Advertisement

ಕೃಷ್ಣ ವೆಡ್ಸ್‌ ಮಿಲನಾ: ಪ್ರೇಮಿಗಳ ದಿನದಂದು ಹಸೆಮಣೆ ಏರಲಿದ್ದಾರೆ “ಲವ್ ಮಾಕ್ಟೇಲ್”ಜೋಡಿ

07:41 PM Nov 03, 2020 | sudhir |

“ಲವ್‌ ಮಾಕ್ಟೇಲ್’ ಸಿನೆಮಾ ಮೂಲಕ ಚಂದನವನದಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದ ನಟ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಸಿನಿಮಾ ಹಿಟ್‌ ಆದ ಖುಷಿಯಲ್ಲಿಯೇ ತಾವು ಪ್ರೀತಿ ಮಾಡುತ್ತಿರುವ ವಿಚಾರವನ್ನು ಈ ಸಿನಿಮಾ ರಿಲೀಸ್‌ ಆದ ಮೇಲೆ ಬಹಿರಂಗಡಿಸಿದ್ದರು. ಈ ವಿಚಾರ ತಿಳಿದ ಕೂಡಲೇ ಇಡೀ ಸ್ಯಾಂಡಲ್‌ವುಡ್‌ ಇವರ ಪ್ರೀತಿಗೆ ಶುಭ ಹಾರೈಸಿದ್ದರು.

Advertisement

ಅಭಿಮಾನಿಗಳು ಕೂಡ ಈ ತಾರ ಜೋಡಿಯ ಅನ್ಯೂನ್ಯತೆ ನೋಡಿ ಫಿದಾ ಆಗಿದ್ದರು. ಅಲ್ಲದೇ ಅಂದಿನಿಂದ ಈ ಜೋಡಿ ಎಲ್ಲೇ ಹೋದರೂ ಬಂದರೂ, ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೂ ಮದುವೆ ಯಾವಾಗ ಎಂಬ ಪ್ರಶ್ನೆಯನ್ನೇ ಕೇಳುತ್ತಿದ್ದರು. ಸಲ್ಲದಕ್ಕೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಚರ್ಚೆ ನಡೆದಿದ್ದವು.

ಆದರೆ ತಮ್ಮ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್‌ ಹಾಕಿರುವ ಡಾರ್ಲಿಂಗ್‌ ಕೃಷ್ಣ ಹಾಗೂ ನಟಿ ಮಿಲನಾ ತಮ್ಮ ವಿವಾಹ ದಿನಾಂಕವನ್ನು ಬಹಿರಂಗ ಮಾಡಿದ್ದಾರೆ.

ಕಳೆದ 6 ವರ್ಷಗಳಿಂದ ಪ್ರೀತಿ ಮಾಡುತ್ತಿರುವ ಕೃಷ್ಣ ಹಾಗೂ ಮಿಲನಾ ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಕೆಲವರಿಗೆ ಕಾಡಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. ಮುಂಬರುವ 2021ರ ಫೆಬ್ರವರಿ 14 ಪ್ರೇಮಿಗಳ ದಿನದಂದೇ ಕೃಷ್ಣ ಹಾಗೂ ಮಿಲನಾ ಹಸೆಮಣೆ ಏರಲಿದ್ದಾರಂತೆ. ಈ ಕುರಿತು ಕೃಷ್ಣ ಸೋಶಿಯಲ್‌ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ. ‘ನಮ್ಮ ಮದುವೆ 14 ಫೆಬ್ರವರಿ 2021, ನಮ್ಮನ್ನು ಆಶೀರ್ವದಿಸಿ’ ಎಂದು ಕೃಷ್ಣ ಸೋಶಿಯಲ್‌ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next