Advertisement
ಶ್ರೀ ಕೃಷ್ಣ ದೇವಾಲಯ ಸೇರಿದಂತೆ ವಿವಿಧ ಮಠ ಮಂದಿರ ಹಾಗೂ ಸಂಘ ಸಂಸ್ಥೆಗಳಿಂದ ಜನ್ಮಾಷ್ಟಮಿಯ ಕೃಷ್ಣ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹೋಮ, ಪೂಜೆ, ಅಭಿಷೇಕ, ಪ್ರಸಾದ ವಿತರಣೆ ಹೀಗೆ ವಿವಿಧ ಸೇವೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮವೂ ಜನಮನಸೂರೆಗೊಂಡಿದೆ. ಮಕ್ಕಳ ಶ್ರೀಕೃಷ್ಣ, ರಾಧೆಯ ವೇಷ ತೊಟ್ಟು ಸಂಭ್ರಮಿಸಿದರು. ಬಹುತೇಕ ಮನೆಗಳಲ್ಲೂ ಕೃಷ್ಣಜನ್ಮಾಷ್ಟಮಿಯ ವಿಶೇಷ ಪೂಜೆ ನಡೆದಿದೆ.
Related Articles
Advertisement
ಸಹಸ್ರಾರು ಸಂಖ್ಯೆಯಲ್ಲಿ ಬಂದಿರುವ ಭಕ್ತರಿಗೆ ಲಾಡು ಮತ್ತು ಸಿಹಿ ಪೊಂಗಲ್ ಪ್ರಸಾದ ವಿತರಣೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣ ವೇಷಧಾರಿ ಮಕ್ಕಳನ್ನು ಎತ್ತಿ ಕೊಂಡಾಡುವ ಮೂಲಕ ವಿಶೇಷವಾಗಿ ಆಚರಿಸಲದರು.
ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದಿಂದ ಮುಂಜಾನೆ ಸಮವಸ್ತ್ರಧಾರಿ ಒಂದುವರೆ ಸಾವಿರ ವೈದಿಕರಿಂದ ಕೃಷ್ಣನ ಕುರಿತ ಸಹಸ್ರನಾಮಾವಳಿ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ, ಪಲಿಮಾರು ಮಠಾಧೀಶರು, ವ್ಯಾಸರಾಜ ಮಠಾಧೀಶರು ಮತ್ತು ಸುವಿದ್ಯೆಂದ್ರತೀರ್ಥ ಶ್ರೀಗಳು ತುಳಸಿ ಅರ್ಚನೆ ಮಾಡಿ ಅನುಗ್ರಹ ಸಂದೇಶ ನೀಡಿದರು. ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷವಾಗಿ ಹೋವಿನ ಅಲಂಕಾರ ಮಾಡಲಾಗಿತ್ತು.
ಅಭಯಚಾತುರ್ಮಾಸ್ಯ: ಗಿರಿನಗರದ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಅಭಯಚಾತುರ್ಮಾಸ್ಯದಲ್ಲಿ ಶ್ರೀಕೃಷ್ಣಾಷ್ಟಮಿ ವಿಶೇಷ ಕಾರ್ಯಕ್ರಮದೊಂದಿಗೆ ನೆರವೇರಿದೆ. ರಾಧೆ ಕೃಷ್ಣರ ವೇಷ ತೊಟ್ಟ ಪುಟ್ಟ ಮಕ್ಕಳು ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಮೊಸರು ಕಡೆದು ಮಕ್ಕಳಿಗೆ ಬೆಣ್ಣೆ ತಿನ್ನಿಸುವ ಮೂಲಕ ತಾಯಂದಿರು ಎಲ್ಲರ ಗಮನ ಸೆಳೆದರು.
ಮೊಸರು ಕುಡಿಕೆ, ಬಾಳೆಗೊನೆಯಿಂದ ಬಾಳೆಹಣ್ಣು ತೆಗೆಯುವ ಆಟ, ಹಗ್ಗ ಜಗ್ಗಾಟ, ಜೋಕಾಲಿ, ಎಣ್ಣೆಸಂತೆ ಇತ್ಯಾದಿ ಆಟವನ್ನು ಆಯೋಜಿಸಲಾಗಿತ್ತು. ರಾಮ-ಕೃಷ್ಣ ಹಾಡಿನ ಅಂತ್ಯಾಕ್ಷರೀ, ಕೃಷ್ಣ-ರಾಧೆ ಏಕಪಾತ್ರಾಭಿಷಯ, ರಸಪ್ರಶ್ನೆ ಹಾಗೂ ಭಜನೆ, ಮಂಟಪ ಪ್ರಭಾಕರ ಉಪಾಧ್ಯಾಯ ಅವರಿಂದ ಏಕವ್ಯಕ್ತಿ ಯಕ್ಷಗಾನ. ರಾತ್ರಿ ಕೃಷ್ಣಜನನ ಕಾರ್ಯಕ್ರಮದೊಂದಿಗೆ ಕೃಷ್ಣಾಷ್ಟಮಿಯ ಮೊದಲ ದಿನದ ಕಾರ್ಯಕ್ರಮ ಅಂತ್ಯಗೊಂಡಿದೆ.