Advertisement

ವಿಂಡೀಸ್‌ಗೆ ಮೊದಲ ಇನ್ನಿಂಗ್ಸ್‌ ಮುನ್ನಡೆ

10:55 AM Aug 28, 2017 | Team Udayavani |

ಲೀಡ್ಸ್‌: ಕ್ರೆಗ್‌ ಬ್ರಾತ್‌ವೇಟ್‌ ಮತ್ತು ಶೈ ಹೋಪ್‌ ಅವರ ಆಕರ್ಷಕ ಶತಕದಿಂದಾಗಿ ಪ್ರವಾಸಿ ವೆಸ್ಟ್‌ಇಂಡೀಸ್‌ ತಂಡವು ಇಂಗ್ಲೆಂಡ್‌ ತಂಡದೆದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ 169 ರನ್ನುಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದಿದೆ. ಇಂಗ್ಲೆಂಡಿನ 258 ರನ್ನಿಗೆ ಉತ್ತರವಾಗಿ ಬ್ಯಾಟಿಂಗ್‌ ನಡೆಸಿದ ವೆಸ್ಟ್‌ಇಂಡೀಸ್‌ ತಂಡವನ್ನು ಬ್ರಾತ್‌ವೇಟ್‌ ಮತ್ತು ಹೋಪ್‌ ಆಧರಿಸಿದರು. ವೈಯಕ್ತಿಕ ಶತಕ ಸಿಡಿಸಿದ ಅವರಿಬ್ಬರು ನಾಲ್ಕನೇ ವಿಕೆಟಿಗೆ 246 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಕಾರಣ ವಿಂಡೀಸ್‌ ಉತ್ತಮ ಮೊತ್ತ ಪೇರಿಸುವಂತಾಯಿತು. ಬ್ರಾತ್‌ವೇಟ್‌ 249 ಎಸೆತಗಳಿಂದ 134 ರನ್‌ ಗಳಿಸಿದರೆ ಹೋಪ್‌ 147 ರನ್‌ ಹೊಡೆದರು. 253 ಎಸೆತ ಎದುರಿಸಿದ ಅವರು 23 ಬೌಂಡರಿ ಬಾರಿಸಿದರು. 

Advertisement

ಬ್ರಾತ್‌ವೇಟ್‌, ಹೋಪ್‌ ಅವರಲ್ಲದೇ ಬ್ಲ್ಯಾಕ್‌ವುಡ್‌ ಮತ್ತು ಜಾಸನ್‌ ಹೋಲ್ಡರ್‌ ಅವರ ಉತ್ತಮ ಆಟದಿಂದಾಗಿ ವೆಸ್ಟ್‌ಇಂಡೀಸ್‌ನ ಮೊತ್ತ 400ರ ಗಡಿ ದಾಟುವಂತಾಯಿತು. ಬಿಗು ದಾಳಿ ಸಂಘಟಿಸಿದ ಜೇಮ್ಸ್‌ ಆ್ಯಂಡರ್ಸನ್‌ 76 ರನ್ನಿಗೆ 5 ವಿಕೆಟ್‌ ಕಿತ್ತು ಗಮನ ಸೆಳೆದರು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ತಂಡವು ವಿಕೆಟ್‌ ನಷ್ಟವಿಲ್ಲದೇ 53 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ 258 ಮತ್ತು ವಿಕೆಟ್‌ ನಷ್ಟವಿಲ್ಲದೇ 53; ವೆಸ್ಟ್‌ಇಂಡೀಸ್‌ 427 (ಬ್ರಾತ್‌ವೇಟ್‌ 134, ಶೈ ಹೋಪ್‌ 147, ಬ್ಲ್ಯಾಕ್‌ವುಡ್‌ 49, ಜಾಸನ್‌ ಹೋಲ್ಡರ್‌ 43, ಆ್ಯಂಡರ್ಸನ್‌ 76ಕ್ಕೆ 5, ಬೆನ್‌ ಸ್ಟೋಕ್ಸ್‌ 63ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next