Advertisement

ಪುದುಚೇರಿ ಟಿ10 ಲೀಗ್‌ ಆರು ಸಿಕ್ಸರ್‌ ಬಾರಿಸಿದ ಕೃಷ್ಣ ಪಾಂಡೆ

11:15 PM Jun 04, 2022 | Team Udayavani |

ಪುದುಚೇರಿ: ಇಲ್ಲಿ ಸಾಗುತ್ತಿರುವ ಪುದುಚೇರಿ ಟಿ10 ಲೀಗ್‌ ಕೂಟದಲ್ಲಿ ಪ್ಯಾಟ್ರಿಯಟ್ಸ್‌ ತಂಡದ ಕೃಷ್ಣ ಪಾಂಡೆ ಓವರೊಂದರಲ್ಲಿ ಆರು ಸಿಕ್ಸರ್‌ ಬಾರಿಸಿ ಗಮನ ಸೆಳೆದಿದ್ದಾರೆ.

Advertisement

ಪುದುಚೇರಿ ಸೀಚೆಮ್‌ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ಸ್‌ ತಂಡ 10 ಓವರ್‌ಗಳಲ್ಲಿ ಮೂರು ವಿಕೆಟಿಗೆ 157 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಪ್ಯಾಟ್ರಿಯಟ್ಸ್‌ ತಂಡ ಕೃಷ್ಣ ಪಾಂಡೆ ಅವರ ಭರ್ಜರಿ ಆಟದಿಂದಾಗಿ ಗೆಲುವಿನ ಸನಿಹಕ್ಕೆ ಬಂದರೂ ಅಂತಿಮವಾಗಿ ನಾಲ್ಕು ರನ್ನಿನಿಂದ ಸೋಲನ್ನು ಕಂಡಿತು.

ಪ್ಯಾಟ್ರಿಯಟ್ಸ್‌ ತಂಡದಲ್ಲಿ ಕೃಷ್ಣ ಪಾಂಡೆ ಅವರ ಆಟ ಗಮನ ಸೆಳೆಯಿತು. ನಿತೀಶ್‌ ಠಾಕುರ್‌ ಅವರ ಓವರೊಂದರಲ್ಲಿ ಆರು ಸಿಕ್ಸರ್‌ ಸಿಡಿಸಿ ರಂಜಿಸಿದ್ದ ಅವರು ಒಟ್ಟಾರೆ 19 ಎಸೆತಗಳಿಂದ 83 ರನ್‌ ಹೊಡೆದರು. 12 ಸಿಕ್ಸರ್‌ ಮತ್ತು 2 ಬೌಂಡರಿ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next