ಇದೇ ಮಾರ್ಚ್ ತಿಂಗಳಿನಲ್ಲಿ ನಟ ಅಜೇಯ್ ರಾವ್ ಅಭಿನಯದ “ಕೃಷ್ಣ ಟಾಕೀಸ್’ ಚಿತ್ರ ತೆರೆಗೆ ಬಂದಿದ್ದು ನಿಮಗೆ ಗೊತ್ತಿರಬಹುದು. ಇನ್ನೇನು “ಕೃಷ್ಣ ಟಾಕೀಸ್’ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ ಎನ್ನುವಾಗಲೇ, ಎದುರಾದ ಕೋವಿಡ್ ಎರಡನೇ ಅಲೆಯ ಆತಂಕ, ಮತ್ತೂಂದು ಲಾಕ್‌ಡೌನ್ ಥಿಯೇಟರ್‌ಗಳನ್ನು ಮತ್ತೂಮ್ಮೆ ಮುಚ್ಚುವಂತೆ ಮಾಡಿತು. ಇದರಿಂದಾಗಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ “ಕೃಷ್ಣ ಟಾಕೀಸ್’ ಥಿಯೇಟರ್ ನಲ್ಲಿ ಸೌಂಡ್ ಮಾಡುವ ಮೊದಲೇ ಸೈಲೆಂಟಾಗಿತ್ತು.
ಇದೀಗ ಮತ್ತೆ ಥಿಯೇಟರ್‌ಗಳಲ್ಲಿ ಪ್ರದರ್ಶನ ಶುರುವಾಗಿರುವುದರಿಂದ, ಸದ್ಯಕ್ಕೆ ಅವಕಾಶವಿರುವ 50% ಪ್ರೇಕ್ಷಕರ ಪ್ರವೇಶಾವಕಾಶದ ಮಿತಿಯಲ್ಲೇ “ಕೃಷ್ಣ ಟಾಕೀಸ್’ನ ರೀ-ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಇದನ್ನೂ ಓದಿ:ಸಿನಿಮಾ ಮಂದಿಯ 100 ಕನಸು: ಹೊಸದೇನಿಲ್ಲ, ಹಳೆಯದೇ ಎಲ್ಲಾ …
ಇನ್ನು “ಕೃಷ್ಣ ಟಾಕೀಸ್’ ರೀ-ರಿಲೀಸ್ ಬಗ್ಗೆಮಾತನಾಡುವ ನಿರ್ದೇಶಕ ವಿಜಯಾನಂದ್ “ಇದೇ ಮಾರ್ಚ್ ನಲ್ಲಿ ನಮ್ಮ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಸಿನಿಮಾ ರಿಲೀಸ್ ಆದ ಎಲ್ಲ ಕೇಂದ್ರಗಳಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿತ್ತು. ಸಿನಿಮಾ ನೋಡಿದವರು ಕೂಡ “ಕೃಷ್ಣ ಟಾಕೀಸ್’ ಬಗ್ಗೆ ತುಂಬ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಸಿನಿಮಾ ಎಲ್ಲರಿಗೂ ಇಷ್ಟವಾಗಿ, ಬಾಕ್ಸಾಫೀಸ್ ನಲ್ಲೂ ಸಕ್ಸಸ್ ಆಗುತ್ತದೆ ಎಂಬ ನಿರೀಕ್ಷೆ ಇರುವಾಗಲೇ ಅನಿರೀಕ್ಷಿತವಾಗಿ ಥಿಯೇಟರ್ ಗಳನ್ನು ಸರ್ಕಾರ ಬಂದ್ ಮಾಡಿತು. ಅದಾದ ನಂತರ ಲಾಕ್‌ಡೌನ್ ಅನೌನ್ಸ್ ಆಯ್ತು. ಹೀಗಾಗಿ ಒಂದೊಳ್ಳೆ ಸಿನಿಮಾ ಪ್ರೇಕ್ಷಕರನ್ನು ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ. ಈಗ ಮತ್ತೆ ನಮ್ಮ ಸಿನಿಮಾವನ್ನ ರೀ-ರಿಲೀಸ್ ಮಾಡಿ ಆಡಿಯನ್ಸ್‌ಗೆ ತಲುಪಿಸುವಕೆಲಸ ಈ ವಾರ ಮಾಡುತ್ತಿದ್ದೇವೆ. ಸದ್ಯಕ್ಕೆ ಥಿಯೇಟರ್ ಗಳಲ್ಲಿ50%ರಷ್ಟು ಆಡಿಯನ್ಸ್ ಎಂಟ್ರಿಗೆ ಅವಕಾಶವಿದ್ದರೂ, ಬಹಳ ದಿನಗಳವರೆಗೆ ಜನ ಲಾಕ್‌ಡೌನ್ ಹ್ಯಾಂಗೋವರ್‌ನಲ್ಲಿದ್ದ ಕಾರಣ ನಮ್ಮ ಸಿನಿಮಾಕ್ಕಾಗಿ ಮತ್ತೆ ಥಿಯೇಟರ್ ಬರುತ್ತಾರೆಂಬ ವಿಶ್ವಾಸವಿದೆ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ.
ಇನ್ನು “ಕೃಷ್ಣ ಟಾಕೀಸ್’ ಚಿತ್ರದಲ್ಲಿ ಅಜೇಯ್ ರಾವ್‌ಗೆ ನಾಯಕಿಯಾಗಿ ಅಪೂರ್ವ ಜೋಡಿಯಾಗಿದ್ದಾರೆ. ಉಳಿದಂತೆ ಸಿಂಧೂ ಲೋಕನಾಥ್, ನಿರಂತ್, ಚಿಕ್ಕಣ್ಣ, ಪ್ರಮೋದ್ ಶೆಟ್ಟಿ, ಶೋಭರಾಜ್, ಶ್ರೀನಿವಾಸ ಪ್ರಭು, ಪ್ರಕಾಶ್ ತುಮ್ಮಿನಾಡ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತವಿದೆ.