ಬೆಳಗಾವಿ: ಕೆಪಿಟಿಸಿಎಲ್ ಸಹಾಯಕ ಕಿರಿಯ ದರ್ಜೆ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿರುವ
ಬಂಧಿತ ಐವರು ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಪ್ರಮುಖ ಆರೋಪಿ ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ, ಮಾಲದಿನ್ನಿ ಗ್ರಾಮದ ಸುನೀಲ ಅಜ್ಜಪ್ಪ ಭಂಗಿ, ಗೋಕಾಕ ತಾಲೂಕಿನ ಬೆಣಚಿನಮರಡಿ ಗ್ರಾಮದ ಸಿದ್ದಪ್ಪ ಕೆಂಚಪ್ಪ ಕೊತ್ತಲ, ವೀರನಗಡ್ಡಿ ಗ್ರಾಮದ ಸಂತೋಷ ಪ್ರಕಾಶ ಮಾನಗಾಂವಿ, ಮಾಲದಿನ್ನಿ ಗ್ರಾಮದ ರೇಣುಕಾ ವಿಟuಲ ಜವಾರಿ ಎಂಬವರ ಜಾಮೀನು ಅರ್ಜಿಯನ್ನು ಇಲ್ಲಿನ 12ನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
ಆ.7ರಂದು ಜರಗಿದ ಕೆಪಿಟಿಸಿಎಲ್ ಕಿರಿಯ ದರ್ಜೆ ಸಹಾಯಕ ಹುದ್ದೆಯ ಪರೀಕ್ಷೆ ವೇಳೆ ಗೋಕಾಕದ ಪರೀûಾ ಕೇಂದ್ರದಲ್ಲಿ ಸ್ಮಾರ್ಟ್ ವಾಚ್ ಮೂಲಕ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ನಕಲು ಮಾಡುತ್ತಿರುವ ಬಗ್ಗೆ ದೂರಿನ ಮೇರೆಗೆ ತನಿಖೆ ಆರಂಭಿಸಲಾಯಿತು. ಪರೀಕ್ಷೆ ಕೇಂದ್ರದಲ್ಲಿದ್ದ ಸಿಸಿಕೆಮರಾಗಳನ್ನು ಪರಿಶೀಲಿಸಿದಾಗ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದರ ಜಾಲ ಸಿಕ್ಕಿದೆ. ಇನ್ನೂ ಅನೇಕರು ತಲೆಮರೆಸಿಕೊಂಡಿದ್ದಾರೆ.
ಗೋಕಾಕ ಡಿಎಸ್‌ಪಿ ಮನೋಜ ಕುಮಾರ ನಾಯ್ಕ, ಡಿಎಸ್‌ಪಿ ವೀರೇಶ ದೊಡಮನಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಪ್ರಕರಣದ ಹಿಂದಿರುವ ಆರೋಪಿಗಳನ್ನು ಬಂಧಿ ಸಲು ಜಾಲ ಬೀಸಲಾಗಿದೆ.