Advertisement

ಒಕ್ಕಲಿಗರ ನಿಗಮ ನೋಂದಣಿಯೇ ಆಗಿಲ್ಲ: ಕೃಷ್ಣ ಬೈರೇಗೌಡ

10:16 PM Mar 16, 2022 | Team Udayavani |

ವಿಧಾನಸಭೆ: ರಾಜ್ಯ ಸರ್ಕಾರ ಕರ್ನಾಟಕ ಒಕ್ಕಲಿಗರ ನಿಮಗಕ್ಕೆ 600 ಕೋಟಿ ರೂ. ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ಇದುವರೆಗೂ ನಿಗಮವನ್ನು ನೋಂದಣಿ ಮಾಡಿಲ್ಲ. ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಕಾಂಗ್ರೆಸ್‌ ಶಾಸಕ ಕೃಷ್ಣ ಬೈರೇಗೌಡ ಆರೋಪಿಸಿದರು.

Advertisement

ಗಮನ ಸೆಳೆಯುವ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯ ಸರ್ಕಾರ ಎರಡು ವರ್ಷದ ಹಿಂದೆ ಒಕ್ಕಲಿಗರ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದು. ಕಳೆದ ಬಜೆಟ್‌ನಲ್ಲಿ 500 ಕೋಟಿ ರೂ. ಮೀಸಲಿಡುವುದಾಗಿ ಹೇಳಿದ್ದರು. ಈ ಬಜೆಟ್‌ನಲ್ಲಿ 100 ಕೋಟಿ ಮೀಸಲಿಡುವುದಾಗಿ ಹೇಳಿದ್ದಾರೆ. ಆದರೆ, ಇದುವರೆಗೂ ನಿಗವು ನೋಂದಣಿಯೇ ಆಗಿಲ್ಲ. ರಾಜ್ಯದಲ್ಲಿ ಸಾಕಷ್ಟು ಜನ ಬಡ ಒಕ್ಕಲಿಗರಿದ್ದಾರೆ. ಅವರಿಗೆ ಇದುವರೆಗೂ ಒಂದು ರೂಪಾಯಿ ಬಂದಿಲ್ಲ. ಬಿಜೆಪಿಯವರು ಕೇವಲ ಘೋಷಣೆ ಮಾಡಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಅವರ ಆರೋಪಕ್ಕೆ ತಿರುಗೇಟು ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಎಪತ್ತು ವರ್ಷದಿಂದ ಅಧಿಕಾರದಲ್ಲಿದ್ದವರು ಈ ಥರದ ಯೋಚನೆಯನ್ನೂ ಮಾಡಿರಲಿಲ್ಲ. ನಾವು ಒಂದು ಯೋಚನೆಯನ್ನಾದರೂ ಮಾಡಿದ್ದೇವೆ. ಒಕ್ಕಲಿಗರನ್ನು ಜೀತ ಮಾಡಿಕೊಂಡಿದ್ದವರು ಅವರ ಬಗ್ಗೆ ಆಲೋಚನೆಯನ್ನೇ ಮಾಡಿರಲಿಲ್ಲ. ನಾವು ನಿಗಮ ಮಾಡಿದ್ದೇವೆ. ಇಂತ ಯೋಚನೆಗೆ ಅಭಿನಂದನೆ ಸಲ್ಲಿಸಬೇಕಿತ್ತು. ಈಗ ಕಂಪನಿ ಕಾಯ್ದೆ ಅಡಿಯಲ್ಲಿ ನಿಗಮವನ್ನು ನೋಂದಣಿ ಮಾಡಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಒಕ್ಕಲಿಗರ ಸಂಘದಲ್ಲಿ ಯಾರು ಎಷ್ಟು ಜಮೀನು, ಹಣ ನುಂಗಿದ್ದಾರೆ ಎನ್ನುವುದನ್ನು ಹೇಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕೃಷ್ಣ ಬೈರೇಗೌಡ ವಿಷಯಾಂತರ ಮಾಡಬೇಡಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next