ಬೆಂಗಳೂರು: ಕೃಷ್ಣರಾಜೇಂದ್ರ ಮಾರುಕಟ್ಟೆಯನ್ನು ವಲಸೆ ಕಾರ್ಮಿಕರು ಹಾಗೂ ಹೊರ ರಾಜ್ಯಕ್ಕೆ ಹೋಗುವವರ ತಾತ್ಕಾಲಿಕ ಕ್ವಾರಂಟೈನ್‌ಗೆ ಬಿಬಿಎಂಪಿ ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಬಳಸಿ ಕೊಳ್ಳುತ್ತಿದ್ದು, ಕೃಷ್ಣರಾಜೇಂದ್ರ ಮಾರುಕಟ್ಟೆಯ ವ್ಯಾಪಾರ ಪ್ರಾರಂಭದ ಸಿದಟಛಿತೆಯ ಮೇಲೆ ಕರಿನೆರಳು ಮೂಡಿದೆ. ಜೂನ್ 8ರಿಂದ ಕೃಷ್ಣರಾಜೇಂದ್ರ ಮಾರುಕಟ್ಟೆ ವ್ಯಾಪಾರಕ್ಕೆ ಮುಕ್ತವಾಗಬೇಕಾಗಿತ್ತು
. ರಾಜಸ್ಥಾನ, ಬಿಹಾರ ಸೇರಿದಂತೆ ಹೊರ ರಾಜ್ಯಕ್ಕೆ ಹೋಗಲು ಸಿದಟಛಿವಾಗಿರುವವರಿಗೆ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ತಾತ್ಕಾಲಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ವಿವಿಧ ರಾಜ್ಯಗಳ ಪ್ರಯಾಣಿಕರ ಮಾಹಿತಿ, ಅವರ ಆರೋಗ್ಯ ಪರೀಕ್ಷೆಗೆ ಸದ್ಯ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಸಿಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಿಂದ ರಾಜಸ್ಥಾನಕ್ಕೆ ಶನಿವಾರ 1,500 ಜನ ಪ್ರಯಾಣಿಕರನ್ನು ಕಳುಹಿಸಿಕೊಡಲಾಗಿದೆ.
ಸರ್ಕಾರದ ಆದೇಶದ ಮೇರೆಗೆ ವಿವಿಧ ರಾಜ್ಯಗಳಿಗೆ ಹೋಗುವವರನ್ನು ತಾತ್ಕಾಲಿಕವಾಗಿ ಕೆ.ಆರ್. ಮಾರುಕಟ್ಟೆಯಲ್ಲಿ ಆಶ್ರಯದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆ.ಆರ್.ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಸದ್ಯ ಯಾರುಹೊರ ರಾಜ್ಯಕ್ಕೆ ಹೋಗುವವರು ಇಲ್ಲ. ವಿವಿಧ ವಾರ್ಡ್‌ಗಳಲ್ಲಿನ ಪ್ರಯಾಣಿಕರನ್ನು ಇಲ್ಲಿಗೆ ಕಳುಹಿಸುತ್ತಿರುವುದರಿಂದ ಸಮಸ್ಯೆ ಆಗುತ್ತಿದೆ. ಇಲ್ಲಿ ಉತ್ತಮ ವ್ಯವಸ್ಥೆ ಮಾಡಿರುವುದರಿಂದ ಕಳುಹಿಸುತ್ತಿದ್ದಾರೆ” ಎಂದು ಕೆ.ಆರ್ ಮಾರುಕಟ್ಟೆ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಲಸೆ ಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ ಹಾಗೂ ಬಸ್ ಹತ್ತಿಸಲು ತಾತ್ಕಾಲಿಕವಾಗಿ ಕೆ.ಆರ್. ಮಾರುಕಟ್ಟೆಯನ್ನು ಬಳಸಿಕೊಳ್ಳಲಾಗುತ್ತಿದೆ. ವಲಸೆ ಕಾರ್ಮಿಕರು ಹಾಗೂ ಹೊರ ರಾಜ್ಯಕ್ಕೆ ಹೋಗುವವರನ್ನು ತಾತ್ಕಾಲಿಕವಾಗಿ ಮಾರುಕಟ್ಟೆಯಲ್ಲಿ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ. ಒಂದೊಮ್ಮೆ ಇಲ್ಲಿ ಯಾರಿಗಾದರೂ ಸೋಂಕು ದೃಢಪಟ್ಟರೆ ಕೆ.ಆರ್. ಮಾರುಕಟ್ಟೆಯನ್ನು ಸೀಲ್‌ಡೌನ್ ಮಾಡಬೇಕಾಗಬಹುದು ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಎನ್.ಚಿದಾನಂದ ತಿಳಿಸಿದ್ದಾರೆ.