ್‌ ಸೇರಿದಂತೆ ಅನೇಕರು ಚಿತ್ರದ ಭಾಗವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next