Advertisement

Drought Relief: ಈ ವಾರದಲ್ಲಿ ಒಂದು ತಾಲೂಕಿಗೆ ಬರಪರಿಹಾರ: ಕೃಷ್ಣ ಭೈರೇಗೌಡ

06:24 PM Dec 26, 2023 | Team Udayavani |

ಕೊಪ್ಪಳ: ಬರ ಪರಿಹಾರವನ್ನು ಒಂದು ತಾಲೂಕಿಗೆ ಇದೇ ವಾರ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಹೇಳಿದರು.

Advertisement

ಜಿಲ್ಲೆಯ ಬೇವೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬರ ಪರಿಹಾರವನ್ನು ಪ್ರೂಟ್‌ಆಪ್ ನಿಂದ ವಿತರಣೆ ಮಾಡಲಾಗುತ್ತಿದೆ. ಈ ವಾರದಲ್ಲಿ ಪ್ರಾಯೋಗಿಕವಾಗಿ ಒಂದು ತಾಲೂಕಿನಲ್ಲಿ ಪರಿಹಾರ ನೀಡಲಾಗುವುದು. ಇದರ ಸಾಧಕ ಬಾಧಕಗಳನ್ನು ನೋಡಿ ಮುಂದೆ ಕ್ರಮ ಕೈಗೊಳ್ಳಲಾಗುವುದು. ಈ ಆಪ್‌ನಲ್ಲಿ ತಪ್ಪುಗಳು ಕಂಡು ಬಂದರೆ ಸರಿಪಡಿಸಲಾಗುವುದು. ಇದು ಶಾಶ್ವತ ಪರಿಹಾರ ನೀಡುವ ಆಪ್ ಆಗಿರುತ್ತದೆ. ಪ್ರೂಟ್ ಆಪ್‌ನಲ್ಲಿ ಈಗ ಶೇ. 5೦ ರಷ್ಟು ರೈತರು ನೊಂದಾಯಿಸಿದ್ದಾರೆ. ಈಗ ಅಭಿಯಾನ ನಡೆಯುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರ ಖಾತೆಗೆ ನೇರ ಹಣ ಜಮಾ ಆಗುತ್ತದೆ ಎಂದರು.

ರಾಜ್ಯದಲ್ಲಿ236 ತಾಲೂಕಿಗಳಲ್ಲಿ ಬರವಿದೆ. ಈ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿದ್ದೇವೆ. ಕೇಂದ್ರ ಅಧ್ಯಯನ ತಂಡ ಬಂದು ರಾಜ್ಯದಲ್ಲಿಯ ಬರ ತೀವ್ರತೆ ಮನವರಿಕೆಯಾಗಿದೆ. ಕೇಂದ್ರ ಸರಕಾರ ಇಷ್ಟರಲ್ಲಿಯೇ ಪರಿಹಾರ ನೀಡಬಹುದು ಎದರು.

ಸಕ್ಕರೆ ಸಚಿವರ ಹೇಳಿಕೆಗೆ ಕೃಷ್ಣಭೈರೇಗೌಡ ನಕಾರ
ಬರ ಬರಲಿ ಎಂದು ರೈತರು ಬಯಿಸುತ್ತಾರೆ ಎಂದು ಹೇಳಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲರ ಮಾತಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಮಾಧ್ಯಮಗಳಿಗೆ ಉತ್ತರಿಸದೆ ಅಲ್ಲಿಂದ ಕಾಲುಕಿತ್ತಿದ ಘಟನೆ ನಡೆಯಿತು. ಬೇವೂರಿನಲ್ಲಿ ಹೋಬಳಿ ಕೃಷಿ ವಿಸ್ತರಣಾ ಕೇಂದ್ರದ ಉದ್ಘಾಟನೆಯ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸದೆ ಕಾಲ್ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next