Advertisement

ಕೃಷ್ಣಾ ನದಿ ತೀರದ ಹಳ್ಳಿಗರಿಗೆ ಡಂಗುರದ ಎಚ್ಚರಿಕೆ : ನೆರವಿಗೆ ಸಹಾಯವಾಣಿ ಆರಂಭ

08:01 PM Jul 23, 2021 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ನದಿ ತೀರದ ಹಳ್ಳಿಗರಿಗೆ ಮುನ್ನೆಚ್ಚರಿಕೆ ಕುರಿತು ಡಂಗುರದ ಮೂಲಕ ಜಾಗೃತಿ ಸಂದೇಶ ನೀಡಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಈ ಕುರಿತು ಶುಕ್ರವಾರ ಸಂಜೆ ಮಾಧ್ಯಮಗಳಿಗೆ‌ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಸುನಿಲಕುಮಾರ, ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದೆ. ಕಾರಣ ಕೃಷ್ಣಾ ನದಿಗೆ 1.44 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದರಿ ನೀರು ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಕ್ಕೆ ಹರಿದು ಬರುತ್ತಿದ್ದು, ಶಾಸ್ತ್ರೀ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದ ಗೇಟ್ ತೆರೆದು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದ ಎಲ್ಲ ತಾಲೂಕಗಳ ತಹಶಿಲ್ದಾರರ ತೀವ್ರ ನಿಗಾ ಇರಿಸುವಂತೆ ಸೂಚಿಸಲಾಗಿದೆ.

ಕೃಷ್ಣಾ ನದಿ ಪಾತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಮುನೆಕ್ರಮವಾಗಿ ನದಿ ತೀರಕ್ಕೆ ಜನರು ಹೋಗದಂತೆ, ಜಾನುವಾರುಗಳನ್ನು ಬಿಡದಂತೆ ಕಡ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದಕ್ಕಾಗಿ ನದಿ ತೀತದ ಎಲ್ಲ ಹಳ್ಳಿಗಳಲ್ಲಿ ಡಂಗುರ, ಧ್ವನಿವರ್ಧಕಗಳ ಮೂಲಕ ಜನರಿಗೆ ನದಿ ತೀರಕ್ಕೆ ತೆರಳದಂತೆ ಎಚ್ವರಿಕೆ ಸಂದೇಶ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಇದನ್ನೂ ಓದಿ :ನೆರೆ ನಿರ್ವಹಣೆ ಮಾಡಬೇಕಾದ ಸರ್ಕಾರ ಅಧಿಕಾರಕ್ಕಾಗಿ ಕಿತ್ತಾಡುತ್ತಿದೆ : ದಿನೇಶ್‌ ಗುಂಡೂರಾವ್‌

ಇದಲ್ಲದೇ ತಹಶಿಲ್ದಾರರು ಹಾಗೂ ಗ್ರಾ.ಪಂ‌. ವಿಪತ್ತು ನಿರ್ವಹಣಾ ತಂಡಗಳನ್ನು ಜಾಗೃತಿ ಸ್ಥಿತಿಯಲ್ಲಿ ಇರಿಸಿದೆ.

Advertisement

ಇದಲ್ಲದೇ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪರಿಸ್ಥಿತಿ ನಿರ್ವಹಣೆಗಾಗಿ 24*7 ಸಹಾಯ ವಾಣಿ ಕೇಂದ್ರ ತೆರೆದಿದ್ದು, (08352-221261) 1077 ಟೋಲ್ ಫ್ರೀ ಸಂಖ್ಯೆಗೆ ಸಮಸ್ಯೆ ಕಂಡು ಬಂದಲ್ಲಿ ಸಾರ್ವಜನಿಕರು ಕರೆ ಮಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next